|
| ಮತದಾರರ ಪಟ್ಟಿಯಲ್ಲಿ ಶಿವಣ್ಣನ ಹೆಸರೇ ಇಲ್ಲ!! |
| ಬೆಂಗಳೂರು, ಶನಿವಾರ, 10 ಮೇ 2008 ( 16:01 IST ) | |
ಕ್ಷೇತ್ರ ಮರುವಿಂಗಡಣೆಯನ್ನು ತರಾತುರಿಯಲ್ಲಿ ಮುಗಿಸಿದ ಪರಿಣಾಮ ಮೊದಲ ಹಂತದ ಮತದಾನ ಸಮಯದಲ್ಲೇ ಬಯಲಾಗಿದೆ. ಚಿತ್ರನಟ ಶಿವರಾಜ್ ಕುಮಾರ್ ಅವರ ಹೆಸರೇ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ಶಿವಣ್ಣ ಅವರಿಗೆ ಈ ಅನುಭವ ಆಗುತ್ತಿರುವುದು 2ನೇ ಬಾರಿ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 'ಆರು ತಿಂಗಳ ಹಿಂದೆಯೇ ತಾವು ನಿವಾಸ ಬದಲಿಸಿದ್ದರೂ ನಮ್ಮ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಇದಕ್ಕೆ ನಾನು ಸಂಬಂಧಿಸಿದ ಅಧಿಕಾರಿಯನ್ನು ಹೊಣೆ ಮಾಡುತ್ತೇನೆ. ಮುಂದಿನ ಬಾರಿ ಹೀಗಾಗದಂತೆ ನಾನೇ ಎಚ್ಚರಿಕೆ ವಹಿಸುತ್ತೇನೆ' ಎಂದು ತಮ್ಮ ಅಸಮಾಧಾನ ವ್ಯಕ್ಯಪಡಿಸಿದ್ದಾರೆ.
ಬೆಂಗಳೂರಿನ ಅನೇಕ ಕಡೆ ಮತದಾರರು ಮತ ಚಲಾಯಿಸಲು ಹೋದಾಗ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೆ ಕಂಗಾಲಾಗಿದ್ದಾರೆ. ಶನಿವಾರ ಮೊದಲ ಹಂತದ ಮತದಾನದ ವೇಳೆ ಬೆಂಗಳೂರಿನ ಮತಗಟ್ಟೆಗಳ ಬಳಿ ಕಂಡು ಬಂದ ಪ್ರತಿಭಟನೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.
ಚುನಾವಣಾ ಆಯೋಗವು ಲಕ್ಷಾಂತರ ಬೋಗಸ್ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳುತ್ತದೆ. ಆದರೆ ಅರ್ಹರನ್ನು ಪಟ್ಟಿಯಲ್ಲಿ ಸೇರಿಸದಿರುವುದರಿಂದ ಮತದಾನದ ಹಕ್ಕನ್ನು ಕಸಿದಂತಾಗಿದೆ.
ವಿದ್ಯಾಶಂಕರ್ ನಿರಾಕರಣೆ: ಶಿವರಾಜ್‌ಕುಮಾರ್ ಅವರ ಆರೋಪವನ್ನು ನಿರಾಕರಿಸಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿದ್ಯಾಶಂಕರ್, ಶಿವರಾ ಜ್ ಕುಮಾರ್ ಅವರ ಹೆಸರು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಅಲ್ಲಿ ಅವರು ಮತಚಲಾಯಿಸಲು ಅರ್ಹರು ಎಂದರು.
ಪಾರ್ವತಮ್ಮ ರಾಜ್ ಮತದಾನ: ಸದಾಶಿವ ನಗರದಲ್ಲಿ ವಾಸವಾಗಿರುವ ಪಾರ್ವತಮ್ಮ ರಾಜ್ಕುಮಾರ್ ತಮ್ಮ ಮತ ಚಲಾಯಿಸಿದರು. ಇವರ ಜತೆ ಪುತ್ರ ರಾಘವೇಂದ್ರ ರಾಜ್ಕುಮಾರ್ ಕೂಡ ಮತ ಚಲಾಯಿಸಿದರು.ಈ ವರೆಗೆ ರಾಜ್ಯದಲ್ಲಿ ಶೇಕಡಾ 41ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ |
| |
|
|
|
|
|
|
|