ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
10 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ
ಬೆಂಗಳೂರು, ಶುಕ್ರವಾರ, 4 ಜುಲೈ 2008   ( 12:32 IST )
ಮಾದಕ ವಸ್ತು ಕಳ್ಳ ಸಾಗಣೆ ಮಾಡುತ್ತಿದ್ದ ಯುವಕ ಹಾಗೂ ಇಬ್ಬರು ವಿದೇಶಿ ಮಹಿಳೆಯರನ್ನು ಅಬಕಾರಿ ಮತ್ತು ಸುಂಕ ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಬಂಧಿತರಿಂದ 10ಕೋಟಿ ರೂ. ಮೌಲ್ಯದ 3 ಕೆ.ಜಿ. ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಯುವತಿಯರು ಥಾಯ್ಲೆಂಡ್ ಮತ್ತು ವೆನಿಜುಲಾ ಮೂಲದವರೆಂದು ಗುರುತಿಸಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಯುವಕ ದೇಹದ ಒಳಗೆ ಶಸ್ತ್ತ್ರ ಚಿಕಿತ್ಸೆ ಮಾಡಿಸಿ, ಕ್ಯಾಪ್ಸೂಲುಗಳನ್ನು ಅಡಗಿಸಿಟ್ಟಿದ್ದ. ಕ್ಯಾಪ್ಸೂಲಿನಲ್ಲಿ ಹೆರಾಯಿನ್ ತುಂಬಲಾಗಿತ್ತು. ಅಂತೆಯೇ ಮಹಿಳೆ ತನ್ನ ವ್ಯಾನಿಟಿ ಬ್ಯಾಗಿನಲ್ಲಿಲ್ಲಿ ಹೆರಾಯಿನ್ ತುಂಬಿದ ಕ್ಯಾಪ್ಸೂಲ್‌ಗಳನ್ನು ಇಟ್ಟುಕೊಂಡಿದ್ದಳು.

ಬೆಂಗಳೂರಿನಿಂದ ಕೌಲಲಂಪುರಕ್ಕೆ ತೆರಳುವ ವಿಮಾನದಲ್ಲಿ ಈ ಮೂವರು ಪ್ರಯಾಣಿಸಲು ಯತ್ನಿಸಿದ ಸಂದರ್ಭದಲ್ಲಿ ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಹೆರಾಯಿನ್ ಇರುವುದು ಕಂಡು ಬಂತು. ಕೂಡಲೇ ಅಧಿಕಾರಿ ತಪಾಸಣೆ ನಡೆಸಿ ಕೋಟಿ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಾಹಿತಿಗಳ ವಿರುದ್ಧ ಕುಮಾರಸ್ವಾಮಿ ಕಿಡಿ
ಬೆಳಗಾವಿ ಹೊರತುಪಡಿಸಿ ಉಳಿದಂತೆ ಶಾಂತಿಯುತ ಬಂದ್
ಲಾರಿ ಮುಷ್ಕರ, ಬಂದ್‌ನಿಂದ ಕಂಗೆಟ್ಟ ಶ್ರೀಸಾಮಾನ್ಯ
ಪಾಲಿಕೆ ಚುನಾವಣೆಗೆ ಪಕ್ಷಗಳ ಕಸರತ್ತು ಪ್ರಾರಂಭ
ಜೆಡಿಎಸ್ ಮುಗಿಸಲು ಷಡ್ಯಂತ್ರ: ರೇವಣ್ಣ ಆರೋಪ
ಸುಪ್ರಿಂಕೋರ್ಟ್ ಮೊರೆಗೆ ಕರವೇ ನಿರ್ಧಾರ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಲಾರಿ ಮುಷ್ಕರ, ಬಂದ್‌ನಿಂದ ಕಂಗೆಟ್ಟ ಶ್ರೀಸಾಮಾನ್ಯ
ಒಂದು ಕಡೆ ಲಾರೀ ಮುಷ್ಕರ ಇನ್ನೊಂದೆಡೆ ವಿಶ್ವಹಿಂದೂ ಪರಿಷತ್ ಕರೆಕೊಟ್ಟಿರುವ ಬಂದ್‌ನಿಂದಾಗಿ ....
ಸುಪ್ರಿಂಕೋರ್ಟ್ ಮೊರೆಗೆ ಕರವೇ ನಿರ್ಧಾರ
ಜೆಡಿಎಸ್ ಮುಗಿಸಲು ಷಡ್ಯಂತ್ರ: ರೇವಣ್ಣ ಆರೋಪ
ಮನರಂಜನೆ
ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ.
ಮುಂದೆ ಓದಿ|ಮತ್ತಷ್ಟು...