|
| ಸಿರಿಯಾಕ್ ಜೋಸೆಫ್‌ಗೆ ಬಿಳ್ಕೊಡುಗೆ |
| ಬೆಂಗಳೂರು, ಮಂಗಳವಾರ, 1 ಜುಲೈ 2008 ( 13:45 IST ) | |
ಕರ್ನಾಟಕ ಜನತೆ ನೀಡಿರುವ ಪ್ರೀತಿಯನ್ನು ನಾನೆಂದೂ ಮರೆಯಲಾರೆ. ಇದು ನನ್ನ ಜೀವನದ ಅವಿಸ್ಮರಣೀಯ ಅನುಭವ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಗೊಂಡಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹೇಳಿದರು.
ನ್ಯಾಯಾಂಗ ಅಕಾಡೆಮಿ, ಕಾನೂನು ಸೇವಾ ಪ್ರಾಧಿಕಾರಗಳ ಆಶ್ರಯದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಲ್ಲಿನ ಜನತೆಯ ಸ್ನೇಹ ಹಾಗೂ ಅವರ ಪ್ರೀತಿಗೆ ನಾನು ಚಿರಋುಣಿ ಎಂದರು.
ರಾಜ್ಯದಲ್ಲಿ ಕಾಯಂ ಹೈಕೋರ್ಟ್ ಪೀಠ ಸ್ಥಾಪನೆಗೆ ಬೇಡಿಕೆ ಇದ್ದ ಸಂದರ್ಭದಲ್ಲಿ ಧಾರವಾಡ ಮತ್ತು ಗುಲ್ಬರ್ಗಾದಲ್ಲಿ ಸಂಚಾರಿ ಪೀಠ ಸ್ಥಾಪಿಸಬೇಕಾಗಿರುವುದು ಅನಿವಾರ್ಯ ನಿರ್ಧಾರವಾಗಿತ್ತು. ಈ ಬಗ್ಗೆ ಸಾಕಷ್ಟು ವಿರೋಧಗಳೂ ಇದ್ದವು.
ಆದರೆ ನ್ಯಾಯದಾನ ವಿಳಂಬವಾಗಬಾರದು ಹಾಗೂ ನ್ಯಾಯವನ್ನು ಜನರ ಒಳಗೆ ಕೊಂಡೊಯ್ಯಬೇಕೆನ್ನುವ ಉದ್ದೇಶದಿಂದ ಎರಡು ಪೀಠಗಳನ್ನು ಸ್ಥಾಪಿಸಬೇಕಾಯಿತು ಎಂದು ಹೇಳಿದರು.ಕಾರ್ಯಕ್ರವದಲ್ಲಿ ನ್ಯಾಯಮೂರ್ತಿಗಳಾದ ಮಂಜುಳಾ ಚೆಲ್ಲೂರು, ಬನ್ನೂರು ಮಠ, ಕೆ.ಸಿ.ಮಂಜುನಾಥ್, ವಿ.ಗೋಪಾಲಗೌಡ ಉಪಸ್ಥಿತರಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕಬಡ್ಡಿ ಈಗ ವಿವಾದದಲ್ಲಿದೆ. ಅದು ಹೊರಗಿನವರ ನಡುವೆ ವಿವಾದವಲ್ಲ. ಸ್ವತ: ಚಿತ್ರದ ನಿರ್ದೇಶಕ ನರೇಂದ್ರ ಬಾಬು ಹಾಗೂ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ನಡುವೆ. ಇತ್ತೀಚೆಗೆ ಕಬ್ಬಡ್ಡಿ ಚಿತ್ರತಂಡ ಕರೆದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರಬಾಬು ನೇರವಾಗಿ ಕಿಶೋರ್‌ರನ್ನು ಟೀಕಿಸಿದರು. |
| |
|
|
|
|
|
|
|