|
| ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ |
| ಬೆಂಗಳೂರು, ಶನಿವಾರ, 19 ಜುಲೈ 2008 ( 19:34 IST ) | |
ರಾಜ್ಯದ ವಿದ್ಯುತ್ ಕೊರತೆ ನೀಗಿಸುವ ಸಂಬಂಧ ಛತ್ತೀಸ್‌ಗಢದಿಂದ ವಿದ್ಯುತ್ ಎರವಲು ಪಡೆಯಲು ನಿರ್ಧರಿಸಿದ್ದು, ಛತ್ತಿಸ್‌ಗಢ ಮುಖ್ಯಮಂತ್ರಿ ರಮಣಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ನಗರದಲ್ಲಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮಣ್ ಸಿಂಗ್ ಅವರನ್ನು ಭೇಟಿ ಮಾಡಿ, 500 ಮೆಗಾವ್ಯಾಟ್ ವಿದ್ಯುತ್ ಸಾಲ ನೀಡುವಂತೆ ಕೋರಲಾಗಿದೆ. ಕನಿಷ್ಠ 300 ಮೆಗಾವ್ಯಾಟ್ ವಿದ್ಯುತ್ ಪೂರೈಸುವುದಾಗಿ ಮುಖ್ಯಮಂತ್ರಿ ರಮಣ್ ಸಿಂಗ್ ಭರವಸೆ ನೀಡಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.
ಅಲ್ಲದೆ ಛತ್ತೀಸ್‌ಗಢದಲ್ಲಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಘಟಕ ಸ್ಥಾಪನೆಗೆ ಅನುಮತಿ ನೀಡುವಂತೆಯೂ ಕೋರಲಾಗಿದೆ. ಈ ಸಂಬಂಧ ಒಡಂಬಡಿಕೆ ಸದ್ಯದಲ್ಲೇ ಆಗಲಿದ್ದು, ಎರಡು ಮೂರು ದಿನಗಳಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳು ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರ ವಿದ್ಯುತ್ ತಡೆಹಿಡಿದಿರುವುದರಿಂದ ಪ್ರಸ್ತುತ ಬಜೆಟ್‌ನಲ್ಲಿ ಘೋಷಿಸಲಾದ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಸುವ ಯೋಜನೆಗೆ ತೊಂದರೆಯಾಗುವುದಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|