ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕನಸು ನನಸಾಗದ ಯುವತಿಯ ಆತ್ಮಹತ್ಯೆ
ಬೆಂಗಳೂರು, ಬುಧವಾರ, 2 ಜುಲೈ 2008   ( 15:17 IST )
ತನ್ನ ಕನಸಿನ ನಗರ ಕನಸುಗಳನ್ನು ನನಸು ಮಾಡದಿರುವುದು 29 ವರ್ಷ ವಯಸ್ಸಿನ ಪನ್ನಾಗೆ ಸಾಕೆನಿಸಿಬಿಟ್ಟಿತ್ತು. ಒಡೆದ ಕುಟುಂಬದಿಂದ ಬಂದ ಆಕೆ ಸ್ವಂತ ಕಾಲುಗಳ ಮೇಲೆ ನಿಲ್ಲುವ ಇಚ್ಛೆಯಿಂದ ಕೆಲಸಕ್ಕಾಗಿ ಅರಸಿದರು. ಆದರೆ ಅವರು ಗಳಿಸಿದ ಡಿಗ್ರಿಗಳಿಂದ ಉದ್ಯೋಗ ಪಡೆಯಲು ವಿಫಲರಾದರು. ಸೋಮವಾರ ಸಂಜೆ ಸುಮಾರು 5 ಗಂಟೆಗೆ ಈ ಪ್ರಪಂಚದಿಂದ ಕಣ್ಮರೆಯಾಗಲು ನಿರ್ಧರಿಸಿದ ಪನ್ನಾ ಕೆಆರ್‌ ರಸ್ತೆಯಲ್ಲಿರುವ ಗರಡಿ ಅಪಾರ್ಟ್‌ಮೆಂಟ್ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡರು.

ಪನ್ನಾ ಬಿದ್ದ ಸ್ಥಳ ರಕ್ತಸಿಕ್ತವಾಗಿ ಆಕೆಯ ಮುಖ ವಿರೂಪಗೊಂಡಿತ್ತು. ಒಂದು ಗಂಟೆ ಕಾಲ ಪೊಲೀಸರಿಗೂ ಶವವನ್ನು ಗುರುತಿಸಲು ಸಾಧ್ಯವಾಗದೇ ಆಕೆಯ ಆತ್ಮಹತ್ಯೆ ಟಿಪ್ಪಣಿ ಜೇಬಲ್ಲಿ ಸಿಕ್ಕಿದಾಗಲೇ ವಿಷಯ ತಿಳಿಯಿತು. ಜೀವನದಲ್ಲಿ ಜಿಗುಪ್ಸೆಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪನ್ನಾ ಚೀಟಿಯಲ್ಲಿ ಬರೆದಿದ್ದಾರೆ. ನಿರುದ್ಯೋಗ, ಬೆಂಗಳೂರಿನಲ್ಲೇ ನೆಲೆಸಬೇಕೆಂಬ ಇಚ್ಛೆ ಮತ್ತು ತೀವ್ರವಾಗಿ ಕಾಡುವ ಮೈಗ್ರೇನ್ ಸಾವಿಗೆ ಕಾರಣಗಳೆಂದು ಬರೆದಿದ್ದಾರೆ.

ಬಿಬಿಎಂ ಪದವೀಧರೆಯಾದ ಪನ್ನಾ ಎಕನಾಮಿಕ್ಸ್ ಡಿಗ್ರಿಯನ್ನು ಹೊಂದಿದ್ದರು. ಆದರೆ ಇದು ಬೆಂಗಳೂರಿನಲ್ಲಿ ಕೆಲಸ ಗಿಟ್ಟಿಸಲು ನೆರವಾಗಲಿಲ್ಲ. ಆಕೆ ಅವಿವಾಹಿತರಾಗಿದ್ದು, ತನ್ನ ತಾಯಿಯ ಜತೆ ಬಾಡಿಗೆ ಮನೆಯಲ್ಲಿದ್ದರು. ತಾಯಿ ಸುಲೋಚನ ಮತ್ತು ತಂದೆ ಶಿವಸ್ವಾಮಿ ಪ್ರತ್ಯೇಕವಾಗಿದ್ದರು. ಸುಲೋಚನ 8000 ರೂ. ದುಬಾರಿ ಬಾಡಿಗೆ ಕೊಡುತ್ತಿದ್ದರಿಂದ ಅವರು ಮೈಸೂರಿಗೆ ತೆರಳಲು ನಿರ್ಧರಿಸಿದ್ದರು.

. ಇದು ತಾಯಿ, ಮಗಳಲ್ಲಿ ಘರ್ಷಣೆಗೆ ಕಾರಣವಾಗಿತ್ತು.ಪನ್ನಾ ಉದ್ಯೋಗದ ಸಂದರ್ಶನಗಳಿಂದ ಬೇಸತ್ತಿದ್ದರು ಮತ್ತು ಜತೆಗೆ ತೀವ್ರ ಮೈಗ್ರೇನ್ ಕಾಡುತ್ತಿತ್ತು. ಸೋಮವಾರ ರಾತ್ರಿ ಮೈಸೂರಿಗೆ ಹಿಂತಿರುಗುವ ಬಗ್ಗೆ ತಾಯಿ, ಮಗಳಲ್ಲಿ ವಾದವಿವಾದ ನಡೆದ ಬಳಿಕ ಪನ್ನಾ ಆತ್ಮಹತ್ಯೆ ಮಾಡಿಕೊಂಡರೆಂದು ತಿಳಿದುಬಂದಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ವೇಗ ನಿಯಂತ್ರಕ ಹಿಂದಕ್ಕೆ ಪಡೆಯಲು ಮುಕ್ತ ಮನಸ್ಸು
ಚಿಕೂನ್‌ಗುನ್ಯಾ ರೋಗಕ್ಕೆ 3 ಲಕ್ಷ ಮಂದಿ ತುತ್ತು
ನಿಯೋಗದೊಂದಿಗೆ ನಾವು ಬರೋಲ್ಲ: ಜೆಡಿಎಸ್
ಆಸ್ತಿ ವಿವರ ಸಲ್ಲಿಸದ 40 ಶಾಸಕರಿಗೆ ನೋಟಿಸ್
ಪೊಲೀಸ್ ಮಹಾನಿರ್ದೇಶಕರಾಗಿ ಶ್ರೀಕುಮಾರ್
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಇಂದಿನಿಂದ ರಾಜ್ಯದಲ್ಲೂ ಲಾರಿ ಮುಷ್ಕರ
ಕೇಂದ್ರ ಸರ್ಕಾರದ ತೆರಿಗೆ ನೀತಿ ವಿರೋಧಿಸಿ ಮಂಗಳವಾರ ಮಧ್ಯರಾತ್ರಿಯಿಂದ ದೇಶಾದ್ಯಂತ ಲಾರಿ....
ಸಿರಿಯಾಕ್ ಜೋಸೆಫ್‌ಗೆ ಬಿಳ್ಕೊಡುಗೆ
ಆಸ್ತಿ ವಿವರ ಸಲ್ಲಿಸದ 40 ಶಾಸಕರಿಗೆ ನೋಟಿಸ್
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟತೆಯನ್ನೇ ಮೆರೆದುಕೊಂಡು ಬಂದ ಜನ್ಮ ಚಿತ್ರ ಈಗ ಮತ್ತೆ ಕೆಲವು ವಿಶಿಷ್ಟತೆಗಳನ್ನು ಮಾಡಿದೆ. ಆದರೆ ಇದು ಮಾತ್ರ ಜನರಿಗಾಗಿಯಲ್ಲ. ನಿರ್ದೇಶಕರಿಗಾಗಿ. ಈಗ ಚಿತ್ರದ ನಾಯಕಿಯನ್ನು ಬದಲಿಸಲಾಗಿದೆ. ಚಿತ್ರದ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿ ಎಲ್ಲರ ಗಮನವನ್ನು ನಿರ್ದೇಶಕರು ಸೆಳೆದಿದ್ದರು.
ಮುಂದೆ ಓದಿ|ಮತ್ತಷ್ಟು...