|
| ಅಳಿವು ಉಳಿವಿನ ಹೋರಾಟಕ್ಕೆ ಸಜ್ಜು |
| ನವದೆಹಲಿ(ಏಜೆನ್ಸಿ), 9 ಮೇ 2008 ( 17:07 IST ) | |
ಕರ್ನಾಟಕ ರಾಜಕೀಯದಲ್ಲಿ ವಂಶಪಾರಂಪರ್ಯ ಆಡಳಿತಕ್ಕೆ ನಾಂದಿ ಹಾಡಿದ ದೇವೇಗೌಡರ ಕುಟುಂಬ ಈಗ ಅಳಿವುಉಳಿವಿನ ಹೋರಾಟಕ್ಕೆ ಸಜ್ಜಾಗಿದೆ. ಅನೇಕ ಹಿರಿಯ ರಾಜಕಾರಣಿಗಳು ಪಕ್ಷವನ್ನು ತ್ಯಜಿಸಿ ಗುಳೇಹೋದ ಬಳಿಕ ಹೇಳಿಕೊಳ್ಳುವಂತಹವರು ಯಾರೂ ಜೆಡಿಎಸ್‌ನಲ್ಲಿ ಉಳಿದಿಲ್ಲ. ಈಗ ಗೌಡರ ಮಕ್ಕಳಾದ ಕುಮಾರಸ್ವಾಮಿ ಮತ್ತು ರೇವಣ್ಣ ಅವರದ್ದೇ ಪಾರುಪತ್ಯ. ಕುಮಾರಸ್ವಾಮಿ ಅಪಾರ ಜನರನ್ನು ಸೆಳೆಯುತ್ತಿದ್ದು ಅಭಿವೃದ್ಧಿಯ ಮಂತ್ರವನ್ನು ಪಠಿಸಿ ಪ್ರಚಾರಕ್ಕೆ ಕಳೆಕಟ್ಟುತ್ತಿದ್ದಾರೆ.
ರಾಜಕೀಯ ಪ್ರಸ್ತುತತೆಗೆ ಇದೊಂದು ನಿರ್ಣಾಯಕ ಆಟ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಜಾತ್ಯತೀತ ಜನತಾದಳ 25 ಸೀಟುಗಳಿಗಿಂತ ಕಡಿಮೆ ಗಳಿಸಿದರೆ, ದೊಡ್ಡ ಪಕ್ಷಗಳ ಕೈತಿರುಚುವುದು ಕಷ್ಟಸಾಧ್ಯ ಎನ್ನುವ ಅರಿವು ಜೆಡಿಎಸ್‌ಗಿದೆ. ಕುಮಾರಸ್ವಾಮಿ ದಿಟ್ಟೆದೆಯಿಂದ ಸ್ವತಃ ಬಹುಮತ ಗಳಿಸುತ್ತೇವೆಂಬ ವಿಶ್ವಾಸ ತಾಳಿದ್ದಾರೆ.
ಗೌಡರ ಕಾರ್ಯಕ್ಷೇತ್ರವಾದ ಹಾಸನ ಜಿಲ್ಲೆಯಲ್ಲಿ ರೇವಣ್ಣ ಒಕ್ಕಲಿಗರ ಭಾವನೆಗಳೊಂದಿಗೆ ಆಟವಾಡುತ್ತಾರೆ.ಗೌಡರ ರಾಜಕೀಯ ಕಣಕ್ಕೆ ದುಮುಕಿದ್ದು ಹಾಸನದಲ್ಲಿಯೇ. ಇಂದಿಗೂ ಹಾಸನದಲ್ಲಿ ಗೌಡರ ಸಮುದಾಯ ಅವರ ಬಗ್ಗೆ ದೈವೀಭಾವನೆ ಇರಿಸಿಕೊಂಡಿದೆ. ರೇವಣ್ಣ ಕೂಡ ಜೆಡಿಎಸ್ ಸ್ವಂತಬಲದಿಂದ ಬಹುಮತ ಸಾಧಿಸುತ್ತದೆ ಎಂದು ಹೇಳುತ್ತಿದ್ದಾರೆ.
ಆದರೆ ರಾಜಕೀಯ ಗರಡಿಯಲ್ಲಿ ಪಳಗಿರುವ ದೇವೇಗೌಡರು ಈ ಬಾರಿ ತಮ್ಮ ಪಕ್ಷವು ನಿರ್ಣಾಯಕ ಪಾತ್ರ ವಹಿಸುತ್ತದೆಂದು ಹೇಳಿದ್ದಾರೆ. ದೊಡ್ಡ ಪಕ್ಷಗಳಾದ ಬಿಜೆಪಿ ಅಥವಾ ಕಾಂಗ್ರೆಸ್ ಆಗಮನಕ್ಕಾಗಿ ತಾವು ಕಾಯುವುದಾಗಿ ಅವರು ನುಡಿದರು. ನಮ್ಮಿಂದ ಬೆಂಬಲ ಪಡೆಯಲು ಹೇಗೆ ಸಂಪರ್ಕಿಸುತ್ತಾರೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದು ಅವರು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ ಮತ್ತು ಹೆಜ್ಜೆಗಳ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತವೆ. ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ ಮತ್ತು ಮಹತ್ವದ ಕೆಲಸವೊಂದು ಪೂರ್ಣಗೊಳ್ಳಲಿದೆ. ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಗಳಿಸುತ್ತೀರಿ. ನೀವೀಗ ಮನಸ್ಸಿನ ಆಶಾವಾದಿ ಚೌಕಟ್ಟಿನಲ್ಲಿದ್ದೀರಿ, ಆದರೆ ಸುವಸ್ತುಗಳಿಗಾಗಿ ನೀವು ದುಂದುವೆಚ್ಚಕ್ಕೆ ಮುಂದಾಗುವ ಸಾಧ್ಯತೆಗಳಿವೆ. |
| |
|
|
|
|
 | | pti |
| | |
| |
|
|
|
|
|
| ಚಿತ್ರ ಸುದ್ದಿ - ಕೆಲವು ನಟರು ಕನ್ನಡದಿಂದ ಪರಭಾಷಾ ಚಿತ್ರಕ್ಕೆ ನಟಿಸಲು ಹೋದರೆ ಮತ್ತೆ ಕನ್ನಡಕ್ಕೆ ಬರುವುದಿಲ್ಲ. ಉತ್ತಮ ಅವಕಾಶಗಳು ಅಲ್ಲಿ ಸಿಕ್ಕರೆ ಮತ್ತೆ ಅವರು ಕನ್ನಡಕ್ಕೆ ಬರುವುದಿಲ್ಲ. ಉದಾಹರಣೆಗೆ ನಮ್ಮ ಪ್ರಕಾಶ್ ರೈ. ಈಗ ಈ ಸಾಲಿಗೆ ನಮ್ಮ ಸುದೀಪ್ ಸೇರುತ್ತಾರೋ ಎಂಬ ಭಯ ಕನ್ನಡಿಗರನ್ನು ಕಾಡುತ್ತಿದೆ. |
| |
|
|
|
|
|
|
|