|
| ಶಾಸಕರ ಪಕ್ಷಾಂತರ: ಸಿಬಿಐ ತನಿಖೆ ಕೋರಿ ಅರ್ಜಿ |
| ಬೆಂಗಳೂರು, ಗುರುವಾರ, 17 ಜುಲೈ 2008 ( 16:03 IST ) | |
ಆಪರೇಷನ್ ಕಮಲದ ಅಂಗವಾಗಿ ಕಾಂಗ್ರೆಸ್ ಮತ್ತು ಜೆಡಿಸ್‌ನಿಂದ ಆಯ್ಕೆಯಾಗಿದ್ದ ರಾಜ್ಯದ ಐವರು ಶಾಸಕರು ಬಿಜೆಪಿ ಸೇರಿದ್ದರ ಹಿನ್ನೆಲೆಯನ್ನು ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಚುನಾವಣೆ ನಡೆದು ಕೇವಲ 2 ತಿಂಗಳಾಗಿದೆ. ಆದಾಗಲೇ ರಾಜೀನಾಮೆ ನೀಡಿ ಬೇರೆ ಪಕ್ಷ ಸೇರಿರುವ ಈ ಐವರು ಶಾಸಕರು, ರಾಜ್ಯದ ಬೊಕ್ಕಸಕ್ಕೆ ಅನಗತ್ಯ ಹೊರೆ ತಂದಿದ್ದಾರೆ. ಶಾಸಕರು ಒಂದು ಪಕ್ಷದ ತತ್ವಸಿದ್ದಾಂತಗಳನ್ನು ಜನರಿಗೆ ವಿವರಿಸಿ ಗೆದ್ದುಬಂದು ನಂತರ ಬೇರೆ ಪಕ್ಷಗಳನ್ನು ಸೇರುತ್ತಿರುವುದು ಸರಿಯಲ್ಲ. ಇದು ಮೇಲ್ನೋಟಕ್ಕೆ ಅನುಮಾನಾಸ್ಪದವಾಗಿದ್ದು, ಇದರ ಹಿಂದೆ ಭಾರೀ ಅಕ್ರಮ ನಡೆದಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ದೂರಿದ್ದಾರೆ.
ಶಾಸಕರ ರಾಜೀನಾಮೆ ತಡೆಯಲು ಸೂಕ್ತ ಕಾನೂನು ಇಲ್ಲವಾಗಿದೆ. ಪಕ್ಷಾಂತರ ನಿಷೇಧ ಕಾಯಿದೆ ಈ ಶಾಸಕರಿಗೆ ಅನ್ವಯವಾಗುತ್ತಿಲ್ಲ. ಆದ್ದರಿಂದ ರಾಜ್ಯ ಬೊಕ್ಕಸಕ್ಕೆ ಆಗುತ್ತಿರುವ ಅನಗತ್ಯ ಹೊರೆ ತಪ್ಪಿಸಬೇಕಾದರೆ ಶಾಸಕರ ಹಿಂಬಾಗಿಲ ಪ್ರವೇಶ ತಡೆಗಟ್ಟಲು ಸೂಕ್ತ ಶಾಸನ ರೂಪಿಸಬೇಕು. ಇದಕ್ಕಾಗಿ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ವಕೀಲ ಎನ್.ಶ್ರೀರಾಮ ರೆಡ್ಡಿ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಅರ್ಜಿ ವಿಚಾರಣೆ ಇನ್ನೂ ನಡೆಯಬೇಕಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಸಂಧಾನಕ್ಕೆ ಸಾಧ್ಯವಾಗದ ವಿಷಯವೊಂದು ನಿಮ್ಮ ಕಾರ್ಯವನ್ನು ತ್ರಾಸದಾಯಕವಾಗಿಸಬಹುದು. ನಿಮ್ಮ ವಿರೋಧಿಗಳು ಮತ್ತು ಕಚೇರಿ ಸಹವರ್ತಿಗಳೂ ಕೂಡ ನಿಮ್ಮ ನೈತಿಕ ಬಲವನ್ನು ಒಪ್ಪಿಕೊಳ್ಳುತ್ತಾರೆ. ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ನೀವು ಪಡೆಯಲಿದ್ದೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|