ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕನ್ನಡದ ಮೇರುನಟ ಎಂ.ಪಿ.ಶಂಕರ್ ಅಸ್ತಂಗತ
ಮೈಸೂರು, ಗುರುವಾರ, 17 ಜುಲೈ 2008   ( 16:50 IST )
ಖ್ಯಾತ ಚಿತ್ರನಟ ಎಂ.ಪಿ. ಶಂಕರ್ ಮೈಸೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇದರೊಂದಿಗೆ ಕನ್ನಡ ಚಿತ್ರರಂಗದ ಮತ್ತೊಂದು ಮೇರು ವ್ಯಕ್ತಿತ್ವ ಮರೆಯಾದಂತಾಗಿದೆ.ಕೆಲದಿನಗಳಿಂದ ಎಂ.ಪಿ. ಶಂಕರ್ ಅಸ್ವಸ್ಥರಾಗಿದ್ದು, ಇಂದು(ಗುರುವಾರ) ಮೈಸೂರಿನ ವಿಜಯನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್ ತಲೆಮಾರಿನವರಾಗಿದ್ದ ಎಂ.ಪಿ. ಶಂಕರ್, ಕನ್ನಡ ಚಿತ್ರರಸಿಕರ ಮನಗೆದ್ದವರು.

ಸತ್ಯ ಹರಿಶ್ಚಂದ್ರ ಚಿತ್ರದ `ಕುಲದಲ್ಲಿ ಕೀಳ್ಯಾವುದೋ ಹುಚ್ಚಪ..' ಹಾಡಿನ ಮನೋಜ್ಞ ಅಭಿನಯಕ್ಕಾಗಿ ನೆನಪಾಗುವ ಎಂ.ಪಿ. ಶಂಕರ್, ಡಾ. ರಾಜ್, ನರಸಿಂಹರಾಜು, ದ್ವಾರಕೀಶ್, ವಿಷ್ಣುವರ್ಧನ್, ಕನ್ನಡ ಚಿತ್ರರಂಗದ ಅಗ್ರಜರೊಂದಿಗೆ ಆತ್ಮೀಯ ಒಡನಾಡ ಹೊಂದಿದವರಾಗಿದ್ದರು.

ಚಿತ್ರೋದ್ಯಮಿಗಳ ಶೋಕ

ಎಂಪಿ ಶಂಕರ್ ಅವರ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ದಿಗ್ಭ್ರಮೆ ವ್ಯಕ್ತವಾಗಿದೆ. ಚಿತ್ರರಂಗದ ಹಲವಾರು ಹಿರಿಯರು ತಮ್ಮ ದುಗುಡವನ್ನು ತೋಡಿಕೊಂಡಿದ್ದಾರೆ.

ನಿರ್ಮಾಪಕರ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು: ಕನ್ನಡ ಚಿತ್ರರಂಗ ಅವರನ್ನು ಕಳೆದುಕೊಂಡು ನಿಜಕ್ಕೂ ಬಡವಾಗಿದೆ. ಎಂ.ಪಿ.ಶಂಕರ್ ಅವರ ಸಾವಿನ ನಷ್ಟ ಭರಿಸುವುದು ಸಾಧ್ಯವಿಲ್ಲ.

ಹಿರಿಯ ನಟ ದ್ವಾರಕೀಶ್: ವನ್ಯಪ್ರಾಣಿಗಳ ಪ್ರೇಮಿಯಾಗಿದ್ದ ಎಂ.ಪಿ. ಶಂಕರ್, ಕನ್ನಡ ಚಿತ್ರರಂಗದ ಖಳನಾಯಕನ ಪಾತ್ರಕ್ಕೆ ವಿಶಿಷ್ಟತೆ ನೀಡಿದವರು. ಕಾಡುಪ್ರಾಣಿಗಳನ್ನು ಚಲನಚಿತ್ರದಲ್ಲಿ ತೋರಿಸಿದ ಕೀರ್ತಿಗೆ ಪಾತ್ರರು. ಅವರ ಸಾವು ಭರಿಸಲಾಗದ ನಷ್ಟ ಮತ್ತು ನೋವು ತಂದಿದೆ.

ಶಿವರಾಜ್ ಕುಮಾರ್: ಸಹೃದಯೀ ನಟರಾಗಿದ್ದರು. ಅತ್ಯಂತ ಮೃದು ಮನಸ್ಸಿನವರಾಗಿದ್ದ ಅವರು ಎಂ.ಪಿ.ಶಂಕರ್, ಖಳನಟನ ಪಾತ್ರವನ್ನು ಅತ್ಯಂತ ಸಮರ್ಥವಾಗಿ ಅಭಿನಯಿಸುತ್ತಿದ್ದರು. ಅವರ ಒಡನಾಟ ಒಂದು ಒಳ್ಳೆಯ ಅನುಭವ. ಅವರ ಸಾವು ನೋವು ತಂದಿದೆ.

ಹಿರಿಯ ನಟ ಶಿವರಾಂ: ದೈತ್ಯದೇಹಿ ಆದರೆ ಮಗುಮನಸ್ಸಿನ ವ್ಯಕ್ತಿ. ಪ್ರಾಣಿಗಳನ್ನು ಪ್ರೀತಿಸುವರು ಉತ್ತಮ ಮನುಷ್ಟತ್ವ ರೂಢಿಸಿಕೊಳ್ಳುತ್ತಾರೆ ಎಂಬುದು ರೂಢಿಮಾತು. ಇದಕ್ಕೆ ಸಾಕ್ಷಿ ಎಂಬಂತೆ ಉತ್ತಮ ಮನುಷ್ಯತ್ವ ರೂಢಿಸಿಕೊಂಡವರು. ನಿಧನದಿಂದ ತುಂಬಾ ಬೇಸರವಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶಾಸಕರ ಪಕ್ಷಾಂತರ: ಸಿಬಿಐ ತನಿಖೆ ಕೋರಿ ಅರ್ಜಿ
ಬಜೆಟ್: ರೈತರ ಓಲೈಕೆ, ಸರ್ಕಾರಿ ನೌಕರರಿಗೆ ಬಂಪರ್
ಕಬಿನಿಯಲ್ಲಿ ನೀರಿನ ಕೊರತೆ: ಬದಲಿ ಬೆಳೆಗೆ ಸಚಿವರ ಮನವಿ
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ಜನತೆಯ ನಿರೀಕ್ಷೆಗೆ ತಕ್ಕಂತ ಬಜೆಟ್: ಯಡಿಯ‌ೂರಪ್ಪ
ಪೆಟ್ರೋಲ್ ಬಂಕ್‌ನಲ್ಲಿ ಗಲಭೆ:ಉದ್ವಿಗ್ನ ವಾತಾವರಣ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಸಂಧಾನಕ್ಕೆ ಸಾಧ್ಯವಾಗದ ವಿಷಯವೊಂದು ನಿಮ್ಮ ಕಾರ್ಯವನ್ನು ತ್ರಾಸದಾಯಕವಾಗಿಸಬಹುದು. ನಿಮ್ಮ ವಿರೋಧಿಗಳು ಮತ್ತು ಕಚೇರಿ ಸಹವರ್ತಿಗಳೂ ಕೂಡ ನಿಮ್ಮ ನೈತಿಕ ಬಲವನ್ನು ಒಪ್ಪಿಕೊಳ್ಳುತ್ತಾರೆ. ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ನೀವು ಪಡೆಯಲಿದ್ದೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿ ಮಾಫಿಯಾದಿಂದ ರಾಜ್ಯ ಲೂಟಿ: ದೇವೇಗೌಡ
ಗಣಿ ಮಾಫಿಯಾದಿಂದ ರಾಜ್ಯದ ಸಂಪತ್ತು ಲೂಟಿಯಾಗುತ್ತಿದೆ ಎಂದು ....
ರಾಜ್ಯಪಾಲರಿಗೆ ಮುಖ್ಯಮಂತ್ರಿ ಮನವಿ
ನಾಳೆ ಬಜೆಟ್ ಅಧಿವೇಶನದಲ್ಲಿ ಎರಡು ವಿಧೇಯಕಗಳು
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...