|
| ಛಾಪಾ ಹಗರಣ ಆರೋಪಿ ತೆಲಗಿಗೆ ಮನೆಊಟದ ಬಯಕೆ |
| ಬೆಂಗಳೂರು, ಶುಕ್ರವಾರ, 4 ಜುಲೈ 2008 ( 13:16 IST ) | |
ಕಾಗದ ಹಗರಣದ ಪ್ರಮುಖ ಆರೋಪಿ, ವಿಚಾರಣಾಧೀನ ಕೈದಿ ಅಬ್ದುಲ್ ಕರೀಂ ತೆಲಗಿಗೆ ಮನೆ ಊಟ ತಪ್ಪಿಹೋಗಿರುವುದು ಚಿಂತೆಗೀಡುಮಾಡಿದೆ. ಬೆಂಗಳೂರು ಕೇಂದ್ರೀಯ ಕಾರಾಗೃಹದಲ್ಲಿ ಒಂದು ತಿಂಗಳ ಕಾಲದ ಬಂಧನದಲ್ಲಿರುವ ತೆಲಗಿಯನ್ನು ಒಂಟಿತನ, ಮಧುಮೇಹ ಮತ್ತು ಹೆಚ್‌ಐವಿ ಸೋಂಕು ಕಾಡುತ್ತಿರುವುದರಿಂದ ಮನೆಊಟ ಬಯಸಿರುವುದಾಗಿ ಹೇಳಿದ್ದಾನೆ.
ಜೈಲಿನ ಅಧಿಕಾರಿಗಳಿಗೆ ತೆಲಗಿ ಕೋರಿಕೆ ಬಗ್ಗೆ ಸಹಾನುಭೂತಿ ಹೊಂದಿದ್ದರೂ, ಏನಾದರೂ ಎಡವಟ್ಟು ಆಗಬಹುದೆಂದು ಭಾವಿಸಿ ಅವನ ಬೇಡಿಕೆಗೆ ಒಪ್ಪಿಲ್ಲ. ಆದರೆ ಅವನಿಗೆ ಮನೆಯ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಏನಾದರೂ ಮಾಡಲು ಸಾಧ್ಯವೇ ಎಂದು ಅಧಿಕಾರಿಗಳು ಆಹಾರತಜ್ಞರ ನೆರವನ್ನು ಕೋರಿದ್ದಾರೆ. ತೆಲಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾದ ಎಲ್ಲ ನೆರವನ್ನು ನೀಡುವುದಾಗಿ ಅವರು ಹೇಳಿದ್ದಾರೆ.
ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿಯಾದ ತೆಲಗಿಯನ್ನು ಬ್ಯಾರಿಕೇಡ್ ಕೋಣೆಯಲ್ಲಿ ಇರಿಸಲಾಗಿದೆ.ಕ್ಲೋಸ್ಟ್ ಸರ್ಕ್ಯೂಟ್ ಕ್ಯಾಮೆರಾ ಮೂಲಕ ತೆಲಗಿ ಬಗ್ಗೆ ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ವೈಯಕ್ತಿಕ ಗಮನಹರಿಸಿದ್ದಾರೆ. ಜೈಲಿನ ಸಿಬ್ಬಂದಿ ಜತೆ, ಪೊಲೀಸರು ಕೂಡ ಕಾವಲು ಕಾಯುತ್ತಿದ್ದಾರೆ. ತೆಲಗಿಯನ್ನು ಇರಿಸಿರುವ ಜೈಲುಕೋಣೆಯೊಳಗೆ ಯಾವುದೇ ನಿಷೇಧಿತ ವಸ್ತು ಮತ್ತು ಮೊಬೈಲ್ ಫೋನ್ ಬಳಸದಂತೆ ನಿಗಾವಹಿಸಲು ಹಿರಿಯ ಜೈಲು ಅಧಿಕಾರಿಗಳು ಆಗಾಗ್ಗೆ ದಿಢೀರ್ ಭೇಟಿ ನೀಡುತ್ತಿದ್ದಾರೆ.
ಪುಣೆಯ ಎರವಾಡ ಜೈಲಿನಲ್ಲಿ ಇರಿಸಲಾಗಿದ್ದ ತೆಲಗಿಯನ್ನು ಜೂ.2ರಂದು ಬೆಂಗಳೂರು ಕೇಂದ್ರೀಯ ಕಾರಾಗೃಹಕ್ಕೆ ಕರೆತರಲಾಗಿದೆ. ಯೆರವಾಡದಲ್ಲಿ ವಿಡಿಯೋಕಾನ್ಫರೆನ್ಸ್ ಮೂಲಕ ವಿಚಾರಣೆ ಕಷ್ಟವಾಗಿದ್ದರಿಂದ ವಿಶೇಷ ಕೋರ್ಟ್ ಆದೇಶದ ಮೇಲೆ ಅವನನ್ನು ಬೆಂಗಳೂರಿಗೆ ಕರೆತರಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|