ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ರಾಜ್ಯದಲ್ಲಿ ವಿದ್ಯುತ್ ಅಭಾವ: ಈಶ್ವರಪ್ಪ ಆತಂಕ
ಬೆಂಗಳೂರು, ಗುರುವಾರ, 24 ಜುಲೈ 2008   ( 13:01 IST )
ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣಿಸಿರುವ ಬೆನ್ನಲ್ಲೆ ವಿದ್ಯುತ್ ಅಭಾವ ರಾಜ್ಯವನ್ನು ಕಾಡಿದೆ. ಈ ಬಗ್ಗೆ ಸ್ವತಃ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ವಿದ್ಯುತ್ ಅಭಾವದ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳುವಲ್ಲಿ ವಿಫಲವಾಗಿದೆ. ಸಭೆಯ ವೇಳೆ ಮಾತನಾಡಿದ ಈಶ್ವರಪ್ಪ, ಇನ್ನು 15 ದಿನಗಳ ಕಾಲ ಮಳೆ ಬಾರದಿದ್ದರೆ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸರ್ವ ಪ್ರಯತ್ನ ನಡೆಸುತ್ತದೆ. ಆದರೆ ಮಳೆ ಬಾರದೆ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾದರೆ ದೇವರೇ ಕಾಪಾಡಬೇಕು ಎಂದು ಕಳವಳ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದ್ದು, ಲೋಡ್ ಶೆಡ್ಡಿಂಗ್ ಪ್ರಮಾಣ ಇನ್ನಷ್ಟು ಹೆಚ್ಚಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ ಪ್ರತಿಪಕ್ಷಗಳು, ಹೊರ ರಾಜ್ಯ ಹಾಗೂ ಖಾಸಗಿ ಕಂಪೆನಿಗಳಿಂದ ವಿದ್ಯುತ್ ಖರೀದಿಸಿ, ಲೋಡ್ ಶೆಡ್ಡಿಂಗ್ ತಪ್ಪಿಸುವಂತೆ ಆಗ್ರಹಿಸಿದವು.

ಇದೇ ವೇಳೆ ಪ್ರತಿದಿನ 100 ದಶಲಕ್ಷ ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ನೀಡುವ ಪರಿಸ್ಥಿತಿ ರಾಜ್ಯದಲ್ಲಿಲ್ಲ ಎಂದು ಈಗಾಗಲೇ ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದು, ಸದ್ಯದ ಮಟ್ಟಿಗೆ ಶೇ. 20ರಷ್ಟು ವಿದ್ಯುತ್ ಕೊರತೆ ರಾಜ್ಯದಲ್ಲಿ ಕಂಡು ಬಂದಿದೆ. ಅದಕ್ಕಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಮುಂದುವರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಸಾಪ ಅಧ್ಯಕ್ಷ ಚುನಾವಣೆ:7 ನಾಮಪತ್ರ ಅಂಗೀಕಾರ
ಮೇಲ್ಮನೆ ಸಭಾಪತಿ ಚುನಾವಣೆ: ಸಂಪುಟದಲ್ಲಿ ನಿರ್ಧಾರ
ಕಾಂಗ್ರೆಸ್ ವಿಜಯೋತ್ಸವ, ಬಿಜೆಪಿ ಪ್ರತಿಭಟನೆ
ಕಲ್ಲುಗಣಿ ಸ್ಫೋಟದಲ್ಲಿ ಮೃತಗೊಂಡ ಮಹಿಳೆ
ಪೇದೆಗಳಿಗೆ ಇರಿದು ತಪ್ಪಿಸಿಕೊಂಡ ಅಪರಾಧಿ
ರಾಜ್ಯದಲ್ಲಿ ಹೆಚ್ಚಲಿರುವ ವಿದ್ಯುತ್ ಕಡಿತ
ಗ್ರಹ ಗತಿ
ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
pti
 
ಸಿಪಿಎಂನಿಂದ ಸೋಮನಾಥ್ ಚಟರ್ಜಿ ಉಚ್ಚಾಟನೆ
ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿಯಲ್ಲಿ ಪಕ್ಷದ ಆದೇಶವನ್ನು....
ವಿಶ್ವಾಸಮತ-ಇಬ್ಬರು ಎನ್‌ಡಿಎ ಸಂಸದರು ನಾಪತ್ತೆ
ಬಿಜೆಪಿ ವಿಪ್ ಉಲ್ಲಂಘನೆ: 8 ಸದಸ್ಯರ ಉಚ್ಚಾಟನೆ
ಮನರಂಜನೆ
ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ.
ಮುಂದೆ ಓದಿ|ಮತ್ತಷ್ಟು...