|
| ಡೀಸೆಲ್ ಕೊರತೆಗೆ ಕಾರಣವಾದ ವಿದ್ಯುತ್ ಕಡಿತ |
| ಬೆಂಗಳೂರು, 23 ಜುಲೈ 2008 ( 15:57 IST ) | |
ಬೆಂಗಳೂರಿನಲ್ಲಿ ಉಂಟಾಗಿರುವ ಡೀಸೆಲ್ ಕೊರತೆಗೆ ಮುಖ್ಯ ಕಾರಣ ವಿದ್ಯುತ್ ಕಡಿತವೇ ಆಗಿದೆ. ಯಾವುದೇ ನಿಯಮಿತ ಸಮಯವಿಲ್ಲದೇ ಕೈಕೊಡುವ ವಿದ್ಯುತ್‌ನಿಂದಾಗಿ ನಾಗರೀಕರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೈಗಾರಿಕೆಗಳಂತೂ ವಿದ್ಯುತ್ತನ್ನೇ ನಂಬಿ ತಮ್ಮ ಉದ್ಯಮವನ್ನು ನಡೆಸುತ್ತಿವೆ. ಆದರೆ ಕೈಕೊಡುತ್ತಿರುವ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಅವರು ಮೊರೆ ಹೋಗಿರುವುದು ಡೀಸೆಲ್‌ಗೆ.
ತಮ್ಮ ಜನರೇಟರ್‌ಗಳನ್ನು ಚಾಲೂ ಇಡುವುದಕ್ಕಾಗಿ ಬೇಕಾಗಿರುವ ಡೀಸೆಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಲು ಇವು ಆರಂಭಿಸಿವೆ. ಇದು ಡೀಸೆಲ್‌ನ ಕೊರತೆಗೆ ಕಾರಣವಾಗಿ ಪರಿಣಮಿಸಿದೆ.
ನಗರದಲ್ಲಿ ಒಂದು ದಿನಕ್ಕೆ 1800 ಕಿಲೋಲೀಟರ್ ಪ್ರಮಾಣದಷ್ಟು ಡೀಸೆಲ್ ಅಗತ್ಯವಿದೆ.ಆದರೆ ಕಳೆದ ನಾಲ್ಕು ದಿನಗಳಿಂದ ಹೆಚ್ಚಳಗೊಂಡಿರುವ ಡೀಸೆಲ್ ಬಳಕೆಯನ್ನು ಪೂರೈಸಲು ಕಂಪನಿಗಳು ಹೆಣಗಾಡುತ್ತಿವೆ,
ಡೀಸೆಲ್ ಉಪಯೋಗಿಸುವಿಕೆ ಮಾಮೂಲಿ ಇದ್ದುದ್ದಕ್ಕಿಂತಲೂ ಶೇ.40ರಷ್ಟು ಬಳಕೆಯು ಹೆಚ್ಚಳಗೊಂಡಿರುವುದೇ ಇದಕ್ಕೆ ಕಾರಣವಾಗಿದೆ ಎನ್ನುತ್ತಾರೆ ಪೆಟ್ರೋಲ್ ಬಂಕ್ ಒಂದರ ಮಾಲಿಕರು. ಕೆಲವೊಂದು ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಇಲ್ಲ ಎನ್ನುವ ಫಲಕವನ್ನು ತೂಗಿಹಾಕಿದ್ದರೆ, ಮತ್ತೆ ಕೆಲವು ಬಂಕ್‌ಗಳಲ್ಲಿ ಕೇವಲ ವಾಹನಗಳಿಗೆ ಮಾತ್ರ ಪೆಟ್ರೋಲ್ ಲಭ್ಯವಿದೆ ಎನ್ನುವ ಫಲಕಗಳನ್ನು ತೂಗಿಹಾಕಿದ್ದಾರೆ. ವಿದ್ಯುತ್ ಸಮಸ್ಯೆ ಮುಗಿಯುವವರೆಗೆ ಡೀಸೆಲ್ ಕೊರತೆ ಮುಂದುವರೆಯುವ ಸಾಧ್ಯತೆ ಇದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|