|
| ನೀವೇ ಕಸ ವಿಲೇವಾರಿ ಮಾಡಿ: ಬಿಬಿಎಂಪಿ ತಿರುಗೇಟು |
| ಬೆಂಗಳೂರು, ಬುಧವಾರ, 23 ಜುಲೈ 2008 ( 12:44 IST ) | |
ಕಿಲೋ ಕಸಕ್ಕೆ 1 ರುಪಾಯಿ ವಿಧಿಸಿರುವ ಬಿಬಿಎಂಪಿ ಕ್ರಮದ ವಿರುದ್ಧ ಹೋಟೆಲು ಸಂಘ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಬಿಬಿಎಂಪಿ ಈ ಬಗ್ಗೆ ಪ್ರತಿಕ್ರಿಯಿಸಿದೆ. ಹೋಟೆಲ್ ಹಾಗೂ ಕಲ್ಯಾಣ ಮಂಟಪಗಳು ತಾವೇ ಕಸ ವಿಲೇವಾರಿ ಮಾಡಿಕೊಳ್ಳಬಹುದು ಎಂದು ಹೇಳಿದೆ.
ನಿಗದಿತ ಶುಲ್ಕವನ್ನು ಹೆಚ್ಚು ಎನ್ನುವ ಸಂಸ್ಥೆಗಳು ತಾವು ಉತ್ಪಾದಿಸುವ ಕಸವನ್ನು ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಬಹುದು. ಸದ್ಯ ಮಾವಳ್ಳೀಪುರದಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಪ್ರತಿ ಕೆ.ಜಿ.ಗೆ 17 ಪೈಸೆಯಂತೆ ಶುಲ್ಕ ಪಡೆದು ಬಿಬಿಎಂಪಿ ಕಸ ವಿಲೇವಾರಿ ಮಾಡುತ್ತಿದೆ.
ಹಾಗೆಯೇ ಖಾಸಗಿ ಸಂಸ್ಥೆಗಳು ತಮ್ಮ ಖರ್ಚಿನಲ್ಲಿ ಸಂಸ್ಕರಣ ಘಟಕಗಗಳಿಗೆ ಕಸ ಸಾಗಣೆ ಮಾಡಬೇಕಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಬೀದಿಯಲ್ಲಿ ಕಸ ಹಾಕಲು ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಡಾ.ಎಸ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಇದು ಹೋಟೆಲು ಮಾಲೀಕರನ್ನು ಮತ್ತೆ ಚಿಂತೆಗೀಡು ಮಾಡಿದ್ದು, ಮುಂದಿನ ಕಾರ್ಯತಂತ್ರಕ್ಕೆ ಹೋಟೆಲು ಸಂಘ ಸಿದ್ಧತೆ ನಡೆಸುತ್ತಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|