|
| ಪ್ರತಿಪಕ್ಷಕ್ಕೆ ಮುಖ್ಯ ಸಚೇತಕ ಹುದ್ದೆಯ ಭಾಗ್ಯದ ಬಾಗಿಲು |
| ಬೆಂಗಳೂರು, ಬುಧವಾರ, 23 ಜುಲೈ 2008 ( 12:38 IST ) | |
ವಿಧಾನಸಭೆಯ ಅಧಿಕೃತ ಪ್ರತಿಪಕ್ಷಕ್ಕೆ ರಾಜ್ಯ ಸಚಿವರ ಸ್ಥಾನಮಾನದ ಮುಖ್ಯ ಸಚೇತಕ ಹುದ್ದೆ ಶೀಘ್ರದಲ್ಲಿಯೇ ದೊರೆಯಲಿದೆ. ಪ್ರತಿಪಕ್ಷಕ್ಕೂ ಮುಖ್ಯ ಸಚೇತಕ ಹುದ್ದೆ ನೀಡಲು ಕರ್ನಾಟಕ ವಿಧಾನ ಸಭೆ ವೇತನ, ಭತ್ಯೆ, ಪಿಂಚಣಿ ಹಾಗೂ ವಿಶೇಷ ಭತ್ಯೆ ಕಾಯ್ದೆಗೆ ತಿದ್ದುಪಡಿಯನ್ನು ಬಿಜೆಪಿ ಸರ್ಕಾರ ಪ್ರಸ್ತುತ ಅಧಿವೇಶನದಲ್ಲೇ ಮಂಡಿಸುವ ಸಂಭವವಿದೆ.
ಪ್ರತಿಪಕ್ಷದಲ್ಲಿ ಈ ಹುದ್ದೆ ಪಡೆಯುವವರು ವಾರ್ಷಿಕ ವೇತನ 96 ಸಾವಿರ ರೂ, ಮನೆ ಬಾಡಿಗೆ 3 ಲಕ್ಷ ರೂ. ಪ್ರಯಾಣ ಭತ್ಯೆ 16.64 ಲಕ್ಷ ರೂ, ಇಂಧನ ಭತ್ಯೆ 2,51,220 ರೂ, ಹಾಗೂ ವ್ಯಯ ನಿಯಂತ್ರಣ ಭತ್ಯೆಯಾಗಿ 50 ಸಾವಿರ ರೂ ಪಡೆಯಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಮೂಲಗಳು ತಿಳಿಸಿವೆ.
ಹೈದಾರಾಬಾದಿನಲ್ಲಿ ನಡೆದ 13 ನೇ ಮುಖ್ಯ ಸಚೇತಕ ಸಮ್ಮೇಳನದಲ್ಲಿ ವಿರೋಧ ಪಕ್ಷಗಳಿಗೂ ಮುಖ್ಯ ಸಚೇತಕ ಹುದ್ದೆ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿತ್ತು. ಇದು ಜಾರಿಯಾದರೆ ಕರ್ನಾಟಕ ದೇಶದಲ್ಲಿಯೇ ಪ್ರಥಮವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|