|
| ಎರಡನೆ ಬಾರಿ ಕೈ ಕೊಟ್ಟ ಮತಯಂತ್ರ, ಘೇರಾವ್ |
| ಮೈಸೂರು, 10 ಮೇ 2008 ( 13:33 IST ) | |
ರಾಜ್ಯದಲ್ಲಿ ಮತದಾನ ನಡೆಯುತ್ತಿದೆ. ಒಂದೆಡೆ ರಾಜಕೀಯ ಪಕ್ಷಗಳು ಅಕ್ರಮ ಆಮಿಷಗಳನ್ನು ಒಡ್ಡಿ ಗೊಂದಲ ಸೃಷ್ಟಿಸಿದರೆ ಮತ್ತೊಂದೆಡೆ ಮತದಾನ ಯಂತ್ರಗಳು ಕೆಟ್ಟು ಗೊಂದಲ ಸೃಷ್ಟಿ ಮಾಡುತ್ತಿವೆ. ಇದರಿಂದ ಪದೇ ಪದೇ ಪಕ್ಷದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ.
ಕೃಷ್ಣರಾಜಸಾಗರದ ಬೂತ್ ನಂ.109ರಲ್ಲಿ ಮತಯಂತ್ರ ಎರಡನೇ ಬಾರಿ ಕೈ ಕೊಟ್ಟಿದೆ. ಮೊದಲ ಬಾರಿಗೆ ಮತಯಂತ್ರ ಕೈಕೊಟ್ಟು ಸುಮಾರು ಒಂದು ಗಂಟೆಯಷ್ಟು ಕಾಲ ಮತದಾನ ಸ್ಥಗಿತವಾಯಿತು. ಅದರೆ ಮತ್ತೆ ಮತಯಂತ್ರ ಕೈಕೊಟ್ಟ ಕಾರಣ ತಾಳ್ಮೆ ಕಳೆದುಕೊಂಡ ಸಾರ್ವನಿಕರು ಚುನಾವಣಾಧಿಕಾರಿಗೆ ಘೇರಾವ್ ಹಾಕಿದ್ದಾರೆ.
ಎರಡನೇ ಬಾರಿ ಮತಯಂತ್ರ ಕೈಕೊಟ್ಟು ಅದನ್ನು ಬದಲಾಯಿಸುವ ಹೊತ್ತಿಗೆ ಮತ್ತೊಂದು ಗಂಟೆ ಮತದಾನಕ್ಕೆ ತೊಡಕ್ಕುಂಟಾಯಿತು. ಇದರಿಂದ ಸಿಟ್ಟುಗೊಂಡ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮತಯಂತ್ರ ಕೆಟ್ಟಿದ್ದರಿಂದ ಸುಮಾರು ಎರಡು ಗಂಟೆಯಷ್ಟು ಕಾಲ ತಡವಾಗಿದೆ. ಆದ್ದರಿಂದ ಮತದಾನದ ಸಮಯವನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮತಯಂತ್ರವನ್ನು ಬದಲಿಸಿದರು.
ಸಣ್ಣಪುಟ್ಟ ಗೊಂದಲಗಳನ್ನು ಬಿಟ್ಟರೆ ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಈವರೆಗೆ ಶೆ.22 ರಷ್ಟು ಮತದಾನವಾಗಿದ್ದು, ಕೊಡಗು ಶೆ 17, ಕೋಲಾರ ಶೆ.17, ಮೈಸೂರು ಶೆ.16, ಮಂಡ್ಯ ಶೆ.17, ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ |
| |
|
|
|
|
|
|
|