ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ನಾಳೆ ಬಜೆಟ್ ಅಧಿವೇಶನದಲ್ಲಿ ಎರಡು ವಿಧೇಯಕಗಳು
ಬೆಂಗಳೂರು, 16 ಜುಲೈ 2008   ( 18:14 IST )
ನಾಳೆಯಿಂದ ಪ್ರಾರಂಭಗೊಳ್ಳಲಿರುವ ಬಜೆಟ್ ಅಧಿವೇಶನದಲ್ಲಿ ಎರಡು ವಿಧೇಯಕಗಳು ಮಂಡನೆಯಾಗಲಿದೆ ಎಂದು ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ವಿಧಾನಸಭಾಧಿವೇಶನದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ 2008 ಹಾಗೂ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2007 ಮಂಡನೆಯಾಗಲಿದೆ ಎಂದು ತಿಳಿಸಿದರು.

ಅಧಿವೇಶನದ ಮೊದಲ ದಿನದಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಬಜೆಟ್ ಮಂಡಿಸಲಿದ್ದಾರೆ. ಬಳಿಕ ಅಧಿವೇಶನ ಮುಂದಿನ ದಿನಕ್ಕೆ ಮುಂದೂಡಲ್ಪಡಲಿದ್ದು, ಬಜೆಟ್ ಕುರಿತು ಚರ್ಚೆ ನಡೆಯಲಿದೆ. ಇದೇ ತಿಂಗಳು 31ರವರೆಗೆ ಒಟ್ಟು 11 ದಿನಗಳ ಕಾಲ ಕಲಾಪ ನಡೆಯಲಿದೆ ಎಂದು ಅವರು ಹೇಳಿದರು.

ಕಳೆದ ಅಧಿವೇಶನದಲ್ಲಿ ಕೆಲ ಸದಸ್ಯರು ತಮ್ಮ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದು, ಈ ಅಧಿವೇಶನದಲ್ಲಿ ತಮ್ಮ ಭಾವನೆಯನ್ನು ವ್ಯಕ್ತಪಡಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸದಸ್ಯರಿಗೆ ಕಿವಿಮಾತು ಹೇಳಿದ ಅವರು, ಸದನದಲ್ಲಿ ಸದಸ್ಯರು ಧರಣಿ, ಘೋಷಣೆ ಮುಂತಾದ ಪ್ರತಿಭಟನೆಗಳ ಮೂಲಕ ಕಲಾಪ ನಿರ್ವಹಣೆಗೆ ಭಂಗ ತರುವುದು ಸರಿಯಲ್ಲ. ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಪ್ರಜಾಪ್ರಭುತ್ವದ ಆಶಯವಾಗಿದೆ. ಈ ನಿಟ್ಟಿನಲ್ಲಿ ಸಂಸದೀಯ ಕಲಾಪ ಕುರಿತು ನೂತನ ಸದಸ್ಯರಿಗೆ ತರಬೇತಿ ನೀಡುವ ಉದ್ದೇಶವೂ ಇದೆ ಎಂದು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಗಣಿ ಮಾಫಿಯಾದಿಂದ ರಾಜ್ಯ ಲೂಟಿ: ದೇವೇಗೌಡ
ಜನತಾ ಪರಿವಾರ ಒಗ್ಗೂಡಿಸಲು ಪ್ರಯತ್ನ: ನಾಡಗೌಡ
ಅಹವಾಲು ಸಲ್ಲಿಸಿದ ನಾಗರೀಕರು
ಹೊಸತೆರಿಗೆ ಪದ್ಧತಿಗೆ ಚಿಂತನೆ
ಶುಚಿತ್ವ ಕಾಣದ ನಗರ
ಜನಪರ ಬಜೆಟ್‌ಗೆ ರಾಜ್ಯಸರ್ಕಾರ ಚಿಂತನೆ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಜನರೊಂದಿಗೆ ಬೆರೆಯುವುದು ಮತ್ತು ನಿಮ್ಮ ಹವ್ಯಾಸದಲ್ಲಿ ಆನಂದಪಡುವುದು ಈಗ ಮಾಡಬೇಕಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್: ಸಮಯಕ್ಕೊಂದು ಸುಳ್ಳು- ಖರ್ಗೆ
ರಾಜ್ಯದಲ್ಲಿ ಬರಪರಿಸ್ಥಿತಿ ತಲೆದೋರಿದ್ದು ಶೀಘ್ರ ಪರಿಹಾರ ಕಾಮಗಾರಿ ಆರಂಭಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷ ...
ಬಿಜೆಪಿಗೆ ಮತ್ತೊಬ್ಬ ದಳಪತಿ ಸೇರ್ಪಡೆ
ರೋಷನ್ ಬೇಗ್‌ರಿಂದ ಹಣ ದುರುಪಯೋಗ?
ಮನರಂಜನೆ
ಚಿತ್ರ ಸುದ್ದಿ - ದುನಿಯಾ ಖ್ಯಾತಿಯ ಬಳಿಕ ನಾಯಕಿ ರಶ್ಮಿ ಸಿಕ್ಕಾಪಟ್ಟೆ ಸಂಭಾವನೆ ಕೇಳುತ್ತಿದ್ದಾರೆ ಎಂದು ನಿಮಾರ್ಪಕ ಸೂರಪ್ಪ ಬಾಬು ಇತ್ತೀಚೆಗೆ ಹೇಳಿಕೆ ನೀಡಿರುವ ಬಗ್ಗೆ ರಶ್ಮಿ ಮುಖ ಊದಿಸಿಕೊಂಡಿದ್ದಾರೆ.
ಮುಂದೆ ಓದಿ|ಮತ್ತಷ್ಟು...