|
| ವಿಶ್ವಾಸಮತ: ಸಂಪೂರ್ಣ ಅಧಿಕಾರ ದೇವೇಗೌಡರದು |
| ಬೆಂಗಳೂರು, ಶುಕ್ರವಾರ, 18 ಜುಲೈ 2008 ( 16:29 IST ) | |
ಜಾತ್ಯತೀತ ಜನತಾದಳದ ಮುಖಂಡರ ಸಭೆ ಮುಕ್ತಾಯಗೊಂಡಿದೆ. ಯುಪಿಎ ಸರ್ಕಾರ ಮಂಗಳವಾರ ವಿಶ್ವಾಸಮತ ಕೋರುವ ವೇಳೆ ಸರ್ಕಾರದ ಪರ ಅಥವಾ ವಿರೋಧಿ ಮತ ಚಲಾಯಿಸುವ ಕುರಿತು ನಿರ್ಣಯ ತೆಗೆದುಕೊಳ್ಳುವ ದೃಷ್ಟಿಯಿಂದ ಸೇರಿದ್ದ ಈ ಸಭೆ ಎಲ್ಲರ ಗಮನ ಸೆಳೆದಿತ್ತು. ಆದರೆ ಸಭೆಯು ಯಾವುದೆ ನಿರ್ಧಾರಕ್ಕೆ ಬರದೆ ಮುಕ್ತಾಯಗೊಂಡಿದ್ದು ತೀರ್ಮಾನ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವನ್ನು ಸವೋಚ್ಛ ನಾಯಕ ಎಚ್.ಡಿ. ದೇವೇಗೌಡರಿಗೆ ನೀಡಿದೆ.
ನಂತರ ಪತ್ರಿಕಾಗೋಷ್ಠಿ ನಡೆಸಿದ ಎಚ್.ಡಿ. ದೇವೇಗೌಡ, ಕೇಂದ್ರ ಸರ್ಕಾರದ ಪರ ಮತ ಚಲಾಯಿಸಬೇಕೋ ಅಥವಾ ಬೇಡವೋ ಎಂಬ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸಭೆಯಲ್ಲಿ ಹಾಜರಿದ್ದ ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್, ಹಿರಿಯ ಮುಖಂಡ ಡಿ.ಮಂಜುನಾಥ್ ಮತ್ತಿತರ ಮುಖಂಡರು ನಿರ್ಧಾರ ತೆಗೆದುಕೊಳ್ಳವ ಅಧಿಕಾರವನ್ನು ನನಗೇ ನೀಡಿದ್ದಾರೆ ಎಂದು ತಿಳಿಸಿದರು.
ಕೇರಳದಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿರುವ ಸಂಸದ ವೀರೇಂದ್ರ ಕುಮಾರ್ ಅವರು ಯುಪಿಎ ವಿರುದ್ಧ ಮತ ಚಲಾಯಿಸುವುದಾಗಿ ಹೇಳಿದ್ದಾರೆ. ಅವರಿಗೆ ವಿಪ್ ಜಾರಿ ಮಾಡುವಿರಾ ಎಂಬ ಪ್ರಶ್ನೆಗೆ, ಈ ಕುರಿತು ಅವರೊಡನೆ ಮಾತನಾಡಿದ್ದೇನೆ. ಅವರು ಕೇರಳದ ಒಬ್ಬ ಮುತ್ಸದ್ದೀ ಮುಖಂಡರು. ವಿಷಘಳಿಗೆಯಲ್ಲಿ ಅವರೊಂದಿಗಿನ ಸಂಬಂಧ ಹಾಳಾಗಿತ್ತು ಎಂದು ಜಾರಿಕೊಂಡರು.
ನಾಳೆ ಪ್ರಧಾನಿ ಅವರನ್ನು ಭೇಟಿ ಮಾಡುತ್ತಿದ್ದೇನೆ. ಈ ಸಮಯದಲ್ಲಿ ಅವರೊಂದಿಗೆ ಸ್ಪಷ್ಟವಾಗಿ ನಮ್ಮ ನಿಲುವು ತಿಳಿಸಲಿದ್ದೇವೆ. ನಾವು ನಮ್ಮ ಪಕ್ಷದ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೇಂದ್ರ ಸರ್ಕಾರದ ಪರ ಅಥವಾ ವಿರುದ್ಧ ಮತ ಚಲಾಯಿಸುವುದಕ್ಕಿಂತ ನಮ್ಮ ಪಕ್ಷ ಬಲವರ್ಧನೆ ಕುರಿತು ನಾವು ಈ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಕ್ಷದ ಹಿತವೇ ನಮಗೆ ಮುಖ್ಯವಾಗಿರುತ್ತದೆ ಎಂದು ಗೌಡ ಸಾರಿದರು.
ಜೆಡಿಎಸ್ ರಾಷ್ಟ್ತ್ರೀಯ ಸಂಸದೀಯ ಮಂಡಳಿಯಲ್ಲಿರುವ ಸಿದ್ದಿಕಿ, ಮತ್ತಿತರ ಮುಖಂಡರು ಸೇರಿ ಚರ್ಚಿಸಿದ ನಿರ್ಧಾರ ಪ್ರಕಟಿಸಲಿದ್ದೇವೆ. ನಾವು ಯಾರೋಂದಿಗೂ ದಾಕ್ಷಿಣ್ಯಕ್ಕೆ ಬೀಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಎಲ್ಲ ಮಾತುಗಳನ್ನು ಗಮನಿಸಿದರೆ ದೇವೇಗೌಡರು ಯುಪಿಎ ಪರ ಇದ್ದು, ಷರತ್ತುಗಳು ಈಡೇರಿದರೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಾಗಿದೆ. ವೀರೇಂದ್ರ ಕುಮಾರ್ ಅವರು ಬೆಂಬಲಿಸುವರೇ ಇಲ್ಲವೇ ಎಂಬುದು ಈಗ ಪ್ರಶ್ನೆಯಾಗಿ ಉಳಿದಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|