|
| ಬೆಂಗಳೂರನ್ನು ಅನುಕರಿಸಲು ಸ್ಕಾಟ್‌ಲೆಂಡ್ ಯೋಜನೆ |
| ಲಂಡನ್, ಬುಧವಾರ, 2 ಜುಲೈ 2008 ( 15:55 IST ) | |
ಬ್ರಾಂಡ್ ಬೆಂಗಳೂರನ್ನು ಅನುಕರಿಸಲು ಕೆಲವು ರಾಷ್ಟ್ರಗಳು ಬಯಸಿದ್ದು, ತಮ್ಮ ರಾಷ್ಟ್ರದಲ್ಲಿ ಬೆಂಗಳೂರನ್ನು ಸೃಷ್ಟಿಸುವ ಯೋಜನೆಯನ್ನು ಅವು ಹಾಕಿಕೊಂಡಿವೆ. ದೂರದ ಸ್ಕಾಟ್‌ಲೆಂಡ್ ಮತ್ತು ನೆರೆಯ ಚೀನಾದಲ್ಲಿ ಬ್ರಾಂಡ್ ಬೆಂಗಳೂರು ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಹೊರಗುತ್ತಿಗೆಯ ಉನ್ನತ ಕಾನೂನು ತಜ್ಞರೊಬ್ಬರು, ಜಾಗತಿಕ ವ್ಯವಹಾರವನ್ನು ಸೆಳೆಯುವ ದೃಷ್ಟಿಯಿಂದ ಸ್ಕಾಟ್‌ಲೆಂಡ್‌ನಲ್ಲಿ ಬೆಂಗಳೂರು ಮಾದರಿ ಮಾಹಿತಿ ತಂತ್ರಜ್ಞಾನದ ಅನುಕರಣೆಗೆ ಪರಿಶೀಲನೆ ನಡೆಸಲಿದ್ದಾರೆ. ಸ್ಕಾಟಿಷ್ ಬೆಂಗಳೂರು ಎಂದು ಕರೆಯಲಾದ ಯೋಜನೆ ಪ್ರಕಾರ ಜಾಗತಿಕ ಕಂಪೆನಿಗಳ ಹೊರಗುತ್ತಿಗೆ ಆಧಾರದ ಮೇಲೆ ಬೆಂಗಳೂರು ಗಳಿಸಿದ ಸಮೃದ್ಧಿಯನ್ನು ಅನುಕರಿಸಬಹುದೆಂದು ತಜ್ಞ ಆಂಡ್ರಿವ್ ರಿಗ್‌ಬೈ ನಂಬಿಕೆ ವ್ಯಕ್ತಪಡಿಸಿದ್ದಾರೆ.
ಸ್ಕಾಟ್‌ಲ್ಯಾಂಡ್ ಕಾಲ್ ಸೆಂಟರ್ ಉದ್ಯಮದಲ್ಲಿ ಗಮನಾರ್ಹವೆನಿಸಿದರೂ, ಬಿಸಿನೆಸ್ ಪ್ರೋಸಸ್ ಹೊರಗುತ್ತಿಗೆ ಮೂಲಕ ಮತ್ತು ಜ್ಞಾನಾಧಾರಿತ ಹೊರಗುತ್ತಿಗೆ ಮೂಲಕ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಯಶಸ್ಸಿನಿಂದ ಸ್ಫೂರ್ತಿ ಪಡೆದ ಚೀನಾದ ಈಶಾನ್ಯ ನಗರ ದಾಲಿಯಾನ್ 10ವರ್ಷಗಳಲ್ಲಿ ವಿಶ್ವದ ಉನ್ನತ ಐಟಿ ಕೇಂದ್ರವಾಗುವ ಮಹತ್ವಾಕಾಂಕ್ಷೆಯ ಗುರಿ ಇರಿಸಿಕೊಂಡಿದ್ದು, ಭಾರತದ ಸಿಲಿಕಾನ್ ನಗರಕ್ಕೆ ಸರಿಸಮವಾಗಿ ನಿಲ್ಲಲು ಆಶಿಸಿದೆ. ದಾಲಿಯಾನ್ ತನ್ನ ನಗರದಲ್ಲಿ ಐಟಿ ಪ್ರಾದೇಶಿಕ ನೆಲೆಗಳ ಸ್ಥಾಪನೆಗೆ ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಸ್ಥೆಗಳನ್ನು ಈಗಾಗಲೇ ಆಹ್ವಾನಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟತೆಯನ್ನೇ ಮೆರೆದುಕೊಂಡು ಬಂದ ಜನ್ಮ ಚಿತ್ರ ಈಗ ಮತ್ತೆ ಕೆಲವು ವಿಶಿಷ್ಟತೆಗಳನ್ನು ಮಾಡಿದೆ. ಆದರೆ ಇದು ಮಾತ್ರ ಜನರಿಗಾಗಿಯಲ್ಲ. ನಿರ್ದೇಶಕರಿಗಾಗಿ. ಈಗ ಚಿತ್ರದ ನಾಯಕಿಯನ್ನು ಬದಲಿಸಲಾಗಿದೆ. ಚಿತ್ರದ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿ ಎಲ್ಲರ ಗಮನವನ್ನು ನಿರ್ದೇಶಕರು ಸೆಳೆದಿದ್ದರು. |
| |
|
|
|
|
|
|
|