|
| ಮತ್ತೆ ಮೀಟರ್ ಪಾರ್ಕಿಂಗ್ ಜಾರಿಗೆ |
| ಬೆಂಗಳೂರು, ಶನಿವಾರ, 19 ಜುಲೈ 2008 ( 13:26 IST ) | |
ಸಂದಾಯ ಮಾಡಿ ನಿಲುಗಡೆಗೊಳಿಸಿ ಯೋಜನೆಯೇ ಮತ್ತೆ ಜಾರಿಗೆ ಬರಲಿದೆ. ಇದರ ಜೊತೆಯಲ್ಲಿಯೇ ಪಿಪಿಪಿ ಸ್ಟಾಂಪ್ ಕೂಡ ಇರಲಿದೆ. ನಗರಾಭಿವೃದ್ಧಿ ಇಲಾಖೆಯು ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಗೆ ನಿರ್ದೇಶನವನ್ನು ನೀಡಿದೆ. ಪೇ ಅಂಡ್ ಪಾರ್ಕ್, ಪಿಪಿಪಿ ಯೋಜನೆಯನ್ನು, ನಗರದ ಆಯ್ದ ರಸ್ತೆಗಳಲ್ಲಿ ಜಾರಿಗೊಳಿಸಲು ವರ್ತಕರ ಸಂಘಗಳನ್ನು ಕೇಳಿಕೊಳ್ಳಲು ತಿಳಿಸಲಾಗಿದೆ.
ಬಿಬಿಎಂಪಿ ಈ ಮಾದರಿ ಬಗ್ಗೆ ಆಲೋಚನೆಯನ್ನು ನಡೆಸುತ್ತಿದ್ದು, ಇದರ ಸಂಪರ್ಕಕ್ಕೆ ಬರುವ 37 ರಸ್ತೆಗಳನ್ನು ಪರಿಗಣಿಸಲಾಗಿದೆ. ಬಿಬಿಎಂಪಿಯ ಮೂಲಗಳ ಪ್ರಕಾರ ಈ ಯೋಜನೆಯು ಪರಿಶೀಲನೆಯಲ್ಲಿದ್ದು, ಇದು ಬ್ರಿಗೇಡ್ ರಸ್ತೆಯ ಪೇ ಅಂಡ್ ಪಾರ್ಕ್ ರೀತಿ ಇರಲಿದೆ. ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಬಿಬಿಎಂಪಿ ಸಹಯೋಗದಲ್ಲಿ ವರ್ತಕರೊಂದಿಗೆ ಕೈಗೊಂಡ ಸಂದಾಯಮಾಡಿ ವಾಹನ ನಿಲುಗಡೆಗೊಳಿಸುವ ಯೋಜನೆಯು ಜಾರಿಗೆ ಬಂದಿದೆ. ಈಗ ಇದೇ ಮಾದರಿಯನ್ನು ಇತರ 37 ರಸ್ತೆಗಳಿಗೆ ಜಾರಿಗೊಳಿಸುವ ಚಿಂತನೆ ನಡೆದಿದೆ.
ಇದು ಸಾಮಾನ್ಯ ಟೆಂಡರ್ ವಿಧಾನಕ್ಕಿಂತಲೂ ಭಿನ್ನವಾಗಿದ್ದು, ಒಂದು ರಸ್ತೆಗೆ ಒಬ್ಬರಿಗಿಂತಲೂ ಹೆಚ್ಚಿನ ಮಂದಿಯು ಮುಂದೆ ಬಂದಲ್ಲಿ,ಇದಕ್ಕಾಗಿ ಕೆಲವು ವಿಧಾನಗಳನ್ನು ಅನುಸರಿಸಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|