|
| ಕಲ್ಲುಗಣಿ ಸ್ಫೋಟದಲ್ಲಿ ಮೃತಗೊಂಡ ಮಹಿಳೆ |
| ಬೆಂಗಳೂರು, ಗುರುವಾರ, 24 ಜುಲೈ 2008 ( 12:36 IST ) | |
ಚಿಕ್ಕಜಾಲ ಸಮೀಪದ ಕಲ್ಲಿನ ಕ್ವಾರಿಯಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ, ತಮಿಳುನಾಡಿಗೆ ಸೇರಿದ ಒಬ್ಬ ಮಹಿಳೆ ಮತ್ತು ಇತರ 15 ಮಂದಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ.
ಬುಧವಾರ ಸಂಜೆ 4.10ರ ಸುಮಾರಿನಲ್ಲಿ ಬೆಟ್ಟ ಹಲಸೂರಿನ ಸಮೀಪದಲ್ಲಿ ಈ ಘಟನೆಯು ಸಂಭವಿಸಿತು. ಇಲ್ಲಿನ ಕಲ್ಲು ಗಣಿಯಲ್ಲಿ ಜಿಲೆಟಿನ್‌ಗಳನ್ನು ಇಟ್ಟಿದ್ದು, ಅವುಗಳನ್ನು ಸಂಜೆ 5ರಿಂದ 6 ಗಂಟೆಯ ನಡುವೆ ಸ್ಫೋಟಿಸುವಂತೆ ನಿಗದಿಗೊಳಿಸಲಾಗಿತ್ತು.
ಇದೇ ಕಾರಣದಿಂದ ಇಲ್ಲಿ ಇಟ್ಟಿದ್ದ ಕಲ್ಲುಗಳನ್ನು ಸಾಗಿಸಲು ವ್ಯವಸ್ಥೆ ಮಾಡಲಾಗಿತ್ತು ಮತ್ತು ಈ ಪ್ರದೇಶವನ್ನು ಬಿಟ್ಟು ತೆರಳಲು ಕೂಲಿಕಾರರು ಸಿದ್ಧರಾಗಿದ್ದರು. ಆದರೆ ನಿಗದಿತ ಸಮಯಕ್ಕಿಂತಲೂ ಮೊದಲೇ ಸ್ಫೋಟಗೊಂಡ ಜಿಲೆಟಿನ್ ಅನಾಹುತಕ್ಕೆ ಕಾರಣವಾಯಿತು.
ಈ ದುರ್ಘಟನೆಯಲ್ಲಿ ತಮಿಳುನಾಡಿಗೆ ಸೇರಿದ ಪಳನಿಯಮ್ಮ(32) ಎನ್ನುವ ಮಹಿಳೆ ಮೃತಳಾಗಿದ್ದಾಳೆ. ಅದೇ ರೀತಿ ವೆಂಕಟಾಚಲಯ್ಯ(31) ಎನ್ನುವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ. ಆತನನ್ನು ಸಮೀಪದ ದೇವಸಂದ್ರದ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನೆಯಲ್ಲಿ ಇನ್ನೂ 14 ಮಂದಿಯು ಗಾಯಗೊಂಡಿದ್ದು, ಅವರಲ್ಲಿ ಏಳು ಮಂದಿಯ ಸ್ಥಿತಿಯು ಗಂಭೀರವಾಗಿದ್ದು ಅವರನ್ನು ಹತ್ತಿರವಿರುವ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | pti |
| | |
| |
|
|
|
|
|
| ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ. |
| |
|
|
|
|
|
|
|