|
| ಸೆ.5-6: ಜಾಗತಿಕ ಆನಿಮೇಷನ್ ಮಹಾಸಮ್ಮೇಳನ |
| ಬೆಂಗಳೂರು, ಬುಧವಾರ, 3 ಸೆಪ್ಟೆಂಬರ್ 2008 ( 14:58 IST ) | |
ಜಾಗತಿಕ ಆನಿಮೇಷನ್ ಮಹಾಸಮ್ಮೇಳನ ಇದೇ ಸೆಪ್ಟೆಂಬರ್ 5 ಮತ್ತು 6ನೇ ತಾರೀಖಿನಂದು ಐಐಎಸ್ಇ ಜೆಎನ್‌ಟಾಟಾ ಆಡಿಟೊರಿಯಮ್‌ನಲ್ಲಿ ನಡೆಯಲಿದೆ. ಇದು ವರ್ಷದ ಆನಿಮೇಷನ್ ಹಬ್ಬ. ಬೆಂಗಳೂರು ಮಹಾನಗರದಲ್ಲಿ ನಡೆಯುತ್ತಿರುವ ಮೂರನೇ ಮಹಾ ಸಮ್ಮೇಳನವೂ ಹೌದು.
ಜಾಗತಿಕ ಆನಿಮೇಷನ್ ಮಹಾಸಮ್ಮೇಳನದಲ್ಲಿ ದೇಶ ವಿದೇಶದ ಆನಿಮೇಷನ್ ತಂತ್ರಜ್ಞರು ಭಾಗವಹಿಸಲಿದ್ದಾರೆ. ಆನಿಮೇಷನ್ ಕ್ಷೇತ್ರದ ಹೊಸ ಹೊಸ ಬೆಳವಣಿಗೆಗಳು ಸಮ್ಮೇಳನದಲ್ಲಿ ಚರ್ಚೆಗೆ ಬರಲಿವೆ. 'ಆನಿಮೇಷನ್ ಗೇಮಿಂಗ್ ವಿಷ್ಯೂವಲ್ ಎಫೆಕ್ಟ್' ಎಂಬ ಸಂದೇಶದೊಂದಿಗೆ ಆನಿಮೇಷನ್ ಸಂಘಟನೆಯಾದ ಅಭಯ್ ನೇತೃತ್ವದಲ್ಲಿ ನಡೆಯಲಿರುವ ಈ ಸಮ್ಮೇಳನ ಆನಿಮೇಷನ್ ಕ್ಷೇತ್ರದ ಹೊಸ ಹೊಸ ಬೆಳವಣಿಗೆಗಳಿಗೆ ದಿಕ್ಸೂಚಿಯಾಗಲಿದೆ.
ಈ ವಿಶೇಷ ಸಮ್ಮೇಳನದಲ್ಲಿ ಆನಿಮೇಷನ್ ಕ್ಷೇತ್ರದ ದಿಗ್ಗಜರು ಭಾಗವಹಿಸಲಿದ್ದು, ಜಾಗತಿಕ ಗುಣಮಟ್ಟದ ಆನಿಮೇಷನ್‌ನಿಂದ ಯಾವ ರೀತಿ ಭಾರತ ಪ್ರಕಾಶಿಸಬಹುದು ಎಂಬುದನ್ನು ಇಲ್ಲಿ ತಿಳಿಸಲಾಗುತ್ತದೆ. ಈ ಕ್ಷೇತ್ರದ ಪ್ರಾಯೋಗಿಕ ಅನುಭವದ ಜೊತೆಗೆ ವಿಫುಲ ಅವಕಾಶಗಳ ಬಗ್ಗೆಯೂ ತಜ್ಞರು ಮಾಹಿತಿ ನೀಡಲಿದ್ದಾರೆ. ಗೇಮಿಂಗ್ ವಿಷ್ಯೂವಲ್ ಎಫೆಕ್ಟ್ ಕ್ಷೇತ್ರದ ತಜ್ಞರು ಕೂಡಾ ತಮ್ಮ ಯಶೋಗಾಥೆಗಳನ್ನು ಇಲ್ಲಿ ಬಿಚ್ಚಿಡಲಿದ್ದಾರೆ.
ಹಿಂದಿಯ ಖ್ಯಾತ ಚಿತ್ರಗಳಾದ ತಾರೇ ಜಮೀನ್ ಫರ್, ಓಂ ಶಾಂತಿ ಓಂ, ಥೋಡಾ ಮ್ಯಾಜಿಕ್ ಥೋಡಾ ಪ್ಯಾರ್, ಲವ್ ಸ್ಟೋರಿ 2050 ಚಿತ್ರಗಳಿಗೆ ಆನಿಮೇಷನ್ ಎಫೆಕ್ಟ್ ಮಾಡಿದ ತಂತ್ರಜ್ಞರು ಈ ಸಮ್ಮೇಳನದಲ್ಲಿ ಭಾಗವಹಿಸಿ ಯಾವ ರೀತಿ ಎಫೆಕ್ಟ್ ಮಾಡಲಾಗಿದೆ ಎಂಬುದರ ಬಗ್ಗೆ ಪ್ರಾಯೊಗಿಕವಾಗಿ ತಿಳಿಸುತ್ತಾರೆ.
ಜೊತೆಗೆ ಗೇಮಿಂಗ್ ಕ್ಷೇತ್ರ ವಿಸ್ತಾರ ಹಾಗೂ ಅವುಗಳನ್ನು ಕ್ರಿಯೇಟ್ ಮಾಡುವ ಬಗ್ಗೆಯೂ ಈ ಕ್ಷೇತ್ರದ ತಜ್ಞರು ತಿಳಿಸಲಿದ್ದಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಸ್ಪರ್ಧೆಗಳು ಕೂಡಾ ನಡೆಯಲಿದೆ. ವಿದ್ಯಾರ್ಥಿಗಳು ಕ್ರಿಯೇಟ್ ಮಾಡಿದ ಆನಿಮೇಷನ್ ಮೇಲೆ ಸ್ಪರ್ಧೆ ನಡೆಯುತ್ತದೆ.
ಸಮ್ಮೇಳನದ ದಿನ ಬೆಳಗ್ಗೆ ವಿದ್ಯಾರ್ಥಿಗಳಿಗೆ ಆನಿಮೇಷನ್ ಕ್ಷೇತ್ರಕ್ಕೆ ಸಂಬಂಧಪಟ್ಟ ಒಂದು ವಿಷಯವನ್ನು ನೀಡಲಾಗುತ್ತದೆ. ಆ ವಿಷಯವನ್ನು ಮರುದಿನ ಸಮ್ಮೇಳನ ಮುಗಿಯುವ ಮೊದಲು ಯಶಸ್ವಿಯಾಗಿ ಮಾಡಿ ಮುಗಿಸಿದರೆ ಆ ವಿದ್ಯಾರ್ಥಿಗೆ ಬಹುಮಾನ ನೀಡಲಾಗುತ್ತದೆ. ದೊಡ್ಡ ಕಂಪೆನಿಯಲ್ಲಿ ಉದ್ಯೋಗಾವಕಾಶವನ್ನು ಕೂಡಾ ಬಹುಮಾನ ರೂಪದಲ್ಲಿ ನೀಡುವ ಸಾಧ್ಯತೆಗಳಿರುತ್ತದೆ. ಈ ಸಮ್ಮೇಳನ ಆನಿಮೇಷನ್ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರಿಯೇಟಿವ್ ಆಗಿ ಆನಿಮೇಷನ್ ತಯಾರಿಸುವುದು ಹೇಗೆ ಎಂಬುದನ್ನು ಕೂಡಾ ಇಲ್ಲಿ ವಿವರಿಸಲಾಗುವುದು. ಜೊತೆಗೆ ಸಾಪ್ಟ್ ವೇರ್, ಹಾರ್ಡ್ ವೇರ್ ಹಾಗೂ ಇತರ ಕಂಪೆನಿಗಳು ಆನಿಮೇಷನ್‌ಗೆ ಸಂಬಂಧಿಸಿದ ತಮ್ಮ ತಯಾರಿಕೆ ಹಾಗೂ ಹೊಸ ತಂತ್ರಜ್ಞಾನಗಳನ್ನು ಕೂಡಾ ಇಲ್ಲಿ ಪ್ರದರ್ಶಿಸಲಿವೆ.
ಆನಿಮೇಷನ್ ಕ್ಷೇತ್ರದಲ್ಲಿ ಖ್ಯಾತರೆನಿಸಿಕೊಂಡವರು ಇಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಪ್ರಶಸ್ತಿ ಪಡೆದಂತಹ ಆನಿಮೇಷನ್ ತಯಾರಿಸಿ ಲಕ್ಷಾಂತರ ಮಂದಿಯ ಮನ ಗೆದ್ದ ಮಂದಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನ ಕಲಿಕೆಯ ಜೊತೆಗೆ ಆನಿಮೇಷನ್ ವಿದ್ಯಾರ್ಥಿಗಳಿಗೆ ಇದೊಂದು ಪ್ರೇರಣೆ ಕೂಡಾ ಆಗಲಿದೆ.
ಎರಡು ದಿನ ನಡೆಯುವ ಸಮ್ಮೇಳನದಲ್ಲಿ ಆನಿಮೇಷನ್ ಕ್ಷೇತ್ರದ ಶೆ.100ರಷ್ಟು ಪ್ರಾಯೋಗಿಕ ಅನುಭವ ಪಡೆಯಲು ಸಾಧ್ಯ. ಆನಿಮೇಷನ್ ಕ್ಷೇತ್ರದ ಅಗ್ರಗಣ್ಯರು ವಿಚಾರಗೋಷ್ಠಿ ಹಾಗೂ ನೇರ ಸಂವಾದ ನಡೆಸುವುದರೊಂದಿಗೆ ಆನಿಮೇಷನ್ ಸಿನಿಮಾ ತಯಾರಿಕೆ, ವಿಎಫ್ಎಕ್ಸ್ ಹಾಗೂ ಗೇಮಿಂಗ್‌ಳ ಬಗ್ಗೆ ಇಲ್ಲಿ ಚರ್ಚೆ ನಡೆಸಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ರಘು ದೀಕ್ಷಿತ್ ಅವರ ಸಂಗೀತಕ್ಕೆ ನಟ ಸುದೀಪ್ ಕೂಡಾ ತಲೆದೂಗಿದ್ದಾರೆ. ಸುದೀಪ್ ತಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಚಿತ್ರವೊಂದಕ್ಕೆ ರಘು ದೀಕ್ಷಿತ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಒಬ್ಬ ಉತ್ತಮ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಸಂದೇಹವಿಲ್ಲವೆನ್ನುತ್ತಾರೆ ಸುದೀಪ್. |
| |
|
|
|
|
|
|
|