|
| ಶಾಲಾ ವಿಗ್ರಹದಿಂದ ಆಭರಣ ಕಳವು |
| ಬೆಂಗಳೂರು, ಶುಕ್ರವಾರ, 18 ಜುಲೈ 2008 ( 13:05 IST ) | |
ಐದು ಜನ ಗಾರ್ಡ್‌ಗಳಿದ್ದರೂ ಸಹ ಈ ಕಳ್ಳರನ್ನು ತಡೆಯಲಾಗಲಿಲ್ಲ. ಶಾಲಾ ಕಟ್ಟಡದೊಳಗೆ ನುಗ್ಗಿದ ಕಳ್ಳರು, ಅಲ್ಲಿನ ವಿಗ್ರಹಕ್ಕೆ ತೊಡಿಸಲಾಗಿದ್ದ ಸುಮಾರು 6.5 ಲಕ್ಷ ರೂ.ಮೌಲ್ಯದ ಆಭರಣವನ್ನು ಕದ್ದು ಒಯ್ದರು. ರಾಜಾಜಿನಗರದ ನಾಲ್ಕನೇ ಹಂತದಲ್ಲಿರುವ ವೀನಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಕೊಠಡಿಯೊಂದರಲ್ಲಿ ಗಣೇಶ, ಶಾರದ ಮತ್ತು ರಾಜರಾಜೇಶ್ವರಿ ವಿಗ್ರಹಗಳನ್ನು ಇಡಲಾಗಿತ್ತು ಮತ್ತು ಅವುಗಳನ್ನು ಚಿನ್ನ ಮತ್ತು ವಜ್ರದ ಆಭರಣಗಳಿಂದ ಅಲಂಕರಿಸಲಾಗಿತ್ತು.ಪ್ರತಿದಿನ ಬೆಳಿಗ್ಗೆ ಶಾಲಾ ಮಕ್ಕಳು ಇಲ್ಲಿ ಪ್ರಾರ್ಥನೆಯನ್ನು ಮಾಡುತ್ತಿದ್ದರು.
ಈ ಕಳ್ಳರು ಶಾಲಾಕೊಠಡಿಯ ಕಿಟಕಿಯನ್ನು ಕಳಚಿಟ್ಟು ಒಳಕ್ಕೆ ಪ್ರವೇಶಿಸಿದ್ದಾರೆ ಮತ್ತು ಕಳ್ಳತನವನ್ನು ನಡೆಸಿದ್ದಾರೆ. ಸ್ಕೂಲ್ ಮ್ಯಾನೇಜರ್ ಆಗಿರುವ ಬಾಬು, ಈ ಪ್ರಕರಣದ ಬಗ್ಗೆ ಮಾಗಡಿ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ಪ್ರಕರಣ ನಡೆದ ಸಂದರ್ಭದಲ್ಲಿ ಐದು ಮಂದಿ ಗಾರ್ಡ್‌ಗಳು ಕಾರ್ಯನಿರತರಾಗಿದ್ದರು ಎಂದು ಬಾಬು ತಿಳಿಸಿದ್ದಾರೆ. ಈ ಪ್ರಕರಣವು ಬೆಳಿಗ್ಗೆ ಶಾಲಾ ಕಟ್ಟಡದ ಬಾಗಿಲನ್ನು 9.30ರ ವೇಳೆಗೆ ತೆರೆದಾಗ ಬೆಳಕಿಗೆ ಬಂದಿತು ಎಂದು ಸಹ ಅವರು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|