|
| ಹಂಸಲೇಖಾರ ದೇಸೀ ಹಬ್ಬಕ್ಕೆ ನಾಳೆ ಸಡಗರದ ತೋರಣ |
| ಬೆಂಗಳೂರು, 28 ಮಾರ್ಚ್ 2008 ( 18:20 IST ) | |
ಗ್ರಾಂಥಿಕವಾಗಿದ್ದ ಕನ್ನಡ ಚಿತ್ರಗೀತೆಗಳಿಗೆ ನವೋನ್ಮಾದದ ಸ್ಪರ್ಶ ನೀಡಿ ಚಿತ್ರಪ್ರೇಮಿಗಳಲ್ಲಿ ಮಿಂಚಿನ ಸಂಚಾರವನ್ನು ಮೂಡಿಸಿದವರು ಚಿತ್ರಸಾಹಿತಿ ಮತ್ತು ಸಂಗೀತ ನಿರ್ದೇಶಕ ಹಂಸಲೇಖಾ.
ರವಿಚಂದ್ರನ್‌ರವರ ಸಾಂಗತ್ಯದಲ್ಲಿ ಹಲವು ಹನ್ನೊಂದು ಹಾಡುಗಳ ಮಿಂಚಿನ ಬಳ್ಳಿಗಳನ್ನು ಕನ್ನಡ ಚಿತ್ರೋದ್ಯಮವೆಂಬ ಮರಕ್ಕೆ ಹಬ್ಬಿಸಿರುವ ಹಂಸಲೇಖಾರಿಗೆ ದೇಸೀ ಪ್ರಜ್ಞೆ ಹಾಗೂ ದೇಸೀ ಸಂಗೀತವೆಂದರೆ ಪಂಚಪ್ರಾಣ. ಈ ಹಿನ್ನೆಲೆಯಲ್ಲಿ ಅವರು ಪ್ರಾರಂಭಿಸಿದ್ದು ದೇಸೀ ಸಂಗೀತ ಶಾಲೆ. ಇದರ ಎರಡನೇ ವಾರ್ಷಿಕೋತ್ಸವ ಸಮಾರಂಭ ನಾಳೆ (ಶನಿವಾರ) ಸಂಜೆ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.
ಕಳೆದ ಬಾರಿಯ ಸಮಾರಂಭದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಗಾನಸುಧೆಯನ್ನು ಹರಿಸಿದ್ದರು. ಈ ಬಾರಿ ಮತ್ತೊಬ್ಬ ಖ್ಯಾತ ಹಿನ್ನೆಲೆ ಗಾಯಕಿ ಮಾದಕ ದನಿಯ ಮಾಲ್ಗುಡಿ ಶುಭಾರವರು ಸಮಾರಂಭಕ್ಕೆ ಆಗಮಿಸಿ ಕಳೆ ಕಟ್ಟಲಿದ್ದಾರೆ. ಕಳೆದ ಬಾರಿ ದೇಸೀ ಹಬ್ಬ ನಡೆದಾಗ ಕಚ್ಚೆ ಪಂಚೆ ಉಟ್ಟು, ಮುಂಡಾಸು ತೊಟ್ಟು, ತಮಟೆ ಬಾರಿಸಿದ್ದರು ಹಂಸಲೇಖಾ. ಈ ಬಾರಿ ಯಾವ ದೇಸೀ ದಿರಿಸಿನಲ್ಲಿ ಮಿಂಚಲಿದ್ದಾರೋ ನೋಡಬೇಕು!!
ಶೀನೀನಾ ಭಗವಂತಾ, ಜಗಕುಪಕರಿಸಿ ನನಗಪಕರಿಸೋ ಜಗದೋದ್ದಾರಕ ನೀನೇನಾ ಎಂಬ ಗೀತೆಯನ್ನು ತ್ರಿವೇಣಿ ಚಿತ್ರಕ್ಕಾಗಿ ರಚಿಸಿದ ಹಂಸಲೇಖಾ ಅದಾದ ನಂತರ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದರು. ನಾನು ನನ್ನ ಹೆಂಡ್ತಿ ಚಿತ್ರದಲ್ಲಿ ಯಾರೇ ನೀನು ಚೆಲುವೆ ಹಾಡಿನಿಂದ ಖ್ಯಾತರಾದ ಹಂಸಲೇಖಾ ಪ್ರೇಮಲೋಕ ಚಿತ್ರದ ನಂತರ ತಿರುಗಿ ನೋಡಲಿಲ್ಲ. ಆದರೂ ಸಹ ಚಿತ್ರೋದ್ಯಮದವರ ಕೆಲವೊಂದು ಪೂರ್ವಗ್ರಹ ಪೀಡಿತ ನಡವಳಿಕೆಗಳು ಅವರಲ್ಲಿ ಬೇಸರ ಹುಟ್ಟಿಸಿದ್ದರಿಂದ ತಮ್ಮದೇ ಆದ ದೇಸೀ ಸಂಗೀತ ಶಾಲೆಯೊಂದನ್ನು ಹಂಸಲೇಖಾ ಸ್ಥಾಪಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಮಿಲನ ಚಿತ್ರದ ಯಶಸ್ವಿ ಜೋಡಿಗಳಾದ ನಟ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಪ್ರಕಾಶ್ ಮತ್ತೊಮ್ಮೆ ಜೊತೆಯಾಗಿದ್ದಾರೆ. ಹೋಂ ಪ್ರೊಡಕ್ಷನಿನಲ್ಲಿ ನಿರ್ಮಾಣವಾಗುತ್ತಿರುವ ವಂಶಿ ಚಿತ್ರದಲ್ಲಿ ಅವರು ಮತ್ತೊಮ್ಮೆ ಫ್ಯಾಮಿಲಿ ಹುಡುಗನಾಗಿ ಅಭಿನಯಿಸಲಿದ್ದಾರೆ. |
| |
|
|
|
|
|
|
|