|
| ಬಗೆಹರಿಯದ ಎಚ್ಎಎಲ್ ಗೊಂದಲ |
| ಬೆಂಗಳೂರು, 23 ಜುಲೈ 2008 ( 16:41 IST ) | |
ವಿಮಾನ ನಿಲ್ದಾಣವು ದೇವನ ಹಳ್ಳಿಗೆ ಸ್ಥಳಾಂತರಗೊಂಡು ವಿಮಾನಘಲು ತನ್ನ ಹಾರಾಟವನ್ನು ನಡೆಸುತ್ತಿದೆ. ಇದೇ ಸಂದರ್ಭದಲ್ಲಿ, ಎಚ್‌ಎಎಲ್ ಗೊಂದಲ ಮತ್ತೆ ಮುಂದುವರೆದಿದೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಸಿಬ್ಬಂದಿ ಮತ್ತು ರಿಯಲ್ ಎಸ್ಟೇಟ್ ಉದ್ದಿಮೆದಾರರು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು(ಎಎಐ), ಬೆಂಗಳೂರಿನಲ್ಲಿ ಎರಡು ವಿಮಾನ ನಿಲ್ದಾಣಗಳು ಇದ್ದರೆ ಸೂಕ್ತ ಎಂದು ವಾದಿಸಿದೆ. ಈ ಕುರಿತಾದ ವರದಿಯನ್ನು ಕಳೆದ ತಿಂಗಳು ನಾಗರೀಕ ವಿಮಾನ ಯಾನ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಎಎಐ ಈ ಬಗ್ಗೆ ಆಶಾವಾದವನ್ನು ತಳೆದಿದ್ದು, ಕೋರ್ಟ್ ಏರ್‌ಪೋರ್ಟ್ ಕುರಿತಂತೆ ನೀಡಲಾಗಿದ್ದ ತೀರ್ಪನ್ನು ಬದಲಿಸುವ ಅವಕಾಶವಿದೆ ಎನ್ನಲಾಗಿದೆ. ಆದರೆ ಪ್ರಾಧಿಕಾರವು ಹೆಚ್ಚಿನ ಸಮಯವನ್ನು ಕೇಳಿದ್ದು, ಬಹುಷಃ ಆಗಸ್ಟ್ 22ರ ವೇಳೆಗೆ ಇದು ಸಾಧ್ಯವಾಗಬಹುದು ಎನ್ನಲಾಗಿದೆ. ಇನ್ನು ರಿಯಲ್ ಎಸ್ಟೇಟ್ ಧಣಿಗಳು ಎಚ್ಎಎಲ್ ಸುತ್ತ ಮತ್ತ ಸಾಕಷ್ಟು ಜಮೀನನ್ನು ಹೊಂದಿದ್ದು, ಇದರಿಂದ ಹೆಚ್ಚಿನ ಲಾಭವನ್ನು ಗಳಿಸಬಹುದು ಎನ್ನುವ ನಿರೀಕ್ಷೆಗೆ ಹೊಡೆತ ಬಿದ್ದಿದೆ. ಇದು ಸಹ ಅವರು ವೈಮಾನಿಕ ಪ್ರಾಧಿಕಾರದ ಮೇಲೆ ಒತ್ತಡವನ್ನು ಹೇರಲು ಕಾರಣವಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | pti |
| | |
| |
|
|
|
|
|
| ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ. |
| |
|
|
|
|
|
|
|