ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಮಾಹಿತಿ ನೀಡದ ಆಯೋಗದ ವಿರುದ್ಧ ಬೇಗ್ ಆಕ್ರೋಶ
ಬೆಂಗಳೂರು, ಸೋಮವಾರ, 12 ಮೇ 2008   ( 17:16 IST )
ನಾಲ್ಕು ಮತಗಟ್ಟೆಗಳಲ್ಲಿ ಸೋಮವಾರ ಮರುಮತದಾನದ ಕುರಿತು ಮಾಹಿತಿ ನೀಡದಿರುವ ಬಗ್ಗೆ ಶಿವಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ರೋಷನ್ ಬೇಗ್ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರುಮತದಾನ ನಡೆಸುವುದರಲ್ಲಿ ತಪ್ಪಿಲ್ಲ. ಆದರೆ ಈ ಬಗ್ಗೆ ಆಯೋಗವು ಅಭ್ಯರ್ಥಿಗಳಿಗೆ ಮಾಹಿತಿ ನೀಡಬೇಕಿತ್ತು. ತಮಗೆ ಈ ಮತಗಟ್ಟೆಯಲ್ಲಿ ಮರು ಮತದಾನ ನಡೆಸುತ್ತಾರೆಂಬುದು ತಿಳಿದಿದ್ದೆ ನಿನ್ನೆ ರಾತ್ರಿ ಎಂದು ತಿಳಿಸಿದರು.

ಈ ಮಧ್ಯೆ ಮತಗಟ್ಟೆಗಳಲ್ಲಿ ಗುರುತಿನ ಚೀಟಿ ಗೊಂದಲ ಇಂದು ಕೂಡ ಕಂಡು ಬಂದಿತ್ತು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿರುವ ಬಗ್ಗೆ ಅಸಮಾಧಾನಗೊಂಡ ಮತದಾರರು, ಆಯೋಗದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಂಧಿನಗರದ 50ರ ಮತಗಟ್ಟೆಯಲ್ಲಿ ಒಟ್ಟು 550 ಮತದಾರರಿದ್ದು, ಮಧ್ಯಾಹ್ನದ ವೇಳೆಗೆ ಸುಮಾರು 250 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಶೇ.40ರಷ್ಟು ಮತದಾನವಾಗಿರುವ ವರದಿ ಬಂದಿದೆ. ರಾಮನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 46ರಲ್ಲಿ ಇದುವರೆಗೆ ಶೇ.45ರಷ್ಟು ಮತದಾನವಾಗಿರುವ ವರದಿ ಬಂದಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮೊದಲ ಹಂತದ ಚುನಾವಣೆಯಲ್ಲಿ ಶೇ.66 ಮತದಾನ
ಚುನಾವಣಾ ಬಹಿಷ್ಕಾರಕ್ಕೆ ನಕ್ಸಲರಿಂದ ಮನವಿ
ಕುಮಾರಸ್ವಾಮಿ ಮತ ಚಿತ್ರಿಕರಣ: ಅಧಿಕಾರಿ ಅಮಾನತು
ದಿವಾಕರ್ ಬಾಬು ಕಾಂಗ್ರೆಸ್ ಸೇರ್ಪಡೆ
ರಾಜ್ ಪ್ರತಿಮೆ ವಿರೂಪ: ಪ್ರತಿಭಟನೆ
ಜಾತಿ ರಾಜಕೀಯ ಭ್ರಷ್ಟಚಾರಕ್ಕೆ ಸಮ: ದೇವೇಗೌಡ
ಗ್ರಹ ಗತಿ
ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಈ ಬಾರಿಯೂ ನಾನೇ ಕಿಂಗ್: ಕುಮಾರಸ್ವಾಮಿ
ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ಸಿಗುವುದರ ಜೊತೆಗೆ ಜೆಡಿಎಸ್ ಗದ್ದುಗೆ ಏರಲಿದೆ ...
ಮತದಾನದದ ಜೊತೆ ಅಕ್ರಮ, ಆಮಿಷಗಳ ಆರಂಭ
ಮತದಾರರ ಪಟ್ಟಿಯಲ್ಲಿ ಶಿವಣ್ಣನ ಹೆಸರೇ ಇಲ್ಲ!!
ಮನರಂಜನೆ
ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ.
ಮುಂದೆ ಓದಿ|ಮತ್ತಷ್ಟು...
Marketplace