ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಚುನಾವಣೆಗೆ ಸಜ್ಜುಗೊಳ್ಳಲು ವೆಂಕಯ್ಯ ನಾಯ್ಡು ಕರೆ
ಬೆಂಗಳೂರು, ಶನಿವಾರ, 5 ಜುಲೈ 2008   ( 18:47 IST )
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಸಮಾಜವಾದಿ ಪಕ್ಷ ನೀಡಿರುವ ಬೆಂಬಲ ಅಸಹಜವಾಗಿದ್ದು, ಯಾವುದೇ ಸಂದರ್ಭದಲ್ಲಿ ಸರ್ಕಾರ ಉರುಳಿ ಬೀಳುವ ಸಾಧ್ಯತೆಗಳಿವೆ ಎಂದು ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಅಭಿಪ್ರಾಯ ಪಟ್ಟಿದ್ದಾರೆ.

ಇಂದು(ಶನಿವಾರ) ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕಡುವೈರಿಯಾಗಿದ್ದ ಕಾಂಗ್ರೆಸ್ ಜೊತೆ ಸಮಾಜವಾದಿ ಪಕ್ಷ ಏಕಾಏಕಿ ಬೆಂಬಲ ಸೂಚಿಸಿರುವುದು ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಈ ದಿಢೀರ್ ಬೆಳವಣಿಗೆಯಿಂದ ಸರ್ಕಾರದ ಅಸ್ಥಿರತೆ ಬಗ್ಗೆ ಅನುಮಾನ ಕಂಡುಬಂದಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಶೀಘ್ರವೇ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕೆಂದು ಅವರು ಒತ್ತಾಯಿಸಿದರು.

ಎಸ್ಪಿ ಜೊತೆಗಿನ ಒಳ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ ಯವುದೇ ಸಂದರ್ಭದಲ್ಲಾದರೂ ಪತನಗೊಳ್ಳಬಹುದು. ಈ ನಿಟ್ಟಿನಲ್ಲಿ ಶೀಘ್ರವೇ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳುವಂತೆ ಕಾರ್ಯಕರ್ತರಿಗೆ ಕರೆ ಅವರು ನೀಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಮಲದಳಕ್ಕೆ ಸಿಂಧ್ಯಾ ಸೇರ್ಪಡೆ?
ಬಿಬಿಎಂಪಿ ಚುನಾವಣೆಗೆ ಬಿಜೆಪಿಯಿಂದ ಭರದ ಸಿದ್ಧತೆ
ಶಂಕಿತ ಎಲ್‌ಟಿಟಿಇ ಸದಸ್ಯನ ಬಂಧನ
ನವೋದಯ ಶಾಲೆಗಳಲ್ಲಿ ಸಿಇಟಿ ನಡೆಸದಂತೆ ಒತ್ತಾಯ
ಬೆಂಗಳೂರಿಗೆ ಕಾಲಿಡಲಿರುವ ವೈನ್ ಮತ್ತು ಡೈನ್
ಹೈಕೋರ್ಟ್ ತೀರ್ಪು ಖಂಡಿಸಿ ಕರವೇ ಪ್ರತಿಭಟನೆ
ಗ್ರಹ ಗತಿ
ದೈನಿಕ - ಮ್ಮ ಸಾಮರ್ಥ್ಯದ ಬಗ್ಗೆ ಇಂದು ನೀವು ಹೆಚ್ಚು ಭರವಸೆಯಿಂದಿರುತ್ತೀರಿ.ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮತ್ತು ನಿಮಗೆ ಮಾನಸಿಕ ನಿರಾಳತೆ ನೀಡುತ್ತವೆ. ಮಿತ್ರರ ಸಹಕಾರವೂ ದೊರೆಯಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಾಹಿತಿಗಳ ವಿರುದ್ಧ ಕುಮಾರಸ್ವಾಮಿ ಕಿಡಿ
ರಾಜ್ಯದಲ್ಲಿ ಸ್ಥಿತಿಗತಿಗಳ ಬಗ್ಗೆ ಕೇಂದ್ರಕ್ಕೆ ಅರಿವು ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ....
ರಾಜ್ಯದ ಸಮಸ್ಯೆ: ದೆಹಲಿಗೆ ಕಾಂಗ್ರೆಸ್ ನಿಯೋಗ
ಪೆಟ್ರೋಲ್ ಕೊರತೆ ಇಲ್ಲ: ಹರತಾಳ್ ಹಾಲಪ್ಪ
ಮನರಂಜನೆ
ಚಿತ್ರ ಸುದ್ದಿ - ಪೈರಸಿ ಮಾಡುವವರನ್ನು ವಿರುದ್ಧ ಗೂಂಡಾ ಕಾಯ್ದೆ ಅಡಿ ಬಂಧಿಸಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಾಣಿಜ್ಯ ಮಂಡಳಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ
ಮುಂದೆ ಓದಿ|ಮತ್ತಷ್ಟು...