|
| ಮಳೆಗೆ ಅವ್ಯವಸ್ಥೆ ಆಗರವಾಗುವ ಮಾರುಕಟ್ಟೆ |
| ಬೆಂಗಳೂರು, ಬುಧವಾರ, 23 ಜುಲೈ 2008 ( 17:07 IST ) | |
ಇತ್ತೀಚಿನ ಮಳೆಯು ಮಾರುಕಟ್ಟೆ ಪ್ರದೇಶವನ್ನು ಸಾಕಷ್ಟು ಹಾನಿಗೆ ಒಳಪಡಿಸಿರುವುದರ ಜೊತೆಗೆ ಅಲ್ಲಿನ ಅವ್ಯವಸ್ಥೆಯನ್ನು ಸಹ ಎತ್ತಿ ತೊರಿಸುತ್ತಿದೆ. ಇಲ್ಲಿ ಮಳೆ ಬಂದಲ್ಲಿ ಕೇವಲ ಗ್ರಾಹಕನಿಗೆ ಮಾತ್ರವೇ ಅಲ್ಲದೇ ಅಂಗಡಿಗಳ ಮಾಲಿಕರಿಗೂ ತೊಂದರೆಯಾಗುತ್ತಿದೆ.
ಗ್ರಾಹಕ ಒಂದು ರೀತಿಯಲ್ಲಿ ಸ್ವಲ್ಪ ಮಳೆ ನಿಲ್ಲುತ್ತಿದ್ದಂತೆಯೇ ಹೊರಟುಬಿಡುತ್ತಾನೆ. ಆದರೆ ಅಂಗಡಿಯವನಿಗೆ, ತನ್ನ ಅಂಗಡಿಗೆ ನುಗ್ಗಿದ ನೀರನ್ನು ಹೊರ ಹಾಕುವುದರ ಜೊತೆ, ಅಂಗಡಿಯನ್ನು ಮತ್ತಷ್ಟು ಮಟ್ಟಸವನ್ನಾಗಿ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ.
ವಸಂತ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸುಮಾರು 70 ಅಂಗಡಿಗಳವರ ಪಾಡು ಸಹ ಇದೇ ಆಗಿದ್ದು, ಚರಂಡಿಗಳಿಂದ ನುಗ್ಗುವ ನೀರು ಸಹ ಇವರಿಗೆ ಹೆಚ್ಚಿನ ಹಾನಿಯನ್ನು ಉಂಟು ಮಾಡುತ್ತದೆ.
ಹಲವಾರು ಸಂದರ್ಭಗಳಲ್ಲಿ ತರಕಾರಿ ಮತ್ತು ಇತರೆ ಸಾಮಗ್ರಿಗಳನ್ನು ನಾಶಗೊಳಿಸುವುದಲ್ಲದೇ, ಕೆಲವೊಮ್ಮೆ ಬೀಸುವ ವಿಪರೀತ ಗಾಳಿಯ ರಭಸ ಅಂಗಡಿಯನ್ನು ಮತ್ತೆ ಸ್ಥಾಪಿಸಿಕೊಳ್ಳುವಂತೆ ಮಾಡುತ್ತದೆ.
ಈ ಬಗ್ಗೆ ನಗರ ಪಾಲಿಕೆಗೆ ದೂರು ನೀಡಿದಲ್ಲಿ, ಅವರು ಈಗ ಇರುವ ಸ್ಥಳದಿಂದ ಅಂಗಡಿಗಳನ್ನು ಸ್ಥಳಾಂತರಿಸಿ ಎಂದು ತಿಳಿಸುತ್ತಾರೆ ಇಲ್ಲಿನ ಅಂಗಡಿಯೊಂದರ ಮಹಿಳೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|