|
| ಈ ಬಾರಿಯೂ ನಾನೇ ಕಿಂಗ್: ಕುಮಾರಸ್ವಾಮಿ |
| ಬೆಂಗಳೂರು, 10 ಮೇ 2008 ( 12:35 IST ) | |
ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ಸಿಗುವುದರ ಜೊತೆಗೆ ಜೆಡಿಎಸ್ ಗದ್ದುಗೆ ಏರಲಿದೆ ಎಂದ ಮಾಜಿ ಮುಖ್ಯಮಂತ್ರಿ ಎಚ್.ಕುಮಾರಸ್ವಾಮಿ, ಈ ಬಾರಿಯೂ ನಾನೇ ಕಿಂಗ್ ಎಂದಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯಾದ್ದರಿಂದ ಮಾಗಡಿ ಕ್ಷೇತ್ರದ ಅಭ್ಯರ್ಥಿ ಪರ ಕೇತಗಾನಹಳ್ಳಿಯಲ್ಲಿ ಮತಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಮಾಧ್ಯಮಗಳು ಪಕ್ಷನಿಷ್ಠವಾಗಿ ಸಮೀಕ್ಷೆ ನಡೆಸಿದೆ.
ಇವು ಕಾಂಗ್ರೆಸ್, ಬಿಜೆಪಿಗೆ ಹೆಚ್ಚು ಸೀಟು ಬಂದು ಜೆಡಿಎಸ್‌ಗೆ 15-18 ಸೀಟುಗಳು ದೊರಕುತ್ತದೆ ಎಂದಿದೆ. ಇವೆಲ್ಲವೂ ಒಂದೊಂದು ಪಕ್ಷದ ಪರವಾಗಿದೆ. ಆದರೆ ನಮಗೆ ವಿಶ್ವಾಸವಿದೆ. ರಾಜ್ಯದಲ್ಲಿ ಪ್ರವಾಸ ಮಾಡಿದ ನಾನು ಜೆಡಿಎಸ್‌ನ ಪ್ರಬಲ ಅಲೆಯನ್ನು ಕಂಡಿದ್ದೇನೆ ಎಂದರು.
ಬಿಜೆಪಿ, ಕಾಂಗ್ರೆಸ್ ಪಕ್ಷದ ರಾಷ್ಟ್ರಮಟ್ಟದ ಧುರೀಣರು, ಸಿನಿಮಾ ಸ್ಟಾರ್‌ಗಳು ಬಂದು ಪ್ರಚಾರ ಮಾಡಿದ್ದಾರೆ ಇದರಿಂದ ನೀವು ಹಾಗೂ ದೇವೇಗೌಡರು ಧೃತಿಗೆಟ್ಟಿಲ್ಲವೇ ಎಂಬ ಪ್ರಶ್ನೆಗೆ, ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಜನರಿಗಾಗಿರುವ ಪಕ್ಷ. ಬೇರೆ ಪಕ್ಷಗಳ ಸ್ಟಾರ್ ಪ್ರಚಾರ ಯಾವುದೇ ಪ್ರಭಾವ ಬೀರುವುದಿಲ್ಲ. ದೇವೇಗೌಡರು ಕೂಡಾ ಪಕ್ಷ ಬಹುಮತ ಗಳಿಸುವ ವಿಶ್ವಾವಿದೆ ಹೊಂದಿದ್ದಾರೆ. ಈ ಬಾರಿಯು ಜೆಡಿಎಸ್ ಆಡಳಿತರೂಢ ಪಕ್ಷವಾಗಲಿದ್ದು, ನಾನು ಕಿಂಗ್ ಆಗಲಿದ್ದೇನೆ ಎಂದರು.
ಕಾಂಗ್ರೆಸ್ಸಿಗರು ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿ ನನ್ನನ್ನು ಸೋಲಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಕುಮಾರಣ್ಣನನ್ನು ಜನ ಮೆಚ್ಚಿದ್ದಾರೆ. ಅವರೇ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ |
| |
|
|
|
|
|
|
|