|
| 2ನೇ ಹಂತದ ಚುನಾವಣೆಗೆ ರಾಜಕೀಯ ಪ್ರಮುಖರ ಗಮನ |
| ಬೆಂಗಳೂರು, 12 ಮೇ 2008 ( 10:45 IST ) | |
ಮೊದಲ ಹಂತದ ಚುನಾವಣೆ ಅಂತ್ಯಗೊಳ್ಳುತ್ತಿದ್ದಂತೆ, ರಾಜಕೀಯ ಘಟಾನುಘಟಿಗಳು ಮೇ 16ರಂದು 10 ಜಿಲ್ಲೆಗಳಲ್ಲಿ ನಡೆಯಲಿರುವ ಎರಡನೇ ಹಂತದ ಚುನಾವಣೆಗೆ ತೋಳೇರಿಸಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿ ಅಡಗಿದ ಬಳಿಕ, ಎರಡನೇ ಹಂತದ ಚುನಾವಣೆಯತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಮೊದಲ ಹಂತದ ಚುನಾವಣೆಯಲ್ಲಿ ಕಣದಲ್ಲಿದ್ದ ಅನೇಕ ರಾಜಕೀಯ ಪ್ರಮುಖರಿಗೆ ಎರಡನೇ ಹಂತದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಗಮನನೀಡಲು ಈಗ ಕಾಲಾವಕಾಶ ಸಿಕ್ಕಿದೆ. ಜೆಡಿಎಸ್ ಸ್ಟಾರ್ ಪ್ರಚಾರಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಮನಗರದ ಅಭ್ಯರ್ಥಿ. ತಮ್ಮ ಮತ ಚಲಾಯಿಸಿದ ಬಳಿಕ ಒಂದು ನಿಮಿಷವನ್ನೂ ವ್ಯರ್ಥ ಮಾಡದೇ ಶನಿವಾರವೇ ಎರಡನೇ ಹಂತದ ಚುನಾವಣೆ ನಡೆಯುವ ಜಿಲ್ಲೆಗಳಿಗೆ ತೆರಳಿದರು.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಚುನಾವಣೆ ಮುಗಿದಿರುವುದರಿಂದ ನಿರಾಳರಾಗಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಸ್ಥೈರ್ಯ ಮೂಡಿಸಲು ಮತ್ತು ಮತದಾರರನ್ನು ಸೆಳೆಯಲು ಅವರೀಗ ಗಮನ ನೀಡಿದ್ದಾರೆ. ನಟ ಮತ್ತು ಸಂಸದ ಅಂಬರೀಷ್ ಶ್ರೀರಂಗಪಟ್ಟಣದಿಂದ ಸ್ಪರ್ಧಿಸಿದ್ದು, ರಾಜಕೀಯ ಸೂಕ್ಷ್ಮತೆ ಹೊಂದಿದ ಬಳ್ಳಾರಿಗೆ ಮತದಾರರ ಓಲೈಕೆ ಮತ್ತು ಪಕ್ಷದ ಕಾರ್ಯಕರ್ತರ ಸಂಘಟನೆಗೆ ತೆರಳಿದ್ದಾರೆ. ಚುನಾವಣೆಯ ಕಾವು ಏರುತ್ತಿರುವ ನಡುವೆ, ಕೆಲವು ಜಿಲ್ಲೆಗಳಲ್ಲಿ ನಕ್ಸಲರ ಅಬ್ಬರದಿಂದ ಚುನಾವಣೆ ಮೇಲೆ ಕಾರ್ಮೋಡ ಕವಿದಿದೆ. ಮಲೆನಾಡು ಮತ್ತು ಉಡುಪಿ ಜಿಲ್ಲೆಗಳಲ್ಲಿ ಚುನಾವಣೆ ಬರಿಷ್ಕರಿಸುವಂತೆ ನಕ್ಸಲರ ಕರೆಯು ಚುನಾವಣೆ ಅಧಿಕಾರಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ತಲೆನೋವು ತಂದಿದೆ. ಏತನ್ಮಧ್ಯೆ, ಎರಡನೇ ಹಂತದ ಚುನಾವಣೆಗೆ ಕೂಡ ರಾಜಕೀಯ ಪಕ್ಷಗಳು ದೆಹಲಿಯ ದಣಿಗಳನ್ನು ಪ್ರಚಾರಕ್ಕೆ ಆಮದು ಮಾಡಿಕೊಳ್ಳುತ್ತಿದೆ.
ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಮೇ 13-14ರಂದು ಕೊಪ್ಪಳ ಮತ್ತು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಬಿಜೆಪಿಯ ಅಗ್ರೇಸರರಲ್ಲಿ ಅಡ್ವಾಣಿ, ರಾಜನಾಥ್ ಸಿಂಗ್ ಮತ್ತು ಸುಶ್ಮಾ ಸ್ವರಾಜ್ ಕರ್ನಾಟಕಕ್ಕೆ ಕಾಲಿಡಲಿದ್ದಾರೆ. ಎಸ್ಪಿ ಪರ ಮುಲಾಯಂ ಮತ್ತು ಚಿತ್ರನಟಿ ಜಯಪ್ರದಾ ಸೇವೆ ಸಿಗಲಿದೆ.
ಎರಡನೇ ಹಂತದಲ್ಲಿ ಕೂಡ ಅನೇಕ ಘಟಾನುಘಟಿಗಳು ಅಗ್ನಿಪರೀಕ್ಷೆ ಎದುರಿಸಲಿದ್ದು, ಎಲ್ಲರ ಕಣ್ಣು ಶಿವಮೊಗ್ಗದ ಮೇಲೆ ನೆಟ್ಟಿದೆ. ಶಿಕಾರಿಪುರದಲ್ಲಿ ಚುನಾವಣೆ ಸಮರವು ತೀವ್ರ ಕಾವೇರಿದ್ದು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಂಗಾರಪ್ಪ ಅಖಾಡಕ್ಕಿಳಿದಿದ್ದಾರೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಕಣದಲ್ಲಿದ್ದರೆ, ಕುಮಾರ್ ಬಂಗಾರಪ್ಪ ಕುಟುಂಬದ ಭದ್ರಕೋಟೆ ಸೊರಬದ ಹಿಡಿತಕ್ಕಾಗಿ ಸ್ವಂತ ಸೋದರ ಮಧು ಬಂಗಾರಪ್ಪ ವಿರುದ್ಧ ಅಖಾಡಕ್ಕಿಳಿದಿದ್ದಾರೆ. ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಮತ್ತೆ ಅಗ್ನಿಪರೀಕ್ಷೆಗೆ ಸಜ್ಜಾಗಿದ್ದಾರೆ.
ಕ್ಷೇತ್ರಗಳ ಪುನರ್ವಿಂಗಡಣೆ ಬಳಿಕ ಬಳ್ಳಾರಿಯ ಹೂವಿನಹಡಗಲಿಯನ್ನು ಕಳೆದುಕೊಂಡ ಎಂ.ಪಿ.ಪ್ರಕಾಶ್ ದಾವಣಗೆರೆಯ ಹರಪನಹಳ್ಳಿಯಿಂದ ಸ್ಪರ್ಧೆಗಿಳಿದಿದ್ದಾರೆ. ಪ್ರಕಾಶ್ ಗಣಿ ದಣಿ, ಸಂಸದ ಜಿ.ಕರುಣಾಕರ್ ರೆಡ್ಡಿ ಅವರ ವಿರುದ್ಧ ನಿಂತಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ. |
| |
|
|
|
|
|
|
|