|
| 2ನೇ ಹಂತದ ಚುನಾವಣೆ: ಕೇಂದ್ರ ನಾಯಕರಿಂದ ಪ್ರಚಾರ |
| ಬೆಂಗಳೂರು, ಭಾನುವಾರ, 11 ಮೇ 2008 ( 13:50 IST ) | |
ಇದೇ ಶುಕ್ರವಾರದಂದು 10 ಜಿಲ್ಲೆಗಳ 66 ಕ್ಷೇತ್ರಗಳಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಈಗ ರಾಜಕೀಯ ಪಕ್ಷಗಳು ಎರಡನೇ ಹಂತದ ಚುನಾವಣಾ ಕ್ಷೇತ್ರಗಳತ್ತ ತಮ್ಮ ಗಮನ ಹರಿಸಿದೆ.
ರಾಯಚೂರು, ಬಳ್ಳಾರಿ, ಕೊಪ್ಪಳ, ಉತ್ತರಕನ್ನಡ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಮತದಾರರನ್ನು ಒಲೈಸಲು ಪಕ್ಷಗಳು ರಾಷ್ಟ್ರೀಯ ನಾಯಕರನ್ನು ಕರೆಸಿಕೊಂಡಿವೆ. ಇಂದು ಸಂಜೆ ದಾವಣಗೆರೆಗೆ ಆಗಮಿಸಲಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಾಗೆಯೇ ಕಾಂಗ್ರೆಸ್ ಪರ ಪ್ರಚಾರಕ್ಕಾಗಿ ಮಂಗಳವಾರ ರಾಜ್ಯಕ್ಕೆ ಆಗಮಿಸಲಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಳ್ಳಾರಿ ಹಾಗೂ ಕುಂದಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹರಪನಹಳ್ಳಿಯ ಕಾಂಗ್ರೆಸ್ ಅಭ್ಯರ್ಥಿ ಎಂ.ಪಿ. ಪ್ರಕಾಶ್ ಪರ ಪ್ರಚಾರಕ್ಕಾಗಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ನಾಳೆ ನಗರಕ್ಕೆ ಆಗಮಿಸಲಿದ್ದಾರೆ. ಅಲ್ಲದೆ, ಮಂಗಳೂರಿಗೂ ಅವರು ಭೇಟಿ ನೀಡುವ ಕಾರ್ಯಕ್ರಮವಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ. |
| |
|
|
|
|
|
|
|