ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಬರಗಾಲದಲ್ಲಿ ಮುಖ್ಯಮಂತ್ರಿಗಳ ಪ್ರವಾಸ: ಖರ್ಗೆ ಲೇವಡಿ
ಗುಲ್ಬರ್ಗಾ, 28 ಆಗಸ್ಟ್ 2008   ( 18:34 IST )
ರಾಜ್ಯದಲ್ಲಿ ಒಂದೆಡೆ ಬರಗಾಲ, ಇನ್ನೊಂದೆಡೆ ಪ್ರವಾಹದಿಂದ ಜನ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿದೇಶ ಪ್ರವಾಸ ಕೈಗೊಂಡಿರುವುದು ಅವರಿಗೆ ರಾಜ್ಯದ ಬಗ್ಗೆ ಇರುವ ಕಳಕಳಿ ಎತ್ತಿ ತೋರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ನಗರದಲ್ಲಿ ಇಂದು(ಗುರುವಾರ) ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬರಗಾಲ ಹಾಗೂ ಪ್ರವಾಹದಿಂದ ಸಾಕಷ್ಟು ಹಾನಿ ಸಂಭವಿಸಿದೆ. ಈ ಬಗ್ಗೆ ಒದಗಿಸಬೇಕಾದ ಸೂಕ್ತ ರಕ್ಷಣಾ ಕಾರ್ಯ, ಪರಿಹಾರ ಕಾರ್ಯದೆಡೆಗೆ ಗಮನ ಹರಿಸದಿರುವ ಮುಖ್ಯಮಂತ್ರಿಗಳು, ವಿದೇಶ ಪ್ರಯಾಣ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಮೇರಿಕಾದಲ್ಲಿ ನಡೆಯಲಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಶಾಸಕರ ಒಡಗೂಡಿ ಮುಖ್ಯಮಂತ್ರಿ ಹೋಗುತ್ತಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.

ಈ ಪ್ರವಾಸದಿಂದ ರಾಜ್ಯಕ್ಕೆ ಬಂಡವಾಳ ಬರಲಿದೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಆದರೆ ಇಲ್ಲಿ ಸಂಪನ್ಮೂಲ ಬಳಸಿ ತೊಂದರೆಯಲ್ಲಿದ್ದವರಿಗೆ ನೆರವು ನೀಡದಿರುವ ಸರ್ಕಾರ ಅಮೆರಿಕಾದ ಬಂಡವಾಳ ತಂದು ಯಾರ ಉದ್ದಾರ ಮಾಡಲಿದೆ ಎಂದು ವ್ಯಂಗ್ಯವಾಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಲಸಿಗರಿಗೆ ಮಂತ್ರಿಗಿರಿ: ಆಂತರಿಕ ಭಿನ್ನಮತ ಬಹಿರಂಗ
ಬಾರ್ ಕೌನ್ಸಿಲ್‌ಗೆ ಹಿರೇಮಠ ರಾಜೀನಾಮೆ
ಜನಸ್ಪಂದನ ಕಾರ್ಯಕ್ರಮ: ಸದಾನಂದಗೌಡ
ವ್ಯಕ್ತಿಯೊಬ್ಬನ ಮೇಲೆ ಹಲ್ಲೆ: ಉದ್ವಿಗ್ನ ಪರಿಸ್ಥಿತಿ
ಸತತ ಮಳೆಗೆ ತತ್ತರಿಸಿದ ಉದ್ಯಾನನಗರಿ
ಬೆಳ್ಳುಬ್ಬಿಗೆ ಎಂಎಸ್ಐಎಲ್ ಅಧ್ಯಕ್ಷ ಸ್ಥಾನ
ಗ್ರಹ ಗತಿ
ದೈನಿಕ - ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ.ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ನೀವು ಹಿಂದೆ ಕಾರ್ಯಕ್ಷಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ನ್ಯಾನೋ ಕಾರು ಘಟಕಕ್ಕೆ ರಾಜ್ಯದಲ್ಲಿ ಅವಕಾಶ
ಪಶ್ಚಿಮಬಂಗಾಳದ ಸಿಂಗುರ್‌ನಲ್ಲಿ ವಿವಾದದಿಂದಾಗಿ ಟಾಟಾ ಸಣ್ಣ ಕಾರು ಯೋಜನೆಯನ್ನು ಧಾರವಾಡಕ್ಕೆ ....
ಸಂಪುಟ ಸಚಿವರಾಗಿ ಉಮೇಶ್ ಕತ್ತಿ ಪ್ರಮಾಣ ವಚನ
ಉಷ್ಣ ವಿದ್ಯುತ್ ಸ್ಥಾಪನೆ: ರೈತರ ವಿರೋಧ
ಮನರಂಜನೆ
ಚಿತ್ರ ಸುದ್ದಿ - ತೆಲುಗಿನ ಹಿಟ್ ಚಿತ್ರ 'ಉಲ್ಲಾಸಂಗಾ ಉತ್ಸಾಹಂಗಾ' ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿದ್ದಾರೆ. ಚಿತ್ರವನ್ನು ಬಿಪಿ ತ್ಯಾಗರಾಜ್ ನಿರ್ಮಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...