ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ದುಬಾರಿಗೊಂಡ ಬೇಕರಿ ಉತ್ಪನ್ನಗಳು
ಬೆಂಗಳೂರು, ಶನಿವಾರ, 19 ಜುಲೈ 2008   ( 13:28 IST )
ಹಣದುಬ್ಬರ ಬೇಕರಿ ಉತ್ಪನ್ನಗಳ ಮೇಲೂ ಸಹ ತನ್ನ ಪರಿಣಾಮವನ್ನು ಭೀರಿದೆ. ಬೇಕರಿಯ ಅಚ್ಚುಮೆಚ್ಚಿನ ತಿನಿಸುಗಳಾದ ಬ್ರೆಡ್, ಬನ್‌, ಕುಕೀಸ್ ಮತ್ತು ಬಿಸ್ಕತ್‌ಗಳು ಇನ್ನು ದುಬಾರಿಗೊಳ್ಳಲಿವೆ.

ಇದುವರೆಗೂ ಕಡಿಮೆ ಬೆಲೆ ಇದ್ದ ಒಂದು ಲೋಫ್ ಬ್ರೆಡ್ ಬೆಲೆ 2 ರೂ. ಹೆಚ್ಚಳಗೊಂಡು ರೂ.18 ಆಗಲಿದೆ. ಇತರೆಯವು ರೂ.14 ಆಗಲಿದೆ. ಇದೇ ರೀತಿಯೇ ಕುಕೀಸ್ ಮತ್ತು ಬಿಸ್ಕತ್‌ಗಳ ಬೆಲೆಯಲ್ಲಿಯೂ ಏರಿಕೆ ಕಾಣಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೇಕರಿ ಮಾಲಿಕರು, ಗೋಧಿ ಹಿಟ್ಟು, ತೈಲ, ಸಕ್ಕರೆ ಮತ್ತು ವನಸ್ಪತಿಯ ಬೆಲೆಗಳಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ. ಈ ಕಾರಣದಿಂದ ಹಳೆಯ ದರಗಳನ್ನೇ ಮುಂದುವರಿಸುವುದು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ.

ಸದಾಶಿವ ನಗರದ ಬೇಕರಿ ತಯಾರಕರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, ಬಹಳ ದಿನಗಳಿಂದ ಬೆಲೆ ಏರಿಕೆಯನ್ನು ಮುಂದೂಡುತ್ತಾ ಬಂದೆವು.ಆದರೆ ಈಗ ಅದು ಸಾಧ್ಯವಿಲ್ಲ. ಆದುದರಿಂದ ಬೆಲೆ ಹೆಚ್ಚುಗೊಳಿಸಲೇಬೇಕಾಗಿದೆ ಎಂದು ತಿಳಿಸಿದರು.

ಬೇಕ್ ಅಂಡ್ ಕೇಕ್ ಬೇಕರಿ ಮಾಲಿಕರು ಈ ಬಗ್ಗೆ ತಿಳಿಸಿ, ಬಿಸ್ಕತ್ತು, ಬನ್ನು ಮತ್ತು ಕುಕಿಗಳಿಗೆ ಬಳಸುವ ಸಾಮಗ್ರಿಗಳ ಪ್ರಮಾಣವನ್ನು ತಗ್ಗಿಸುವಂತಿಲ್ಲ. ಆದರೆ ಬೆಲೆ ಮಾತ್ರ ಹೆಚ್ಚಾಗಿದೆ. ಇದರಿಂದ ಇವುಗಳ ಬೆಲೆಯಲ್ಲಿ ಶೇ.10-15ರಷ್ಟು ಏರಿಕೆಗೊಳಿಸಲೇ ಬೇಕಾದ ಅನಿವಾರ್ಯತೆ ಇದೆ.

ಇದು ಮಾರಾಟದ ಮೇಲೆ ಪರಿಣಾಮವನ್ನು ಭೀರುತ್ತದೆ ಎನ್ನುವುದು ಸಹ ನಮಗೆ ತಿಳಿದಿದೆ. ಆದರೆ ಇದಕ್ಕೆ ಪರ್ಯಾಯ ಮಾರ್ಗವಿಲ್ಲದಿರುವುದರಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಿಜೆಪಿ ಸೇರುವುದಿಲ್ಲ. ಉಮಾಭಾರತಿ
ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ: ಖರ್ಗೆ
ಬಜೆಟ್ಟಿನಲ್ಲಿ ಶಾಸಕರ ನಿಧಿಯೇ ಇಲ್ಲ
ಅಂಗಾಂಗ ದಾನಕ್ಕೆ ಏರ್ ಮಾರ್ಷಲ್ ಕರೆ
ಛತ್ತೀಸ್‌ಗಢದಿಂದ 100 ಮೆ.ವಾ. ವಿದ್ಯುತ್ ಪೂರೈಕೆ
ಬೆಂಗಳೂರಿನಲ್ಲಿ ಕಣ್ಣುಬಿಟ್ಟ ಸಾಯಿಬಾಬ ವಿಗ್ರಹ
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...