ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕೈಗಾರಿಕೆಗೆ ವಿಷನ್ ಗ್ರೂಪ್, ಉನ್ನತ ಶಿಕ್ಷಣಕ್ಕೆ ಸಾಲ
ಬೆಂಗಳೂರು, ಗುರುವಾರ, 17 ಜುಲೈ 2008   ( 19:14 IST )
ಕೈಗಾರಿಕಾ ಅಭಿವೃದ್ದಿ ದೃಷ್ಟಿಯಿಂದ ವಿಷನ್ ಗ್ರೂಪ್ ಸ್ಥಾಪಿಸುವ ಮಹತ್ವದ ನಿರ್ಧಾರನ್ನು ರಾಜ್ಯಸರ್ಕಾರ ತೆಗೆದುಕೊಂಡಿದೆ.ಕೈಗಾರಿಕೆಗೆ ಸಂಪನ್ಮೂಲಯುಕ್ತ ಸ್ಥಳ ಗುರುತಿಸುವಿಕೆ ಮತ್ತು ಯೋಜನೆಗಳ ತ್ವರಿತ ಮತ್ತು ಕ್ರಮಬದ್ಧ ಅನುಷ್ಠಾನ ಹಾಗೂ ಆನಂತರದ ಮಾನವ ಸಂಪನ್ಮೂಲ ಒದಗಿಸುವಲ್ಲಿ ವಿಷನ್ ಗ್ರೂಪ್ ಮಹತ್ವದ ಪಾತ್ರ ವಹಿಸಲಿದ್ದು, ರಾಜ್ಯಕ್ಕೆ ಬಂಡವಾಳ ಹರಿದು ಬರುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಪೂರಕವಾಗಿ ಕೌಶಲ್ಯ ಆಯೋಗ ಸ್ಥಾಪನೆ ಆಗಲಿದ್ದು ಕನ್ನಡಿಗರ ಉದ್ಯೋಗ ಕೊರತೆಯನ್ನು ಸಮರ್ಪಕವಾಗಿ ನೀಗಿಸಬಹುದು ಎಂಬ ನಿರೀಕ್ಷೆ ರಾಜ್ಯದ ಜನರದ್ದು.ಇದರೊಂದಿಗೆ ಕೃಷಿ ಮಿಷನ್ ಸ್ಥಾಪಿಸಿ ಸಾವಯವ ಕೃಷಿಗೆ ಉತ್ತೇಜನ ನೀಡುವ ಮೂಲಕ ಕೃಷಿ ಕ್ಷೇತ್ರದ ಸಮಸ್ಯೆಗಳ ಮ‌ೂಲೋತ್ಪಾಟನೆಗೂ ಸರ್ಕಾರ ಚಿಂತಿಸಿದೆ.

ಉನ್ನತ ವ್ಯಾಸಂಗಕ್ಕೆ ಶೇ.6ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲು ಚಿಂತಿಸುವ ಮೂಲಕ ಸರ್ಕಾರ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ. ಬಡವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದು ತುಂಬಾ ಕಷ್ಟಕರ. ಈ ಹಿನ್ನೆಲೆಯಲ್ಲಿ ಸರ್ಕಾರ ಅವರಿಗೆ ಸಾಲಸೌಲಭ್ಯ ನೀಡಿ ಪ್ರೋತ್ಸಾಹಿಸುವ ನಿರ್ಧಾರಕ್ಕೆ ಬಂದಿದೆ.

ಬೆಂಗಳೂರಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಲು ಚಿಂತನೆ ನಡೆಸಿದ್ದು, ಕ್ರೀಡಾಪಟುಗಳಿಗೆ ಯುವಸಂಜೀವಿನಿ ವಿಮಾಯೋಜನೆ ಜಾರಿ ಮಾಡಿ ಕ್ರೀಡಾ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಕ್ರೀಡಾಪಟುಗಳ ಪಲಾಯನ ತಡೆಯುವ ಉದ್ದೇಶ ರಾಜ್ಯಸರ್ಕಾರದ್ದು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರೈತರಿಗೆ ಸಾಲು ಸಾಲು ಕೊಡುಗೆ
ಸಾರಿಗೆ ವ್ಯವಸ್ಥೆ ಸುಧಾರಣೆಗೆ ಸಂಕಲ್ಪ
ಯಡಿಯ‌ೂರಪ್ಪ ಬಜೆಟ್ ವಿರುದ್ಧ ಟೀಕಾಪ್ರಹಾರ
ಕನ್ನಡದ ಮೇರುನಟ ಎಂ.ಪಿ.ಶಂಕರ್ ಅಸ್ತಂಗತ
ಶಾಸಕರ ಪಕ್ಷಾಂತರ: ಸಿಬಿಐ ತನಿಖೆ ಕೋರಿ ಅರ್ಜಿ
ಬಜೆಟ್: ರೈತರ ಓಲೈಕೆ, ಸರ್ಕಾರಿ ನೌಕರರಿಗೆ ಬಂಪರ್
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಸಂಧಾನಕ್ಕೆ ಸಾಧ್ಯವಾಗದ ವಿಷಯವೊಂದು ನಿಮ್ಮ ಕಾರ್ಯವನ್ನು ತ್ರಾಸದಾಯಕವಾಗಿಸಬಹುದು. ನಿಮ್ಮ ವಿರೋಧಿಗಳು ಮತ್ತು ಕಚೇರಿ ಸಹವರ್ತಿಗಳೂ ಕೂಡ ನಿಮ್ಮ ನೈತಿಕ ಬಲವನ್ನು ಒಪ್ಪಿಕೊಳ್ಳುತ್ತಾರೆ. ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ನೀವು ಪಡೆಯಲಿದ್ದೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿ ಮಾಫಿಯಾದಿಂದ ರಾಜ್ಯ ಲೂಟಿ: ದೇವೇಗೌಡ
ಗಣಿ ಮಾಫಿಯಾದಿಂದ ರಾಜ್ಯದ ಸಂಪತ್ತು ಲೂಟಿಯಾಗುತ್ತಿದೆ ಎಂದು ....
ರಾಜ್ಯಪಾಲರಿಗೆ ಮುಖ್ಯಮಂತ್ರಿ ಮನವಿ
ನಾಳೆ ಬಜೆಟ್ ಅಧಿವೇಶನದಲ್ಲಿ ಎರಡು ವಿಧೇಯಕಗಳು
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...