|
| ವಿದ್ಯುತ್ತಿಗೆ ಖೋತಾ: ಕೇಂದ್ರದ ವಿರುದ್ಧ ಸಿಎಂ ಆಕ್ರೋಶ |
| ಬೆಂಗಳೂರು, 19 ಜುಲೈ 2008 ( 19:20 IST ) | |
ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ರಾಜ್ಯ ಮತ್ತು ಕೇಂದ್ರದ ನಡುವಿನ ಸಂಘರ್ಷ ಮುಂದುವರಿದಂತಾಗಿದೆ.
ರಾಜ್ಯದಲ್ಲಿ ತೀವ್ರ ವಿದ್ಯುತ್ ಕ್ಷಾಮ ತಲೆದೋರಿದೆ. ರಾಜ್ಯಸರ್ಕಾರ ಅದನ್ನು ಸರಿದೂಗಿಸಲು ಇನ್ನಿಲ್ಲದ ಹರಸಾಹಸ ಮಾಡುತ್ತಿದೆ. ರೈತರಿಗೆ ಉಚಿತ ವಿದ್ಯುತ್ ಕೊಡುವುದಾಗಿಯೂ ಬಜೆಟ್‌ನಲ್ಲಿ ಘೋಷಿಸಿಯಾಗಿದೆ. ಆದರೆ, ಕೇಂದ್ರಸರ್ಕಾರ ರಾಜ್ಯಕ್ಕೆ ಬರಬೇಕಾದ ವಿದ್ಯುತ್ ಖೋತಾ ಮಾಡಿ ಅದನ್ನು ಆಂಧ್ರಕ್ಕೆ ನೀಡಲು ಮುಂದಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಕ್ಷಾಮದ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ವಿವರಿಸಲಾಗಿದೆ. ಹೀಗಿದ್ದರೂ ಕೇಂದ್ರದ ಕ್ರಮ ತೀವ್ರ ವಿಷಾದನೀಯ. ರಾಜ್ಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಕೇಂದ್ರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|