ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ರೇಸ್‌ಕೋರ್ಸ್ ಬೇರೆಡೆ ಸ್ಥಳಾಂತರಕ್ಕೆ ಪರಿಶೀಲನೆ
ಬೆಂಗಳೂರು, ಬುಧವಾರ, 23 ಜುಲೈ 2008   ( 16:09 IST )
ನಗರದ ಹೃದಯ ಭಾಗದಲ್ಲಿರುವ ರೇಸ್‌ಕೋರ್ಸ್‌ನ್ನು ಸ್ಥಳಾಂತರ ಮಾಡಲು ಸರ್ಕಾರ ಪರಿಶೀಲನೆ ಮಾಡುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಸಿ.ಎಂ.ಉದಾಸಿ ಹೇಳಿದ್ದಾರೆ.

ನಗರದ ಯಾವ ಪ್ರದೇಶಕ್ಕೆ ಇದನ್ನು ಸ್ಥಳಾಂತರ ಮಾಡಬೇಕು ಎಂಬುದರ ಬಗ್ಗೆ ಆದಷ್ಟು ಬೇಗ ತೀರ್ಮಾನಿಸಲಾಗುವುದು. ಹಳೆ ಜೈಲು ಇದ್ದ ಸ್ಥಳದಲ್ಲಿ ಫ್ರೀಡಂ ಪಾರ್ಕ್ ನಿರ್ಮಾಣವಾಗುತ್ತಿದೆ. ಇದರ ಮೊದಲ ಹಂತವನ್ನು ನವೆಂಬರ್ 1ರಂದು ಉದ್ಘಾಟಿಸಲಾಗುವುದು ಎಂದರು.

ಪಾರ್ಕ್‍ನ ಎರಡನೇ ಹಂತದ ಕಾಮಗಾರಿಯನ್ನು ಕೂಡಾ ಆದಷ್ಟು ಬೇಗ ಕೈಗೊಳ್ಳಲಾಗುವುದು ಎಂದು ಸಚಿವ ಉದಾಸಿ ಹೇಳಿದರು. ಪಾರ್ಕ್ ಸ್ಥಾಪನೆಗೆ 2006 ರಲ್ಲಿ 751 ಲಕ್ಷ ನೀಡಲಾಗಿತ್ತು. ಈಗ ಅದು 1027 ಲಕ್ಷ ರೂ ಗೆ ಏರಿಕೆಯಾಗಿದೆ.

ಭೂಮಿ ಹರಾಜು ಇಲ್ಲ: ದೇವನಹಳ್ಳಿ ಬಳಿ ವಿಮಾನ ನಿಲ್ದಾಣಕ್ಕೆಂದು ವಶಪಡಿಸಿಕೊಂಡು ಹೆಚ್ಚುವರಿಯಾದ ಭೂಮಿಯನ್ನು ಹರಾಜು ಮಾಡಲಾಗುವುದಿಲ್ಲ. ಬದಲಾಗಿ ಖಾಸಗಿ ಕಂಪೆನಿಗಳಿಗೆ ಗುತ್ತಿಗೆ ನೀಡಲಾಗುವುದು ಎಂದು ಸಚಿವ ಜನಾರ್ದನ ರೆಡ್ಡಿ ತಿಳಿಸಿದರು.

ಇದರಿಂದ ಸರ್ಕಾರಕ್ಕೆ ಆದಾಯ ಹೆಚ್ಚುವುದರ ಜೊತೆಗೆ ಖಾಸಗಿ ಕಂಪೆನಿಗಳು ವ್ಯವಹಾರ ಆರಂಭಿಸಿದರೆ ಹೆಚ್ಚು ಉದ್ಯೋಗವು ಸೃಷ್ಟಿಯಾಗುತ್ತದೆ ಎಂದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಡಿಸೇಲ್ ಕೊರತೆಗೆ ಕಾರಣವಾದ ವಿದ್ಯುತ್ ಕಡಿತ
ಸಾಂಗ್ಲಿಯಾನ ಕಚೇರಿ ಮೇಲೆ ಕಲ್ಲು ತೂರಾಟ
ಗಣ್ಯರ ಸಂಚಾರ ಕಿರಿಕಿರಿಯಿಂದ ಸಾರ್ವಜನಿಕರಿಗೆ ಮುಕ್ತಿ
ಉ.ಕ.ದಲ್ಲಿ ಮಳೆ: ರೈತರ ಮುಖದಲ್ಲಿ ಸಂತಸದ ಕಳೆ
ತಮಿಳರಿಂದ ಶಾಸ್ತ್ರೀಯ ಭಾಷೆಗೆ ಅಡ್ಡಿ: ಚಿಮ‌ೂ
ನೀವೇ ಕಸ ವಿಲೇವಾರಿ ಮಾಡಿ: ಬಿಬಿಎಂಪಿ ತಿರುಗೇಟು
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...