ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ಬೆಂಗಳೂರು, 17 ಜುಲೈ 2008   ( 14:03 IST )
nrb
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯಡಿಯ‌ೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗುರುವಾರ ತನ್ನ ಚೊಚ್ಚಲ ಬಜೆಟ್ ಮಂಡಿಸಿದ್ದು, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಅನೇಕ ಜನಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದೆ.

ರೈತರಿಗೆ ಉಚಿತ ವಿದ್ಯುತ್, ಕೃಷಿ ಹಾಗೂ ಪೂರಕ ವಲಯಗಳಿಗೆ ಶೇ.3ರ ದರದ ಬಡ್ಡಿಯಲ್ಲಿ ಸಾಲ, ಪ್ರತಿರೈತರಿಗೆ ಬಿತ್ತನೆ ಬೀಜ ಮತ್ತು ಇತರ ಖರೀದಿಗೆ ತಲಾ 1000 ರೂಪಾಯಿ ಸಹಾಯಧನ, ವಸಾಹತು ವಿದ್ಯುತ್ ಉತ್ಪಾದನೆಗೆ ಉತ್ತೇಜನ, ಐಟಿಐ ಸಂಸ್ಥೆ ಮೇಲ್ದರ್ಜೆಗೆ 300 ಕೋಟಿ ರೂಪಾಯಿ ಇವು ವಿತ್ತಸಚಿವರೂ ಆಗಿರುವ ಯಡಿಯ‌ೂರಪ್ಪ ಮಂಡಿಸಿದ ಆಯವ್ಯಯ ಪತ್ರದ ಮುಖ್ಯಾಂಶಗಳು.

ಶುಭ್ರ ಬಿಳಿಯ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ಯಡಿಯ‌ೂರಪ್ಪ, ರಾಷ್ಟ್ರಕವಿ ಕುವೆಂಪು ವಿರಚಿತ ಕವನದೊಂದಿಗೆ ಬಜೆಟ್ ಭಾಷಣ ಆರಂಭಿಸಿದರು. ಮುಖ್ಯಮಂತ್ರಿಗಳು 10ಎಚ್‌ಪಿ ಪಂಪ್ ಸೆಟ್ ಹೊಂದಿರುವ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದ ಕೂಡಲೇ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸುವ ಮ‌ೂಲಕ ಹರ್ಷಾತಿರೇಕ ವ್ಯಕ್ತಪಡಿಸಿದರು.
ಇದಲ್ಲದೆ, ಬಿತ್ತನೆ ಬೀಜ ಹಾಗೂ ಇನ್ನಿತರ ಸೌಕರ್ಯಗಳಿಗೆ ಕೃಷಿಕರಿಗೆ ತಲಾ ಒಂದು ಸಾವಿರ ರೂಪಾಯಿ ಸಹಾಯಧನವನ್ನು ಅವರು ಪ್ರಕಟಿಸಿದರು.

ರಾಜ್ಯ ಬಜೆಟ್ ಮುಖ್ಯಾಂಶಗಳು

ಮೀನುಗಾರಿಕೆಯಲ್ಲಿ ಶೀತಲೀಕರಣ ವ್ಯವಸ್ಥೆ ಸಂಪೂರ್ಣ ವ್ಯಾಟ್ ಮುಕ್ತ.

ಎಲ್ಲಾ ಜಿಲ್ಲೆಗಳಿಗೆ ಮ‌ೂಲಸೌಕರ್ಯ

ಅಭಿವೃದ್ದಿಗೆ ಕರ್ನಾಟಕ ಟ್ವೆಂಟಿ:20 ಕಾರ್ಯಪಡೆ

ಐಟಿಐ ಸಂಸ್ಥೆ ಮೇಲ್ದರ್ಜೆಗೆ 300 ಕೋಟಿ ರೂಪಾಯಿ

ಸಣ್ಣ ನೀರಾವರಿ, ಹಾಗೂ ಕೆರೆಗಳಿಗೆ ಏಕರೂಪ

ನಗರಪ್ರದೇಶ ಹೊರತು ಪಡಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್

ಬಿತ್ತನೆ ಬೀಜ ಖರೀದಿಗೆ ತಲಾ 1000 ರೂಪಾಯಿ ಸಹಾಯಧನ

ಬಡ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣಕ್ಕೆ ಶೇ.6ರ ಬಡ್ಡಿದರದಲ್ಲಿ ಸಹಾಯಧನ

ಡಿ.ಎಂ. ನಂಜುಂಡಪ್ಪ ವರದಿ ಜಾರಿಗೆ 2,547ಕೋಟಿ ರೂಪಾಯಿ

ಹಿರಿಯ ನಾಗರಿಕರಿಗೆ ಶೇ.25ರ ರಿಯಾಯಿತಿ ಪಾಸ್

10 ಲಕ್ಷ ಮಂದಿಗೆ ಉದ್ಯೋಗ ಕೌಶಲ್ಯ ತರಬೇತಿ

ಗ್ರಾಮ ಪಂಚಾಯತ್ ಸದಸ್ಯರಿಗೆ ಮಾಸಿಕ ಗೌರವಧನ

ತಾಯಿಭಾಗ್ಯ ಯೋಜನಗೆ 38 ಕೋಟಿ ರೂಪಾಯಿ

ವೃದ್ಧರು, ವಿಧವೆಯರ ಮಾಸಾಶನಕ್ಕೆ ಸ್ಮಾರ್ಟ್‌ಕಾರ್ಡ್

1000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ

ಬೆಂಗಳೂರಿಗೆ 10 ಫ್ಲೈಓವರ್, ಅಂಡರ್‌ಪಾಸ್‌ಗಳಿಗೆ 350 ಕೋಟಿ

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಶೇ 47 ಅನುದಾನ ಹೆಚ್ಚಳ
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕೈಗಾರಿಕೆಗೆ ವಿಷನ್ ಗ್ರೂಪ್, ಉನ್ನತ ಶಿಕ್ಷಣಕ್ಕೆ ಸಾಲ
ರೈತರಿಗೆ ಸಾಲು ಸಾಲು ಕೊಡುಗೆ
ಸಾರಿಗೆ ವ್ಯವಸ್ಥೆ ಸುಧಾರಣೆಗೆ ಸಂಕಲ್ಪ
ಯಡಿಯ‌ೂರಪ್ಪ ಬಜೆಟ್ ವಿರುದ್ಧ ಟೀಕಾಪ್ರಹಾರ
ಕನ್ನಡದ ಮೇರುನಟ ಎಂ.ಪಿ.ಶಂಕರ್ ಅಸ್ತಂಗತ
ಶಾಸಕರ ಪಕ್ಷಾಂತರ: ಸಿಬಿಐ ತನಿಖೆ ಕೋರಿ ಅರ್ಜಿ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಸಂಧಾನಕ್ಕೆ ಸಾಧ್ಯವಾಗದ ವಿಷಯವೊಂದು ನಿಮ್ಮ ಕಾರ್ಯವನ್ನು ತ್ರಾಸದಾಯಕವಾಗಿಸಬಹುದು. ನಿಮ್ಮ ವಿರೋಧಿಗಳು ಮತ್ತು ಕಚೇರಿ ಸಹವರ್ತಿಗಳೂ ಕೂಡ ನಿಮ್ಮ ನೈತಿಕ ಬಲವನ್ನು ಒಪ್ಪಿಕೊಳ್ಳುತ್ತಾರೆ. ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ನೀವು ಪಡೆಯಲಿದ್ದೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿ ಮಾಫಿಯಾದಿಂದ ರಾಜ್ಯ ಲೂಟಿ: ದೇವೇಗೌಡ
ಗಣಿ ಮಾಫಿಯಾದಿಂದ ರಾಜ್ಯದ ಸಂಪತ್ತು ಲೂಟಿಯಾಗುತ್ತಿದೆ ಎಂದು ....
ರಾಜ್ಯಪಾಲರಿಗೆ ಮುಖ್ಯಮಂತ್ರಿ ಮನವಿ
ನಾಳೆ ಬಜೆಟ್ ಅಧಿವೇಶನದಲ್ಲಿ ಎರಡು ವಿಧೇಯಕಗಳು
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...