ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕೆಪಿಸಿಸಿ ಅಧ್ಯಕ್ಷಗಿರಿ: ಬಿರುಸುಗೊಂಡ ಲಾಬಿ
ಬೆಂಗಳೂರು, ಬುಧವಾರ, 3 ಸೆಪ್ಟೆಂಬರ್ 2008   ( 13:23 IST )
ಕರ್ನಾಟಕದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗಾಗಿನ ಸ್ಪರ್ಧೆ ತೀವ್ರಗೊಂಡಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಹೆಸರು ಘೋಷಿಸುವ ಸಾಧ್ಯತೆಗಳಿವೆ.

ಜೆಡಿಎಸ್‌ನಿಂದ ವಲಸೆ ಬಂದಿರುವ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿರುವ ಮಧ್ಯೆಯೇ, ಪಕ್ಷದಲ್ಲಿನ ಸಿದ್ಧು ವಿರೋಧಿ ಬಣ ಕೂಡ ದೆಹಲಿಗೆ ತೆರಳಿ, ಪಕ್ಷದಲ್ಲಿ ದೀರ್ಘಕಾಲದಿಂದ ಇರುವವರನ್ನೇ ಪರಿಗಣಿಸುವಂತೆ ಕೇಂದ್ರೀಯ ನಾಯಕರ ಮೇಲೆ ಒತ್ತಡ ಹೇರಿದೆ.

ಜೂನ್ ತಿಂಗಳಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕನಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಗೊಂಡ ಬಳಿಕ ಅವರು ಕೆಪಿಸಿಸಿ ಅಧ್ಯಕ್ಷಗಿರಿಗೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ತೆರವಾಗಿತ್ತು. ಸಿದ್ದರಾಮಯ್ಯ ಹೆಸರು ಈ ಪದವಿಗೆ ಕೇಳಿಬರುತ್ತಿರುವಂತೆಯೇ, ಪಕ್ಷದಲ್ಲಿ ಅಸಮಾಧಾನದ ಹೊಗೆ ಏಳಲಾರಂಭಿಸಿತ್ತು. ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್ ನೇತೃತ್ವದಲ್ಲಿ ಸಿದ್ದರಾಮಯ್ಯ ಅಭ್ಯರ್ಥಿತನಕ್ಕೆ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ಅವರಿಬ್ಬರೂ ಪಕ್ಷಾಧ್ಯಕ್ಷೆ ಸೋನಿಯಾರನ್ನು ಭೇಟಿಯಾಗಿ ಸಿದ್ದರಾಮಯ್ಯರಿಗೆ ಹುದ್ದೆ ಕೊಡದಂತೆ ಬಲವಾದ ಲಾಬಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಸಿದ್ದರಾಮಯ್ಯ ಅವರು ದೆಹಲಿಯಿಂದ ಬೆಂಗಳೂರಿಗೆ ಮರಳಿದ್ದು, ಅವರ ಮುಖದಲ್ಲಿ ವಿಶ್ವಾಸದ ಕಳೆಯಿತ್ತು ಎಂಬುದನ್ನು ಮೂಲಗಳು ಗುರುತಿಸಿವೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಂತೂ ಕೆಪಿಸಿಸಿ ಅಧ್ಯಕ್ಷ ಪಟ್ಟದ ಆಸೆ ಕೈಬಿಟ್ಟಂತಿದೆ. ಇನ್ನುಳಿದವರು ಮಾಜಿ ಸಚಿವ ಆರ್.ವಿ.ದೇಶಪಾಂಡೆ. ಅವರೊಂದಿಗೂ ಸೋನಿಯಾ ಗಾಂಧಿ ಮಂಗಳವಾರ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಮತ್ತು ದೇಶಪಾಂಡೆ ಅಭ್ಯರ್ಥಿತನದ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿದೆ.

ಕರ್ನಾಟಕದ ಉಸ್ತುವಾರಿ ಪೃಥ್ವಿರಾಜ್ ಚೌಹಾಣ್ ಅವರ ಒಲವು ಸಿದ್ದು ಕಡೆಗಿದೆ. ಆದರೆ ಹೈಕಮಾಂಡ್ ನಡವಳಿಕೆಗಳಿಂದ ಅಸಮಾಧಾನಗೊಂಡಿರುವ ಸಿದ್ದರಾಮಯ್ಯ, ಕೆಲವೊಂದು ಷರತ್ತುಗಳನ್ನೂ ಮುಂದಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಳೆಯ ಆರ್ಭಟ: ಕಟ್ಟಡ ಕುಸಿದು 2 ಸಾವು
ಕಿಲ್ಲರ್ ಬಿಎಂಟಿಸಿಗೆ ಇನ್ನೋರ್ವ ಬಲಿ
ಮುಂದುವರಿದ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ
ಹೊಗೇನಕಲ್ ಯೋಜನೆಗೆ ಬೆಂಬಲಿಸಲು ರಾಮದಾಸ್ ಕರೆ
ಆರೋಪಿ ಅತುಲ್‌ಗೆ ಹೈಕೋರ್ಟ್ ಜಾಮೀನು
ಧೂಮಪಾನ ನಿಷೇಧ ಅ. 2ರಿಂದ ಜಾರಿ: ರಾಮ್‌ದಾಸ್
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ನೂರು ದಿನದಲ್ಲಿ ಸಾವಿರ ತಪ್ಪು: ಖರ್ಗೆ ಕಿಡಿ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನದ ಆಡಳಿತದಲ್ಲಿ ಸಾವಿರ ತಪ್ಪುಗಳನ್ನು ಎಸಗಿದೆ...
ಮುಂದುವರಿದ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ
ಆರೋಪಿ ಅತುಲ್‌ಗೆ ಹೈಕೋರ್ಟ್ ಜಾಮೀನು
ಮನರಂಜನೆ
ಚಿತ್ರ ಸುದ್ದಿ - ರಘು ದೀಕ್ಷಿತ್ ಅವರ ಸಂಗೀತಕ್ಕೆ ನಟ ಸುದೀಪ್ ಕೂಡಾ ತಲೆದೂಗಿದ್ದಾರೆ. ಸುದೀಪ್ ತಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಚಿತ್ರವೊಂದಕ್ಕೆ ರಘು ದೀಕ್ಷಿತ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಒಬ್ಬ ಉತ್ತಮ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಸಂದೇಹವಿಲ್ಲವೆನ್ನುತ್ತಾರೆ ಸುದೀಪ್.
ಮುಂದೆ ಓದಿ|ಮತ್ತಷ್ಟು...