ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ವೇಗ ನಿಯಂತ್ರಕ ಹಿಂದಕ್ಕೆ ಪಡೆಯಲು ಮುಕ್ತ ಮನಸ್ಸು
ಬೆಂಗಳೂರು, ಬುಧವಾರ, 2 ಜುಲೈ 2008   ( 12:40 IST )
ಭಾರಿ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸುವುದನ್ನು ಕಡ್ಡಾಯ ಮಾಡಿರುವ ಆದೇಶವನ್ನು ಹಿಂದಕ್ಕೆ ಪಡೆಯುವ ವಿಚಾರದಲ್ಲಿ ರಾಜ್ಯ ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಗೃಹ ಸಚಿವ ವಿ.ಎಸ್. ಆಚಾರ್ಯ ಸ್ಪಷ್ಟಪಡಿಸಿದ್ದಾರೆ.

ಮೋಟಾರ್ ಕಾಯ್ದೆ ನಿಯಮ 118ರ ಪ್ರಕಾರ ವೇಗ ನಿಯಂತ್ರಕ ಅಳವಡಿಸಲಾಗುತ್ತಿದೆ. ಆದರೆ ಕಲಂ 118ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಲಾರಿ ಮಾಲೀಕರು ಮುಷ್ಕರವನ್ನು ಹಿಂದಕ್ಕೆ ಪಡೆಯಬೇಕೆಂದು ಮನವಿ ಮಾಡಿದ ಅವರು, ಮುಷ್ಕರದಿಂದ ಅಗತ್ಯವಸ್ತುಗಳ ಸರಬರಾಜಿಗೆ ಯಾವುದೇ ಕೊರತೆ ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಪೆಟ್ರೌಲ್ ಡೀಸೆಲ್ ದರ ಉಳಿದ ರಾಜ್ಯಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಬೇರೆ ರಾಜ್ಯಗಳಿಗೆ ನೀಡುವ ದರದಲ್ಲಿಯೇ ನಮ್ಮ ರಾಜ್ಯಕ್ಕೂ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ತಿಳಿಸಿದ ಅವರು, ಈ ಬಗ್ಗೆ ಕೇಂದ್ರ ಸರ್ಕಾರದ ಜತೆಗೂ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಮಧ್ಯೆ ನಿನ್ನೆ ಮಧ್ಯರಾತ್ರಿಯಿಂದ ಪ್ರಾರಂಭಗೊಂಡಿರುವ ಲಾರಿ ಮುಷ್ಕರದ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪೊಲೀಸ್ ಇಲಾಖೆ ಅಧಿಕಾರಿಗಳ ಜೊತೆ ಆಚಾರ್ಯ ಚರ್ಚೆ ನಡೆಸಿದ್ದಾರೆ,
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚಿಕೂನ್‌ಗುನ್ಯಾ ರೋಗಕ್ಕೆ 3 ಲಕ್ಷ ಮಂದಿ ತುತ್ತು
ನಿಯೋಗದೊಂದಿಗೆ ನಾವು ಬರೋಲ್ಲ: ಜೆಡಿಎಸ್
ಆಸ್ತಿ ವಿವರ ಸಲ್ಲಿಸದ 40 ಶಾಸಕರಿಗೆ ನೋಟಿಸ್
ಪೊಲೀಸ್ ಮಹಾನಿರ್ದೇಶಕರಾಗಿ ಶ್ರೀಕುಮಾರ್
ಮನೆ ವಾಸ್ತು ಬದಲಿಯಲ್ಲಿ ಸಚಿವ ಕರುಣಾಕರ ರೆಡ್ಡಿ
ವಿಮಾನನಿಲ್ದಾಣದಿಂದ ಹೆಲಿಕಾಪ್ಟರ್ ಸೇವೆ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಇಂದಿನಿಂದ ರಾಜ್ಯದಲ್ಲೂ ಲಾರಿ ಮುಷ್ಕರ
ಕೇಂದ್ರ ಸರ್ಕಾರದ ತೆರಿಗೆ ನೀತಿ ವಿರೋಧಿಸಿ ಮಂಗಳವಾರ ಮಧ್ಯರಾತ್ರಿಯಿಂದ ದೇಶಾದ್ಯಂತ ಲಾರಿ....
ಸಿರಿಯಾಕ್ ಜೋಸೆಫ್‌ಗೆ ಬಿಳ್ಕೊಡುಗೆ
ಆಸ್ತಿ ವಿವರ ಸಲ್ಲಿಸದ 40 ಶಾಸಕರಿಗೆ ನೋಟಿಸ್
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟತೆಯನ್ನೇ ಮೆರೆದುಕೊಂಡು ಬಂದ ಜನ್ಮ ಚಿತ್ರ ಈಗ ಮತ್ತೆ ಕೆಲವು ವಿಶಿಷ್ಟತೆಗಳನ್ನು ಮಾಡಿದೆ. ಆದರೆ ಇದು ಮಾತ್ರ ಜನರಿಗಾಗಿಯಲ್ಲ. ನಿರ್ದೇಶಕರಿಗಾಗಿ. ಈಗ ಚಿತ್ರದ ನಾಯಕಿಯನ್ನು ಬದಲಿಸಲಾಗಿದೆ. ಚಿತ್ರದ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿ ಎಲ್ಲರ ಗಮನವನ್ನು ನಿರ್ದೇಶಕರು ಸೆಳೆದಿದ್ದರು.
ಮುಂದೆ ಓದಿ|ಮತ್ತಷ್ಟು...