ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
23 ತಾಲೂಕುಗಳ ರಚನೆಗೆ ಸರ್ಕಾರದ ಚಿಂತನೆ
ಮಂಗಳೂರು, ಶನಿವಾರ, 12 ಜುಲೈ 2008   ( 19:06 IST )
ರಾಜ್ಯದಲ್ಲಿ ಹೊಸದಾಗಿ 23 ತಾಲೂಕುಗಳ ರಚನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಎರಡು ಹಂತಗಳಲ್ಲಿ ನೂತನ ತಾಲೂಕುಗಳ ರಚನೆ ನಡೆಯಲಿದೆ ಎಂದು ಗೃಹ ಸಚಿವ ವಿ.ಎಸ್. ಆಚಾರ್ಯ ತಿಳಿಸಿದ್ದಾರೆ.

ಖಾಸಗಿ ಭೇಟಿ ನಿಮಿತ್ತ ಇಲ್ಲಿನ ಬ್ರಹ್ಮಾವರಕ್ಕೆ ಇಂದು(ಶನಿವಾರ) ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮುಂದಿನ ಆರು ತಿಂಗಳಲ್ಲಿ 10 ನೂತನ ತಾಲೂಕುಗಳ ರಚನೆ ನಡೆಸಲು ಉದ್ದೇಶಿಸಲಾಗಿದ್ದು, ಹೊಸದಾಗಿ ರಚಿತಗೊಂಡಿರುವ ಜಿಲ್ಲೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲೆಯೊಂದರಲ್ಲೇ ಎರಡು ತಾಲೂಕುಗಳನ್ನು ರಚನೆಗೊಳಿಸಲು ನಿರ್ಧರಿಸಿದ್ದು, ಬ್ರಹ್ಮಾವರ ಮತ್ತು ಬೈಂದೂರುಗಳನ್ನು ತಾಲೂಕು ಕೇಂದ್ರವನ್ನಾಗಿ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಅಧಿಕಾರದ ವಿಕೇಂದ್ರೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, ಇದರಿಂದ ರಾಜ್ಯದ ಜನತೆಗೆ ಪ್ರಯೋಜನವಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಕ್ಷಾಂತರ ಶಾಸಕರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಉಚಿತ ವಿದ್ಯುತ್: ಬಜೆಟ್ಟಿನಲ್ಲಿ ಸ್ಪಷ್ಟನೆ
ಸುವರ್ಣ ವಿಧಾನಸೌಧಕ್ಕೆ ಶೀಘ್ರ ಸ್ಥಳ ನಿಗದಿ: ಯಡಿಯ‌ೂರಪ್ಪ
ಜೆಸಿನಗರ ಗಲಭೆಗೆ ಸರ್ಕಾರವೇ ಹೊಣೆ
ಕಾಂಗ್ರೆಸ್‌ಗೆ ಬಿಸಿಮುಟ್ಟಿಸಿದ ದೇವೇಗೌಡರ ಷರತ್ತು
ಸಿಎಂ ಹೆಸರಲ್ಲಿ ಅರ್ಚನೆ: ಅದೇ ರಾಗ, ಅದೇ ಹಾಡು
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಪಚುನಾವಣೆಯಲ್ಲಿ ಜೆಡಿಎಸ್ ಜತೆ ಸಖ್ಯ: ಖರ್ಗೆ
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಪಕ್ಷಾಂತರಗೊಂಡಿರುವುದರಿಂದ ಎರಡೂ ಪಕ್ಷಗಳ ನಾಯಕರು ಈಗ ಸಮಾನ ದುಃಖಿಗಳು.
ಲೋಕಸಭಾ ಚುನಾವಣೆ ಕಣದಿಂದ ಅಂಬರೀಷ್ ಹಿಂದಕ್ಕೆ
ನೈಸ್ ಕಾಮಗಾರಿಗೆ ಸುಪ್ರೀಂ ಕೋರ್ಟ್ ಅಸ್ತು
ಮನರಂಜನೆ
ಚಿತ್ರ ಸುದ್ದಿ - ಗಾಳಿಪಟದಲ್ಲಿ ಬೋಲ್ಡ್ ನಟಿಯಾಗಿ ಕಾಣಿಸಿಕೊಂಡ ಭಾವನಾ ರಾವ್ ಈಗ ಗಗನಸಖಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜು ನಿರ್ದೇಶಿಸುತ್ತಿರುವ ಮುಂದಿನ ಚಿತ್ರ 'ಗಗನಸಖಿ'ಗೆ ಭಾವನ ನಾಯಕಿ.
ಮುಂದೆ ಓದಿ|ಮತ್ತಷ್ಟು...