ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ಬೆಂಗಳೂರು, ಬುಧವಾರ, 2 ಜುಲೈ 2008   ( 12:46 IST )
nrb
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2ರೂ. ಸಹಾಯಧನ, ಸಾವಯವ ಕೃಷಿಗೆ ಪ್ರೋತ್ಸಾಹ ಸೇರಿದಂತೆ ರೈತರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಮುಂಗಡ ಪತ್ರದಲ್ಲಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ತಿಳಿಸಿದ್ದಾರೆ.

ರೈತ ನಾಯಕರ ಸಭೆ ನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಪ್ರತಿ ಲೀಟರ್ ಹಾಲಿಗೆ 2ರೂ. ಸಹಾಯಧನವನ್ನು ನೀಡಲಾಗುವುದು. ಅಂತೆಯೇ, ರಾಜ್ಯದಲ್ಲಿ ಒಟ್ಟು ಕೃಷಿ ಭೂಮಿಯಲ್ಲಿ ಪ್ರತಿ ವರ್ಷ ಶೇ.20ರಷ್ಟು ಜಮೀನನ್ನು ಕೃಷಿಗೆ ಅಳವಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ರೈತ ಮುಖಂಡರು ನೀಡಿರುವ ಉತ್ತಮ ಸಲಹೆಗಳನ್ನು ಜಾರಿಗೊಳಿಸಲಾಗುವುದು ಹಾಗೂ ರಾಜ್ಯಪಾಲರ ಆಡಳಿತದಲ್ಲಿ ಕಬ್ಬು ಬೆಳೆಗೆ 160 ರೂ. ಬೆಂಬಲ ಬೆಲೆ ನೀಡಿಕೆ ಕುರಿತು ಘೋಷಣೆಯನ್ನು ಕೂಡಲೇ ಜಾರಿಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಅಲ್ಲದೆ, ರಾಜ್ಯದಲ್ಲಿನ ಕೆರೆಗಳ ಪುನರುಜ್ಜೀವನಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಕೆರೆ ಒತ್ತುವರಿ ವಿರುದ್ಧ ಕಠಿಣ ಕ್ರಮಗಳ ಕುರಿತು ಬಜೆಟ್ಟಿನಲ್ಲಿ ತಿಳಿಸಲಾಗುವುದು ಎಂದು ಅವರು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವೇಗ ನಿಯಂತ್ರಕ ಹಿಂದಕ್ಕೆ ಪಡೆಯಲು ಮುಕ್ತ ಮನಸ್ಸು
ಚಿಕೂನ್‌ಗುನ್ಯಾ ರೋಗಕ್ಕೆ 3 ಲಕ್ಷ ಮಂದಿ ತುತ್ತು
ನಿಯೋಗದೊಂದಿಗೆ ನಾವು ಬರೋಲ್ಲ: ಜೆಡಿಎಸ್
ಆಸ್ತಿ ವಿವರ ಸಲ್ಲಿಸದ 40 ಶಾಸಕರಿಗೆ ನೋಟಿಸ್
ಪೊಲೀಸ್ ಮಹಾನಿರ್ದೇಶಕರಾಗಿ ಶ್ರೀಕುಮಾರ್
ಮನೆ ವಾಸ್ತು ಬದಲಿಯಲ್ಲಿ ಸಚಿವ ಕರುಣಾಕರ ರೆಡ್ಡಿ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಇಂದಿನಿಂದ ರಾಜ್ಯದಲ್ಲೂ ಲಾರಿ ಮುಷ್ಕರ
ಕೇಂದ್ರ ಸರ್ಕಾರದ ತೆರಿಗೆ ನೀತಿ ವಿರೋಧಿಸಿ ಮಂಗಳವಾರ ಮಧ್ಯರಾತ್ರಿಯಿಂದ ದೇಶಾದ್ಯಂತ ಲಾರಿ....
ಸಿರಿಯಾಕ್ ಜೋಸೆಫ್‌ಗೆ ಬಿಳ್ಕೊಡುಗೆ
ಆಸ್ತಿ ವಿವರ ಸಲ್ಲಿಸದ 40 ಶಾಸಕರಿಗೆ ನೋಟಿಸ್
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟತೆಯನ್ನೇ ಮೆರೆದುಕೊಂಡು ಬಂದ ಜನ್ಮ ಚಿತ್ರ ಈಗ ಮತ್ತೆ ಕೆಲವು ವಿಶಿಷ್ಟತೆಗಳನ್ನು ಮಾಡಿದೆ. ಆದರೆ ಇದು ಮಾತ್ರ ಜನರಿಗಾಗಿಯಲ್ಲ. ನಿರ್ದೇಶಕರಿಗಾಗಿ. ಈಗ ಚಿತ್ರದ ನಾಯಕಿಯನ್ನು ಬದಲಿಸಲಾಗಿದೆ. ಚಿತ್ರದ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿ ಎಲ್ಲರ ಗಮನವನ್ನು ನಿರ್ದೇಶಕರು ಸೆಳೆದಿದ್ದರು.
ಮುಂದೆ ಓದಿ|ಮತ್ತಷ್ಟು...