|
| ಉಕ್ಕಿನ ಕಾರ್ಖಾನೆ : ಗಣಿ ಧಣಿಗಳ ಯೋಜನೆಯೇ? |
| ಬೆಂಗಳೂರು, ಶುಕ್ರವಾರ, 18 ಜುಲೈ 2008 ( 20:03 IST ) | |
ಹಾವೇರಿ ಗದಗದಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆ ಮಾಡುವುದಾಗಿ ಬಜೆಟ್ಟಿನಲ್ಲಿ ಘೋಷಿಸಿದ್ದಾರೆ. ಸರ್ಕಾರ ರಚನೆಯ ಸಂದರ್ಭದಲ್ಲಿ ಹಣದ ಹೊಳೆ ಹರಿಸಿರುವ ಗಣಿಧಣಿಗಳ ಒತ್ತಡ ಇದರ ಹಿಂದೆ ಕೆಲಸ ಮಾಡಿದೆಯೇ ಎಂಬುದು ಈಗ ಪ್ರಶ್ನೆಯಾಗಿದೆ.
ಬಳ್ಳಾರಿಯಲ್ಲಿ ಈಗಾಗಲೇ ಗಣಿ ಉದ್ಯಮದಲ್ಲಿ ಪಾರಮ್ಯ ಮೆರೆದಿರುವ ಜನಾರ್ದನ ರೆಡ್ಡಿ ಮತ್ತು ಅವರು ಬಂಧುವರ್ಗ, ಈ ಹಿಂದಿನ ಕುಮಾರಸ್ವಾಮಿ ಸರ್ಕಾರದಲ್ಲಿ ಸಾಕಷ್ಟು ಗದ್ದಲ ಎಬ್ಬಿಸಿದ್ದರು. ರಾಜ್ಯದಲ್ಲಿ ದೇವೇಗೌಡರ ಕುಟುಂಬಕ್ಕೆ ಸೆಡ್ಡು ಹೊಡೆದು ನಿಂತ ರೆಡ್ಡಿಗಳು ಸರ್ಕಾರ ಅಧಿಕಾರ ಹಸ್ತಾಂತರ ಸಮಯ ಮತ್ತು ನಂತರದ ಚುನಾವಣೆ ಸರ್ಕಾರ ರಚನೆ ಸಂದರ್ಭದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು.
ಇತ್ತೀಚೆಗೆ ಜೆಡಿಎಸ್ ಸವೋಚ್ಚ ನಾಯಕ ಎಚ್.ಡಿ. ದೇವೇಗೌಡ ಗಣಿಧಣಿಗಳ ವಿರುದ್ಧ ಕೆಂಡಕಾರಿ ಯಡಿಯೂರಪ್ಪ ರೆಡ್ಡಿಗಳ ಕೈಗೊಂಬೆ ಮುಖ್ಯಮಂತ್ರಿ. ಅವರು ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.
ಆದರೆ ಇದಕ್ಕೆಲ್ಲ ಜಗ್ಗದ ರೆಡ್ಡಿಗಳು ಉಕ್ಕಿನ ಕಾರ್ಖಾನೆ ಸ್ಥಾಪಿಸಿ ಆ ಮೂಲಕ ಗಣಿ ಉದ್ಯಮದಲ್ಲಿ ಪಾರಮ್ಯ ಮೆರೆಯುವ ಯೋಜನೆಗೆ ಯಡಿಯೂರಪ್ಪನವರಿಂದ ಒಪ್ಪಿಗೆ ಪಡೆಯಬಹುದು ಎಂಬುದು ಕೆಲವರ ಅಂಬೋಣ.
ಉಳಿದಂತೆ ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಯೋಚಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿರುವ ಹುಬ್ಬಳ್ಳಿಗೆ ಅಂತಾರಾಷ್ಟ್ತ್ರೀಯ ವಿಮಾನ ನಿಲ್ದಾಣ ಬಂದರೆ ಒಳ್ಳೆಯದು. ಆದರೆ, ಬೆಂಗಳೂರು ಅಂ.ವಿ. ನಿಲ್ದಾಣದಲ್ಲಾದ ವಿಳಂಬ ಗಮನಿಸಿದರೆ, ಇದು ಎಂದು ಸಾಕಾರವಾಗುವುದು ಎಂಬುದೇ ಯಕ್ಷಪ್ರಶ್ನೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|