ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಉ.ಕ.ದಲ್ಲಿ ಮಳೆ: ರೈತರ ಮುಖದಲ್ಲಿ ಸಂತಸದ ಕಳೆ
ಹುಬ್ಬಳ್ಳಿ, 23 ಜುಲೈ 2008   ( 13:57 IST )
ಮಳೆಯಿಲ್ಲದೇ ಕಂಗಲಾಗಿದ್ದ ಉತ್ತರ ಕರ್ನಾಟಕ ಭಾಗದ ರೈತರ ಮುಖದಲ್ಲಿ ಮಂಗಳವಾರ ಸಂಜೆ ಸುರಿದ ಮಳೆ ಮಂದಹಾಸ ಮೂಡಿಸಿದೆ. ಧಾರವಾಡ, ಗದಗ, ಹಾವೇರಿ, ಬೆಳಗಾವಿ ಹಾಗೂ ಹುಬ್ಬಳ್ಳಿಗಳಲ್ಲಿ ಮಳೆಯಾಗಿದ್ದು, ಸುಮಾರು ಎರಡು ಗಂಟೆ ಅವಧಿಯಲ್ಲಿ 30 ಮಿ.ಮೀ ಮಳೆಯಾಗಿದೆ.

ಹುಬ್ಬಳ್ಳಿಯಲ್ಲಿ 30 ಮಿ.ಮೀ ಹಾಗೂ ಧಾರವಾಡದಲ್ಲಿ 35 ಮಿ.ಮೀ ಮಳೆಯಾಗಿದ್ದು ರೈತರು ಗದ್ದೆಗಿಳಿಯಲು ಆರಂಭಿಸಿದ್ದಾರೆ. ಮಂಗಳವಾರ ಸಂಜೆ ಸುಮಾರು 5.30 ರ ಹೊತ್ತಿಗೆ ಆರಂಭವಾದ ಮಳೆ ಕೆಲವು ನಿಮಿಷಗಳಲ್ಲಿ ಇಡೀ ನಗರವನ್ನು ತೋಯಿಸಿತು.

ನೀರಿನಿಂದ ಕೆಲವು ತಗ್ಗು ಪ್ರದೇಶಗಳಲ್ಲಿ ಹಾಗೂ ಚರಂಡಿ ಕಟ್ಟಿಕೊಂಡಿದ್ದರಿಂದ ರಸ್ತೆ ಮೇಲೆ ನೀರು ತುಂಬಿ ಸಂಚಾರಕ್ಕೆ ತೊಂದರೆಯಾಯಿತು.ತಗ್ಗು ಪ್ರದೇಶಗಳ ಕೆಲವು ಮನೆಯೊಳಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಮುಂಗಾರು ಕಣ್ಣಾಮುಚ್ಚಾಲೆ ಆಡುತ್ತಿದ್ದು, ಹೆಚ್ಚಿನ ಪ್ರದೇಶಗಳಲ್ಲಿ ಶೆ. 50 ರಿಂದ 70 ರಷ್ಟು ಮಳೆಯ ಕೊರತೆಯಾಗಿದೆ.180 ಮಿ.ಮೀ ಮಳೆ ಪಡೆಯುವ ಬದಲು ಧಾರವಾಡ ಕೇವಲ 80 ಮಿ.ಮೀ ಮಳೆ ಪಡೆದಿದೆ.

ಸಮರ್ಪಕವಾದ ಬಿತ್ತನೆ ಕಾರ್ಯಕ್ಕಾಗಿ ಜನ ಮಳೆಯನ್ನು ಎದುರು ನೋಡುತ್ತಿದ್ದಾರೆ. ಈಗಾಗಲೇ ಬಿತ್ತನೆ ಮಾಡಿದ ರೈತರು ಮಳೆ ಬಾರದೇ ಆಕಾಶ ನೋಡುತ್ತಿದ್ದು, ಬೆಳೆಗಳಿಗೆ ಕ್ರಿಮಿಗಳು ಕೂಡಾ ತಗುಲಿವೆ. ಮಂಗಳವಾರ ಸುರಿದ ಮಳೆಯಿಂದಾಗಿ ರೋಗಗಳು ದೂರವಾಗಬಹುದೆಂಬ ವಿಶ್ವಾಸ ರೈತರದ್ದು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಳೆಗೆ ಅವ್ಯವಸ್ಥೆ ಆಗರವಾಗುವ ಮಾರುಕಟ್ಟೆ
ಬಗೆಹರಿಯದ ಎಚ್ಎಎಲ್ ಗೊಂದಲ
ಜಾರಿಗೆ ಬರಲಿದೆ ಮೊಬೈಲ್ ಕ್ಯಾಷ್ ಸೇವೆ
ರೇಸ್‌ಕೋರ್ಸ್ ಬೇರೆಡೆ ಸ್ಥಳಾಂತರಕ್ಕೆ ಪರಿಶೀಲನೆ
ಡೀಸೆಲ್ ಕೊರತೆಗೆ ಕಾರಣವಾದ ವಿದ್ಯುತ್ ಕಡಿತ
ಸಾಂಗ್ಲಿಯಾನ ಕಚೇರಿ ಮೇಲೆ ಕಲ್ಲು ತೂರಾಟ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...