ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ದೆಹಲಿಗೆ ತೆರಳಿದ ಜೆಡಿಎಸ್ ನಿಯೋಗ
ಬೆಂಗಳೂರು, ಬುಧವಾರ, 2 ಜುಲೈ 2008   ( 18:53 IST )
ಸರ್ವಪಕ್ಷ ನಿಯೋಗವನ್ನು ಬಹಿಷ್ಕರಿಸುವ ಜೆಡಿಎಸ್ ಇಂದು(ಬುಧವಾರ) ಪ್ರತ್ಯೇಕವಾಗಿ ಪ್ರಧಾನ ಮಂತ್ರಿ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಲು ನವದೆಹಲಿಗೆ ತೆರಳಿದೆ.ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ನೇತೃತ್ವದಲ್ಲಿ ದೆಹಲಿಗೆ ತೆರಳಿರುವ ನಿಯೋಗವು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಾಗೂ ಕೃಷಿ ಸಚಿವ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ.

ಅಲ್ಲದೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಸಹಕಾರಿ ಸಂಘಗಳ ಸಾಲ ಮರುಪಾವತಿ, ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಹಾಗೂ ರೈತರಿಗೆ ಪೂರಕವಾಗುವಂತೆ ವಿಶೇಷ ಪ್ಯಾಕೇಜ್ ನೀಡುವಂತೆ ನಿಯೋಗವು ಮನವಿ ಸಲ್ಲಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ದೆಹಲಿಗೂ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಮಾತುಕತೆ ವೇಳೆ ರಾಜ್ಯದಲ್ಲಿ ಕಾಣಿಸಿಕೊಂಡಿರುವ ರಸಗೊಬ್ಬರ ಸಮಸ್ಯೆ ಕುರಿತು ಚರ್ಚಿಸುವುದಿಲ್ಲ. ರಾಜ್ಯದಲ್ಲಿ ಸಾಕಷ್ಟು ರಸಗೊಬ್ಬರ ಇದೆ. ಆದರೆ ರಸಗೊಬ್ಬರ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ರಸಗೊಬ್ಬರಕ್ಕಾಗಿ ನಿಯೋಗವೊಂದು ದೆಹಲಿಗೆ ತೆರಳುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ರಸಗೊಬ್ಬರಕ್ಕಾಗಿ ಸಂಸತ್ ಮುಂದೆ ಧರಣಿ ನಡೆಸಬೇಕಾದ ಅವಶ್ಯಕತೆ ತಮಗಿಲ್ಲ ಎಂದು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿದ್ಯುತ್ ಕಾಮಗಾರಿ ಮುಗಿಸಲು ಈಶ್ವರಪ್ಪ ಸೂಚನೆ
ಉಗ್ರರ ವಿಚಾರಣೆ ಧಾರವಾಡ ಕೋರ್ಟಿಗೆ ಹಸ್ತಾಂತರ
ಪಕ್ಷೇತರರ ಸಚಿವ ಸ್ಥಾನಕ್ಕೆ ಕೊಕ್: ಬಂಗಾರಪ್ಪ ಬಾಂಬ್
ಬೆಂಗಳೂರನ್ನು ಅನುಕರಿಸಲು ಸ್ಕಾಟ್‌ಲೆಂಡ್ ಯೋಜನೆ
ಕನಸು ನನಸಾಗದ ಯುವತಿಯ ಆತ್ಮಹತ್ಯೆ
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಇಂದಿನಿಂದ ರಾಜ್ಯದಲ್ಲೂ ಲಾರಿ ಮುಷ್ಕರ
ಕೇಂದ್ರ ಸರ್ಕಾರದ ತೆರಿಗೆ ನೀತಿ ವಿರೋಧಿಸಿ ಮಂಗಳವಾರ ಮಧ್ಯರಾತ್ರಿಯಿಂದ ದೇಶಾದ್ಯಂತ ಲಾರಿ....
ಸಿರಿಯಾಕ್ ಜೋಸೆಫ್‌ಗೆ ಬಿಳ್ಕೊಡುಗೆ
ಆಸ್ತಿ ವಿವರ ಸಲ್ಲಿಸದ 40 ಶಾಸಕರಿಗೆ ನೋಟಿಸ್
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟತೆಯನ್ನೇ ಮೆರೆದುಕೊಂಡು ಬಂದ ಜನ್ಮ ಚಿತ್ರ ಈಗ ಮತ್ತೆ ಕೆಲವು ವಿಶಿಷ್ಟತೆಗಳನ್ನು ಮಾಡಿದೆ. ಆದರೆ ಇದು ಮಾತ್ರ ಜನರಿಗಾಗಿಯಲ್ಲ. ನಿರ್ದೇಶಕರಿಗಾಗಿ. ಈಗ ಚಿತ್ರದ ನಾಯಕಿಯನ್ನು ಬದಲಿಸಲಾಗಿದೆ. ಚಿತ್ರದ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿ ಎಲ್ಲರ ಗಮನವನ್ನು ನಿರ್ದೇಶಕರು ಸೆಳೆದಿದ್ದರು.
ಮುಂದೆ ಓದಿ|ಮತ್ತಷ್ಟು...