|
| ಶಿಕ್ಷಕನ ಮೇಲೆ ಪೊಲೀಸ್ ದೌರ್ಜನ್ಯ. ಧರಣಿ |
| ಬೆಂಗಳೂರು, ಶನಿವಾರ, 10 ಮೇ 2008 ( 12:04 IST ) | |
ಪೊಲೀಸರ ದೌರ್ಜನ್ಯ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಈ ಬಾರಿ ಚುನಾವಣೆಗೆ ನಿಯೋಜಿತನಾದ ಶಿಕ್ಷಕನ ಮೇಲೆ ಪೊಲೀಸರು ಕೈ ಮಾಡಿದ್ದಾರೆ. ಭತ್ಯೆ ವಿಷಯದಲ್ಲಿ ಶಿಕ್ಷಕ ಹಾಗೂ ಪೊಲೀಸ್ ಅಧಿಕಾರಿ ನಡುವೆ ವಾಗ್ವಾದ ನಡೆದು ಪೊಲೀಸ್ ಅಧಿಕಾರಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದರಿಂದ ಚುನಾವಣೆಗೆ ನಿಯೋಜಿತರಾದ ಅನೇಕ ಶಿಕ್ಷಕರು ಶುಕ್ರವಾರ ಸಂಜೆ ಧರಣಿ ನಡೆಸಿದ್ದಾರೆ.
ಶುಕ್ರವಾರ ರಾಮನಗರ ಶಾಲೆಯ ಆವರಣದಲ್ಲಿ ಮತಗಟ್ಟೆಗೆ ತೆರಳಬೇಕಾಗಿದ್ದ ಶಿಕ್ಷಕರು ನೆರೆದಿದ್ದರು. ಆದರೆ ಶಿಕ್ಷಕ ಶಿವರಾಜು ಎಂಬವರು ರಾಮನಗರ ಜಿಲ್ಲೆಯ ಇತರೆ ವಿಧಾನಸಭೆ ಕ್ಷೇತ್ರಗಳಿಗೆ ನಿಯೋಜಿತರಾಗಿರುವ ಶಿಕ್ಷಕರಿಗೆ ಚುನಾವಣಾ ಭತ್ಯೆಯೆಂದು 550 ರೂ.ನೀಡಲಾಗುತ್ತದೆ. ಆದರೆ ನಮಗೆ ಮಾತ್ರ 500 ರೂ. ಯಾಕೆ ಎಂದು ಚುನಾವಣಾ ಅಧಿಕಾರಿ ಜೊತೆ ಮಾತಿಗಿಳಿದರು.
ಆದರೆ ಅಧಿಕಾರಿ, ಈ ವಿಷಯವನ್ನು ಚರ್ಚೆ ಮಾಡಲು ಈಗ ಅವಕಾಶವಿಲ್ಲ, ನೀವು ಕೂಡಲೇ ಹೊರಡಿ ಎಂದರು. ಆದರೆ ಶಿವರಾಜು ಮಾತು ಮುಂದುವರೆಸಿದರು. ಆದರೆ ಶಿವರಾಜು ಅವರನ್ನು ಹೊರಕಳುಹಿಸಲು ಡಿವೈಎಸ್ಪಿ ದೇವರಾಜು ಯತ್ನಿಸಿದಾಗ ಅವರೊಂದಿಗೂ ವಾಗ್ವಾದ ಮುಂದುವರೆಸಿದಾಗ ಶಿವರಾಜು ಅವರ ಮೇಲೆ ಡಿವೈಎಸ್ಪಿ ದೇವರಾಜು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ |
| |
|
|
|
|
|
|
|