|
| ಸಾಂಗ್ಲಿಯಾನ ಕಚೇರಿ ಮೇಲೆ ಕಲ್ಲು ತೂರಾಟ |
| ಬೆಂಗಳೂರು, ಬುಧವಾರ, 23 ಜುಲೈ 2008 ( 15:52 IST ) | |
ಯುಪಿಎ ಸರ್ಕಾರ ಪರ ಮತ ಚಲಾಯಿಸಿದ ಬಿಜೆಪಿ ಸಂಸದ ಸಾಂಗ್ಲಿಯಾನ ಈಗ ರಾಜ್ಯ ಬಿಜೆಪಿ ನಾಯಕರಿಂದ ಹಾಗೂ ಕಾರ್ಯಕರ್ತರಿಂದ ತೀವ್ರ ಆಕ್ರೋಶಕ್ಕೊಳಗಾಗಿದ್ದಾರೆ. ನಗರದ ಹೈಗ್ರೌಂಡ್ಸ್ ಬಳಿ ಇದ್ದ ಅವರ ಕಚೇರಿ ಮೇಲೆ ಇಂದು ಮಧ್ಯಾಹ್ನ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ದಾಂಧಲೆ ನಡೆಸಿದ್ದಾರೆ. ಪರಿಣಾಮವಾಗಿ ಕಚೇರಿಯ ಗಾಜುಗಳು ಪುಡಿಯಾಗಿವೆ. ಇದು ಅಸಮಾಧಾನಗೊಂಡ ಬಿಜೆಪಿ ಕಾರ್ಯಕರ್ತರ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.
ಸಂಸತ್ತಿನ ವಿಶ್ವಾಸ ಮತಯಾಚನೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಹಾಗೂ ಇತರ ನಾಯಕರು ಇವರನ್ನು ಯುಪಿಎ ವಿರುದ್ಧ ಮತ ಹಾಕುವಂತೆ ಒತ್ತಾಯಿಸಿದ್ದರು. ಆದರೆ ಸಾಂಗ್ಲಿಯಾನ ಮಾತ್ರ ಅದನ್ನು ಲೆಕ್ಕಿಸದೆ ಯುಪಿಎ ಪರ ಮತ ಹಾಕಿದ್ದರಿಂದ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದರ ಪರಿಣಾಮವೆಂಬಂತೆ ಈಗ ಅವರ ಕಚೇರಿ ಮೇಲೂ ದಾಳಿನಡೆದಿದೆ.
ಪ್ರತಿಭಟನೆ: ಯುಪಿಎ ಪರ ಮತಹಾಕುವಂತೆ ಹಣದ ಆಮಿಷ ನೀಡಿದ ಕಳಂಕಿತ ಮುಖ್ಯಮಂತ್ರಿ ಮನಮೋಹನ್ ಸಿಂಗ್ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಯುಪಿಎ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|