ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಮನೆ ವಾಸ್ತು ಬದಲಿಯಲ್ಲಿ ಸಚಿವ ಕರುಣಾಕರ ರೆಡ್ಡಿ
ಬೆಂಗಳೂರು, ಮಂಗಳವಾರ, 1 ಜುಲೈ 2008   ( 17:02 IST )
ಸಚಿವರೆಲ್ಲರೂ ಈಗ ತಮಗೆ ಸಿಕ್ಕಿರುವ ವಾಸ್ತುವಿನ ಮೇಲೆ ಗಮನವಹಿಸುತ್ತಿದ್ದಾರೆ. ತಮ್ಮ ವಾಸ್ತು ತಜ್ಞರನ್ನು ಕರೆಸಿ ಅದನ್ನು ತಮಗೆ ಬೇಕಂತೆ ಬದಲಾಯಿಸುತ್ತಿದ್ದಾರೆ. ಆದರೆ ಕಂದಾಯ ಸಚಿವ ಕರುಣಾಕರ ರೆಡ್ಡಿ ಈ ಕೆಲಸದಲ್ಲಿ ಇತರರಿಗಿಂತ ಸ್ವಲ್ಪ ಮುಂದೆಯೇ ಇದ್ದಾರೆ.

ರೇಸ್ಕೋರ್ಸ್ ರಸ್ತೆಯ ಮುಖ್ಯಮಂತ್ರಿ ಯಡಿಯ‌ೂರಪ್ಪನವರ ಮನೆಯ ಪಕ್ಕದ ಮನೆಯನ್ನು ಇವರಿಗೆ ನೀಡಲಾಗಿತ್ತು. ಆದರೆ ಇದರ ವಾಸ್ತು ಇವರಿಗೆ ಇಷ್ಟವಾಗಲಿಲ್ಲ.ಅದಕ್ಕಾಗಿ ತಾವು ನೋಡಿದ ತೆಲುಗು ಖಳನಾಯಕನ ಮನೆಯ ಶೈಲಿಯಲ್ಲೇ ನಿರ್ಮಿಸಲು ಮುಂದಾಗಿದ್ದಾರೆ.

ತೆಲುಗು ಚಿತ್ರವೊಂದರ ಖಳನಾಯಕನ ಮನೆಯ ವಾಸ್ತುಶಿಲ್ಪದ ನಕ್ಷೆ ಹಾಗೂ ತಾವು ಸಿಂಗಾಪುರಕ್ಕೆ ಭೇಟಿ ನೀಡಿದಾಗ ನೋಡಿರುವ ಮನೆಯ ವಾಸ್ತುಶಿಲ್ಪದ ನಕ್ಷೆಯಲ್ಲಿ ಒಂದನ್ನು ಆಯ್ಕೆ ಮಾಡಿ ಮರು ನಿರ್ಮಾಣ ಮಾಡುವಂತೆ ಸೂಚಿಸಿದ್ದಾರೆ. ಸುಮಾರು ಒಂದೂವರೆ ಎಕರೆಯಷ್ಟು ಪ್ರದೇಶದಲ್ಲಿ 5 ಕೋಣೆಗಳಿರುವ ಈ ಮನೆಯ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಸುಮಾರು 25 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ರಾತ್ರಿ ಹಗಲು ದುಡಿಯುತ್ತಿದ್ದಾರೆ. 4 ತಿಂಗಳೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ.

ಒಂದು ಮೂಲಕ ಪ್ರಕಾರ ಈ ನವೀಕರಣಕ್ಕೆ ಸುಮಾರು 70 ಲಕ್ಷ ರೂ. ಖರ್ಚಾಗಲಿದೆ. ಇದು ಸರ್ಕಾರದ ಹಣ. ಹೇಗಿದೆ ನಮ್ಮ ಸಚಿವರ ದೌಲತ್ತು? ಯಾರ್ದೊ ದುಡ್ಡು ಯಲ್ಲಮ್ಮನ ಜಾತ್ರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಮಾನನಿಲ್ದಾಣದಿಂದ ಹೆಲಿಕಾಪ್ಟರ್ ಸೇವೆ
ಅಮ‌್ಯೂಸ್‌ಮೆಂಟ್ ರೈಡ್‌ನಲ್ಲಿ ಮಹಿಳೆ ಬಲಿ
ಸಿರಿಯಾಕ್ ಜೋಸೆಫ್‌ಗೆ ಬಿಳ್ಕೊಡುಗೆ
ಮಹಿಳಾ ಆಯೋಗಕ್ಕೆ ಮತ್ತೆ ನೇಸರ್ಗಿ
ಅತಿಕ್ರಮಣಕಾರರ ವಿರುದ್ಧ ಶಿಸ್ತುಕ್ರಮ
ಇಂದಿನಿಂದ ರಾಜ್ಯದಲ್ಲೂ ಲಾರಿ ಮುಷ್ಕರ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರೈತರಿಗೆ ಉಚಿತ ವಿದ್ಯುತ್ ಅಸಾಧ್ಯ: ಮುಖ್ಯಮಂತ್ರಿ
ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ....
ಒತ್ತುವರಿದಾರರ ವಿರುದ್ಧ ಕ್ರಮ: ಕರುಣಾಕರ ರೆಡ್ಡಿ
ಕೈಕಟ್ಟಿ ಕೂರುವುದಿಲ್ಲ: ಈಶ್ವರಪ್ಪ ಪುನರುಚ್ಚಾರ
ಮನರಂಜನೆ
ಚಿತ್ರ ಸುದ್ದಿ - ಕಬಡ್ಡಿ ಈಗ ವಿವಾದದಲ್ಲಿದೆ. ಅದು ಹೊರಗಿನವರ ನಡುವೆ ವಿವಾದವಲ್ಲ. ಸ್ವತ: ಚಿತ್ರದ ನಿರ್ದೇಶಕ ನರೇಂದ್ರ ಬಾಬು ಹಾಗೂ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ನಡುವೆ. ಇತ್ತೀಚೆಗೆ ಕಬ್ಬಡ್ಡಿ ಚಿತ್ರತಂಡ ಕರೆದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರಬಾಬು ನೇರವಾಗಿ ಕಿಶೋರ್‌ರನ್ನು ಟೀಕಿಸಿದರು.
ಮುಂದೆ ಓದಿ|ಮತ್ತಷ್ಟು...