|
| ಮಹಿಳಾ ಮಣಿಗಳಿಗೆ ಮಣೆ: ಯಡಿಯೂರಪ್ಪ |
| ಬೆಂಗಳೂರು, 28 ಮಾರ್ಚ್ 2008 ( 18:16 IST ) | |
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಇಂದು (ಶುಕ್ರವಾರ) ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೂರಾರು ಮಹಿಳಾ ಕಾರ್ಯಕರ್ತರನ್ನು ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ದಿನಾಂಕ ಘೋಷಣೆಯಾದ ಎರಡು ದಿನಗಳಲ್ಲಿ ಬಿಜೆಪಿ ಚುನಾವಣಾ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗುವುದು. ಹಾಗೆಯೇ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರಕಟಿಸಿರುವ ಭಾಗ್ಯಲಕ್ಷ್ಮೀ ಯೋಜನೆಯನ್ನು 1ಲಕ್ಷ ಮಹಿಳೆಯರಿಗೆ ವಿಸ್ತರಿಸಬೇಕೆಂದು ತಿಳಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಪಕ್ಷದ ನಾಯಕರಿಗಿಂತ ಕಾರ್ಯಕರ್ತರ ಅಭಿಪ್ರಾಯಗಳಿಗೆ ಹೆಚ್ಚಿನ ಮಹತ್ವ ನೀಡುವುದಾಗಿ ತಿಳಿಸಿದರು.
ಮಾಜಿ ಸಚಿವ, ಶಾಸಕರ ಸೇರ್ಪಡೆ ಕಾಂಗ್ರೆಸ್ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಮಹದೇವು ಅವರು ಶುಕ್ರವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು. ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದ ಬೇಸತ್ತು ಕಾಂಗ್ರೆಸ್ ತೊರೆದಿರುವುದಾಗಿ ಅವರು ತಿಳಿಸಿದರು. ಅಲ್ಲದೆ, ಮಾಜಿ ಸಚಿವರಾದ ವಿರೂಪಾಕ್ಷ ಅಗಡಿ, ಮಾಜಿ ಶಾಸಕರುಗಳಾದ ರಾಜಣ್ಣ ಮಾಮನಿ, ಭೀಮಸಿ ಜಾರಕಿಹೊಳೆ, ರಾಮಕೃಷ್ಣ ದೊಡ್ಡಮಣಿಯವರು ಕೂಡ ಬಿಜೆಪಿ ಸೇರ್ಪಡೆಗೊಂಡರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ ಮತ್ತು ಹೆಜ್ಜೆಗಳ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತವೆ. |
| |
|
|
|
|
 | | ap |
| | |
| |
|
|
|
|
|
| ಚಿತ್ರ ಸುದ್ದಿ - ಕೊಬ್ರಿ ಮಂಜು ಅಲಿಯಾಸ್ ಕೆ.ಮಂಜು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ವತಿಯಿಂದ ಚುನಾವಣೆಗೆ ನಿಲ್ಲಲು ಬಯಸಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಚುನಾವಣೆ ಅಂದ್ರೆ ಖಾದಿ ಹಾಕಲೇಬೇಕಲ್ವಾ? ಯಾವುದಕ್ಕೂ ಪಕ್ಷದ ವರಿಷ್ಠರು ತೀರ್ಮಾನಿಸಬೇಕಷ್ಟೇ. |
| |
|
|
|
|
|
|
|