|
| ಆಪರೇಷನ್ ಹಸ್ತದ ವಿರುದ್ಧ ಸದಾನಂದಗೌಡ ಕಿಡಿ |
| ಬೆಂಗಳೂರು, ಸೋಮವಾರ, 1 ಸೆಪ್ಟೆಂಬರ್ 2008 ( 19:19 IST ) | |
ಆಪರೇಷನ್ ಕಮಲವನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿರುದ್ಧ ಈಗ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.ನಗರದಲ್ಲಿ ಇಂದು(ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ, ಮೊಯ್ಲಿಯವರಿಗೆ ಸಾಧ್ಯವಾದರೆ 15ದಿನಗಳ ಒಳಗಾಗಿ ಆಪರೇಷನ್ ಹಸ್ತ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಈ ಕುರಿತು ಬಿಜೆಪಿಗೆ ಟೀಕೆ ಮಾಡುವ ಮುನ್ನ ಮೊಯ್ಲಿ ಅವರು ತಮ್ಮ ಪಕ್ಷದ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡುವ ಅಗತ್ಯವಿದೆ. ಅಧ್ಯಕ್ಷರನ್ನೇ ಆಯ್ಕೆ ಮಾಡಲು ಹಿಂದು ಮುಂದೆ ನೋಡುತ್ತಿರುವ ಕೆಪಿಸಿಸಿಗೆ ಆಪರೇಷನ್ ಹಸ್ತ ಮಾಡುವ ಅರ್ಹತೆಯಾದರೂ ಇದೆಯಾ ಎಂದು ಅವರು ಪ್ರಶ್ನಿಸಿದರು.
ಆಪರೇಷನ್ ಕಮಲ ಕಾರ್ಯಾಚರಣೆಯ ಅಗತ್ಯತೆ ಮೇರೆಗೆ ಬಿಜೆಪಿ ಕೈಗೊಂಡಿರುವ ಈ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದೆ. ಆದರೆ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮಾಡಹೊರಟಿರುವ ಆಪರೇಷನ್ ಹಸ್ತ ಯಾವ ರೀತಿಯಲ್ಲೂ ಯಶ ಕಾಣದು ಎಂದು ಅವರು ಭವಿಷ್ಯ ನುಡಿದರು.
ರಾಜ್ಯದಲ್ಲಿ ಐದು ವರ್ಷಗಳ ಕಾಲ ಸುಭದ್ರ ಆಡಳಿತ ನಡೆಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರಕ್ಕೆ ಆಪರೇಷನ್ ಕಮಲದ ಅಗತ್ಯವಿತ್ತು ಎಂದು ಅವರು ಸಮರ್ಥನೆ ನೀಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮನಸ್ಸಿನ ಬಯಕೆ ಗಳಿಸಲು ಕೌಟುಂಬಿಕ ಸಂಬಂಧಗಳು ಪ್ರಮುಖ ಪಾತ್ರವಹಿಸುತ್ತವೆ. ಒಳ್ಳೆಯ ಕ್ಷಣಗಳಿಗಾಗಿ ತವಕಿಸುವ ನಿಮ್ಮ ಆಸೆ ಇಂದು ಮೇರುಮಟ್ಟಕ್ಕೇರುತ್ತದೆ. ಹೊಸ ಕೆಲಸ ಅಥವಾ ಯೋಜನೆ ಆರಂಭಿಸಲು ಸಂದರ್ಭಗಳು ಏರ್ಪಡುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಾಯಕ ಬಸ್ ಚಾಲಕ. ಇವನು ಮಹಾರಾಣಿಯಂತಿರುವ ಹುಡುಗಿಯನ್ನು ಮದುವೆಯಾಗಬೇಕೆಂದು ಕನಸಿನ ಗೋಪುರ ಕಟ್ಟಿರುತ್ತಾನೆ. ಒಂದು ದಿನ ಆಕಸ್ಮಿಕವಾಗಿ ಈತನ ಕನಸಿನ ಕನ್ಯೆ ಬಸ್ಸು ಹತ್ತುತ್ತಾಳೆ. ನಾಯಕ ಕ್ಲೀನ್ ಬೋಲ್ಡ್. ಇಬ್ಬರಲ್ಲೂ ಪ್ರೀತಿ ಉಕ್ಕುತ್ತದೆ |
| |
|
|
|
|
|
|
|