|
| ನನ್ನ ಸಾವಿಗೆ ಶಿಕ್ಷಕರೇ ಕಾರಣ..ಮೇಘಶ್ರೀ ಪತ್ರ |
| ಬೆಂಗಳೂರು, ಬುಧವಾರ, 23 ಜುಲೈ 2008 ( 12:40 IST ) | |
ಪಿಇ ಸರ್ ಹಾಗೂ ಕೆಎಸ್ ಮೇಡಂ ನನ್ನ ಸಾವಿಗೆ ಕಾರಣ- ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ 15 ವರ್ಷದ ಮೇಘಶ್ರೀ ತಮ್ಮ ವಿಲ್ಸನ್ ಗಾರ್ಡನ್ ಮನೆಯಲ್ಲಿ ಬರೆದಿಟ್ಟ ಪತ್ರದ ಸಾರಾಂಶವಿದು.
ನಗರದ ಆರ್.ವಿ.ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಈಕೆ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದಳೆಂದು ಶಿಕ್ಷಕರು ಆಕೆಯ ಪೋಷಕರನ್ನು ಕರೆತರುವಂತೆ ಹೇಳಿದರು. ಆದರೆ ಈಕೆ ಕರೆದುಕೊಂಡು ಹೋಗಲಿಲ್ಲ. ಕುಪಿತರಾದ ಶಿಕ್ಷಕರು ಈಕೆಯನ್ನು ತರಗತಿಗೆ ಸೇರಿಸಿಕೊಳ್ಳಲಿಲ್ಲ.
ಚಾಲಕ ರಾಜು ಹಾಗೂ ಅಶ್ವತ್ಥಮ್ಮ ದಂಪತಿಗೆ ತಮ್ಮ ಪುತ್ರಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿದ್ದರು. ಮೇಘಶ್ರೀಯ ಸಹೋದರಿ ಅಕ್ಷತಾ ಅದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಪರೀಕ್ಷೆಯಲ್ಲಿ ತನಗೆ ಕಡಿಮೆ ಅಂಕ ಬಂದಿರುವುದಾಗಿ ಮೇಘಶ್ರೀ ತಿಳಿಸಿದ್ದಳು. ಆಗ ಆಕೆ ಜೊತೆ ನಾನು ಶಾಲೆಗೆ ಬರುತ್ತೇನೆ ಎಂದಾಗ ಆಕೆ ಸ್ಪೇಷಲ್ ಕ್ಲಾಸ್ ಇದೆ ಎಂದಳು ಎನ್ನುತ್ತಾರೆ ತಾಯಿ ಅಶ್ವತ್ಥಮ್ಮ.
ಶಾಲೆಯಿಂದ ವಾಪಸ್ಸು ಬಂದ ಮೇಘಶ್ರೀ ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾಳೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|