ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಯಡಿಯ‌ೂರಪ್ಪ ಬಜೆಟ್ ವಿರುದ್ಧ ಟೀಕಾಪ್ರಹಾರ
ಬೆಂಗಳೂರು, ಗುರುವಾರ, 17 ಜುಲೈ 2008   ( 17:36 IST )
ಮುಖ್ಯಮಂತ್ರಿ ಯಡಿಯ‌ೂರಪ್ಪ ಮಂಡಿಸಿದ ಹ್ಯಾಟ್ರಿಕ್ ಬಜೆಟ್ಟಿಗೆ ವಿರೋಧಪಕ್ಷದ ಮುಖಂಡರಿಂದ ಟೀಕೆಯ ಸುರಿಮಳೆಯಾಗಿದೆ. ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಮಾತನಾಡಿ, 2 ರೂಪಾಯಿಗೆ ಅಕ್ಕಿ ಕೊಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದಿರಿ. ಆದರೆ ಈಗ ಅದರ ನೆನಪೇ ಆಗಲಿಲಿಲ್ಲವೆ ನಿಮಗೆ? ಎಂದು ಲೇವಡಿ ಮಾಡಿದ್ದಾರೆ.

ಬಜೆಟ್ಟಿನಲ್ಲಿ ಪುಂಖಾನುಪುಂಖ ಘೋಷಣೆಗಳನ್ನು ಮಾಡಿದ್ದೀರಿ. ಆದಾಯ ಕ್ರೋಢೀಕರಣ ಹೇಗೆ ಮಾಡುತ್ತೀರಿ ಎಂದು ಯಡಿಯ‌ೂರಪ್ಪನವರನ್ನು ಪ್ರಶ್ನಿಸಿದ್ದಾರೆ.

ಅಕ್ಕಿ ವಿತರಿಸುವುದು ಹಾಗಿರಲಿ, ಲಕ್ಷಾಂತರ ಮಂದಿಗೆ ಬಿಪಿಎಲ್ ಕಾರ್ಡ್ ಕೊಟ್ಟಿಲ್ಲ. ಈ ಬಗ್ಗೆ ಬಜೆಟ್‌ನಲ್ಲಿ ಏನೂ ಕ್ರಮ ಕೈಗೊಂಡಿಲ್ಲ. ಸರ್ಕಾರಿ ನೌಕರರ ವಯೋಮಿತಿ ಹೆಚ್ಚಿಸಿದ್ದೀರಿ. ಆದರೆ ವಯೋಮಿತಿ ಹೆಚ್ಚಿಸುವಂತೆ ನಿಮ್ಮನ್ನು ಯಾರು ಕೋರಿಕೊಂಡಿದ್ದರು. ಇದರಿಂದ ಯುವಕರಿಗೆ ಉದ್ಯೋಗಾವಕಾಶ ಸಿಗುವ ಸಾಧ್ಯತೆ ಕಡಿಮೆಯಾಗಿ ನಿರುದ್ಯೋಗ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇದೆ.

ಹಳ್ಳಿ ಜನರನ್ನು ಉದ್ದಾರ ಮಾಡುತ್ತೇವೆಂದು ಸಾರಾಯಿ ನಿಷೇಧಿಸಿದರು. ಆದರೆ ಹಳ್ಳಿಹಳ್ಳಿಯಲ್ಲಿ ವಿಸ್ಕಿ ಕೇಂದ್ರ ತೆರೆದರೆ ಹಳ್ಳಿಗರ ಆರೋಗ್ಯ ಕಾಪಾಡಲು ಸಾಧ್ಯವೇ? ಇತ್ತ ಒಂದುವರೆ ಲಕ್ಷದಷ್ಟು ಸಾರಾಯಿ ಮಾರಾಟಗಾರರು ಬೀದಿಪಾಲಾಗಿದ್ದಾರೆ. ಅವರ ಜೀವನೋಪಾಯಕ್ಕೆ ಕ್ರಮ ಕೈಗೊಳ್ಳುತ್ತೇವೆಂದವರು ಏನು ಮಾಡಿದ್ದಾರೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಉಗ್ರಪ್ಪ ವ್ಯಘ್ರ :

ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ ಉಗ್ರಪ್ಪ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಯಡಿಯ‌ೂರಪ್ಪ ಬಜೆಟ್ ಮಂಡಿಸುವ ಬದಲು ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಓದಿದಂತೆ ಕಾಣಿಸುತ್ತಿದೆ. ಇವರಿಗೆ ಪ್ರಣಾಳಿಕೆಗೆಗೂ ಬಜೆಟ್ಟಿಗೂ ವ್ಯತ್ಯಾಸ ಗೊತ್ತಿಲ್ಲವೆಂದು ಕಾಣಿಸುತ್ತದೆ. ಬರೀ ಭರವಸೆಗಳಿವೆ ಆದರೆ ಸಂಪನ್ಮೂಲ ಹೇಗೆ ಕ್ರೋಢೀಕರಿಸುತ್ತೇವೆಂದು ಹೇಳಿಲ್ಲ. ಆದ್ದರಿಂದ ಈ ಬಜೆಟ್ ಭರವಸೆಗಳು ಈಡೇರುತ್ತವೆ ಎಂಬ ನಂಬಿಕೆ ಬರುತ್ತಿಲ್ಲ ಎಂದು ಉಗ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬಿಜೆಪಿ ಮುಖ್ಯಮಂತ್ರಿಗಳು ಮೊದಲನೆಯ ಕ್ರಾಂತಿಕಾರಿ ಬಜೆಜ್ ಮಂಡಿಸಿದ್ದಾರೆ. ಕರ್ನಾಟಕವನ್ನು ರಾಮರಾಜ್ಯ ಮಾಡುತ್ತಾರೆಂಬ ಕಲ್ಪನೆ ಮತ್ತು ವಿಶ್ವಾಸ ನನಗಿತ್ತು. ಆದರೆ ನನ್ನವಿಶ್ವಾಸ ಸುಳ್ಳಾಗಿದೆ. ಕಳೆದ ಬಾರಿ ಸಮ್ಮಿಶ್ರ ಸರ್ಕಾರ ಇತ್ತು. ನನಗೆ ಮಿತ್ರಪಕ್ಷದವರು ಸರಿಯಾದ ಬಜೆಟ್ ಮಂಡಿಸಲು ಅವಕಾಶ ಕೊಡಲಿಲ್ಲ ಎಂದು ಯಡಿಯ‌ೂರಪ್ಪ ಆರೋಪ ಮಾಡುತ್ತಿದ್ದರು. ಆದರೆ ಅವರ ಜಜೆಟ್ ನೊಡಿದರೆ ಇದು ಸಮ್ಮಿಶ್ರ ಸರ್ಕಾರದ ಬಜೆಟ್ಟಿಗಿಂತ ಉತ್ತಮ ಎಂದು ನನಗನಿಸುವುದಿಲ್ಲ.

ಜೆಡಿಯು ಮುಖಂಡ ನಾಡಗೌಡ

ಬರಗಾಲಕ್ಕೆ ಸ್ಪಂದಿಸುವವರು ಯಾರು? ಬರ ನಿರ್ವಹಣೆಗೆ ಏನು ಯೋಜನೆ ಹಾಕಿಕೊಂಡಿಲ್ಲ. ಹಲವಾರು ಆಕರ್ಷಕ ಘೋಷಣೆ ಮಾಡಿದ್ದಾರೆ ನಿಜ. ಆದರೆ ಹಣ ಎಲ್ಲಿಂದ ತರುತ್ತೇವೆಂದು ಹೇಳಿಲ್ಲ. ಇದು ಸಮರ್ಪಕವಾಗಿ ಜಾರಿಯಾಗುವ ವಿಶ್ವಾಸ ನನಗಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕನ್ನಡದ ಮೇರುನಟ ಎಂ.ಪಿ.ಶಂಕರ್ ಅಸ್ತಂಗತ
ಶಾಸಕರ ಪಕ್ಷಾಂತರ: ಸಿಬಿಐ ತನಿಖೆ ಕೋರಿ ಅರ್ಜಿ
ಬಜೆಟ್: ರೈತರ ಓಲೈಕೆ, ಸರ್ಕಾರಿ ನೌಕರರಿಗೆ ಬಂಪರ್
ಕಬಿನಿಯಲ್ಲಿ ನೀರಿನ ಕೊರತೆ: ಬದಲಿ ಬೆಳೆಗೆ ಸಚಿವರ ಮನವಿ
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ಜನತೆಯ ನಿರೀಕ್ಷೆಗೆ ತಕ್ಕಂತ ಬಜೆಟ್: ಯಡಿಯ‌ೂರಪ್ಪ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಸಂಧಾನಕ್ಕೆ ಸಾಧ್ಯವಾಗದ ವಿಷಯವೊಂದು ನಿಮ್ಮ ಕಾರ್ಯವನ್ನು ತ್ರಾಸದಾಯಕವಾಗಿಸಬಹುದು. ನಿಮ್ಮ ವಿರೋಧಿಗಳು ಮತ್ತು ಕಚೇರಿ ಸಹವರ್ತಿಗಳೂ ಕೂಡ ನಿಮ್ಮ ನೈತಿಕ ಬಲವನ್ನು ಒಪ್ಪಿಕೊಳ್ಳುತ್ತಾರೆ. ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ನೀವು ಪಡೆಯಲಿದ್ದೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿ ಮಾಫಿಯಾದಿಂದ ರಾಜ್ಯ ಲೂಟಿ: ದೇವೇಗೌಡ
ಗಣಿ ಮಾಫಿಯಾದಿಂದ ರಾಜ್ಯದ ಸಂಪತ್ತು ಲೂಟಿಯಾಗುತ್ತಿದೆ ಎಂದು ....
ರಾಜ್ಯಪಾಲರಿಗೆ ಮುಖ್ಯಮಂತ್ರಿ ಮನವಿ
ನಾಳೆ ಬಜೆಟ್ ಅಧಿವೇಶನದಲ್ಲಿ ಎರಡು ವಿಧೇಯಕಗಳು
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...