|
| ಮೊದಲ ಹಂತದ ಚುನಾವಣೆಯಲ್ಲಿ ಶೇ.66 ಮತದಾನ |
| ಬೆಂಗಳೂರು, ಸೋಮವಾರ, 12 ಮೇ 2008 ( 15:24 IST ) | |
ಕರ್ನಾಟಕದ ಮೊದಲ ಹಂತದ ವಿಧಾನಸಭೆ ಚುನಾವಣೆಯಲ್ಲಿ ಶೇ.66ರಷ್ಟು ಮತದಾನ ದಾಖಲಾಗಿದೆ ಎಂದು ರಾಜ್ಯ ಚುನಾವಣೆ ಆಯೋಗ ಪರಿಷ್ಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಆಶ್ಚರ್ಯಕರ ಬೆಳವಣಿಗೆ ನಡೆದಿದೆ.
ಕರ್ನಾಟಕದಲ್ಲಿ ಶನಿವಾರ, ಮೆ 10ರಂದು 11 ಜಿಲ್ಲೆಗಳ 89 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು, ಕರ್ನಾಟಕ ಮುಖ್ಯ ಚುನಾವಣೆ ಆಯುಕ್ತ ಎಂ.ಎನ್.ವಿದ್ಯಾಶಂಕರ್ ಈ ಬಗ್ಗೆ ವಿವರಣೆ ನೀಡಿ, ಆಯೋಗಕ್ಕೆ ತಲುಪಿದ ಆರಂಭಿಕ ವರದಿಗಳಲ್ಲಿ ಚುನಾವಣೆಯ ಶೇಕಡಾವಾರು ಪ್ರಮಾಣವು ಶೇ.59.8 ಎಂದು ತಿಳಿಸಲಾಗಿತ್ತು.
ಆದರೆ ಎಲ್ಲ ಜಿಲ್ಲೆಗಳಿಂದ ಫಲಿತಾಂಶಗಳು ತಲುಪಿದ ಬಳಿಕ ಅದನ್ನು ಶೇ.66ಕ್ಕೆ ಪರಿಷ್ಕರಿಸಲಾಗಿದೆ ಎಂದು ತಿಳಿಸಿದರು. ಬೆಂಗಳೂರು ಗ್ರಾಮಾಂತರದಲ್ಲಿ ಅತ್ಯಂತ ಹೆಚ್ಚು ಪ್ರಮಾಣದ ಮತದಾನವಾಗಿದ್ದು, ಶೇ.78.1 ದಾಖಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕನಿಷ್ಠ ಪ್ರಮಾಣದ ಶೇ.44.5 ಮತದಾನ ದಾಖಲಾಗಿದೆ.
ತುಮಕೂರಿನಲ್ಲಿ ಶೇ.74.4, ಚಿಕ್ಕಬಳ್ಳಾಪುರದಲ್ಲಿ ಶೇ.77.7, ಕೋಲಾರದಲ್ಲಿ ಶೇ.73.1, ರಾಮನಗರದಲ್ಲಿ 75.9, ಬೆಂಗಳೂರಿನಲ್ಲಿ 52.14 ಮತ್ತು ಮಂಡ್ಯದಲ್ಲಿ ಶೇ.73 ಮತದಾನ ದಾಖಲಾಗಿದೆ. ಹಾಸನದಲ್ಲಿ ಶೇ.75.4ರಷ್ಟು ಮತದಾನವಾಗಿದ್ದರೆ, ಮೈಸೂರಿನಲ್ಲಿ ಶೇ.67.5, ಕೊಡಗಿನಲ್ಲಿ ಶೇ.65.7 ಮತ್ತು ಚಾಮರಾಜನಗರದಲ್ಲಿ ಶೇ.72.41 ಮತದಾನವಾಗಿದೆ ಎಂದು ಅವರು ನುಡಿದರು.
ಸಾಂಪ್ರದಾಯಿಕವಾಗಿ ಬಿಬಿಎಂಪಿ ಮತ್ತು ಬೆಂಗಳೂರು ನಗರ ಪ್ರದೇಶಗಳು ಕಡಿಮೆ ಮತದಾನದ ಸ್ಥಳಗಳಾಗಿವೆ ಎಂದು ಹೇಳಿದ ಅವರು, ಪೋಸ್ಟರ್‌ಗಳು, ಬಂಟಿಂಗ್ಸ್ ಮತ್ತು ಫಲಕಗಳ ನಿಷೇಧದಿಂದ ಮತದಾನದ ಪ್ರಮಾಣ ಕುಂಠಿತವಾಗಿಲ್ಲ ಎಂದು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ. |
| |
|
|
|
|
|
|
|